Breaking News
Home / Breaking News (page 5)

Breaking News

ಖಾನಾಪೂರದಲ್ಲಿ ಸಿಎಂ ಎದುರು, ಹತ್ತು ಜನ ಆಕಾಂಕ್ಷಿಗಳು ಸಾಲಿನಲ್ಲಿ ನಿಂತ್ರು….!!

ಖಾನಾಪುರ ಕ್ಷೇತ್ರದಲ್ಲಿ ಕಮಲ ಅರಳಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಮಾಣ ಮಾಡಿಸುವ ಅಸ್ತ್ರ ಪ್ರಯೋಗಿಸಿ ಭಿನ್ನಮತ ಶಮನ ಮಾಡುವ ಪ್ರಯತ್ನ ಮಾಡಿದ್ದಾರೆ. ನಿನ್ನೆ ಖಾನಾಪೂರದಲ್ಲಿ ಬಿಜೆಪಿಯ ಜನ ಸಂಕಲ್ಪ ಯಾತ್ರೆ ನಡೆಯಿತು ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ , ಖಾನಾಪೂರದಲ್ಲಿ ಜೇಣು ಉತ್ಪಾದನಾ ಕೇಂದ್ರ,ಹಾಸ್ಟೇಲ್ ಗಳ ನಿರ್ಮಾಣ, ಮಹಾದಾಯಿ,ಕಳಸಾ ಬಂಡೂರಿಗೆ ಗ್ರೀನ್ ಸಿಗ್ನಲ್ ಸಿಕ್ಕ ಮೇಲೆ ಬಾಂಧಾರಗಳ ನಿರ್ಮಾಣಕ್ಕೆ ಅನುದಾನ,ಖಾನಾಪೂರ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಸೇರಿದಂತೆ …

Read More »

ತೆಂಡೂಲ್ಕರ್ ಚಹಾ ಕುಡಿದು ಹೋದ್ಮೇಲೆ, ವ್ಯಾಪಾರ ಡಬಲ್ ಆಗಿದೆ…..!!!!

ಬೆಳಗಾವಿ- ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಬೆಳಗಾವಿಯ ಮಜಗಾವಿಯಲ್ಲಿ ಗೋವಾ ರಸ್ತೆಯ ಪಕ್ಕದಲ್ಲೇ ಇರುವ ಗೂಡಂಗಡಿಯಲ್ಲಿ ಚಹಾ ಕುಡಿದು ಹೋದ ಮೇಲೆ ಈ ಅಂಗಡಿಯ ವ್ಯಾಪಾರವೂ ದುಪ್ಪಟ್ಟಾಗಿದೆ. ಸಚಿನ್ ತೆಂಡೂಲ್ಕರ್ ಅವರು ಕುಟುಂಬ ಸಮೇತ ಕೊಲ್ಹಾಪೂರದ ನರಸಿಂಹವಾಡಿಗೆ ಹೋಗಿದ್ರುಅಲ್ಲಿಂದ ಅವರು ಬೆಳಗಾವಿ ಮಾರ್ಗವಾಗಿ ಗೋವಾಕ್ಕೆ ಹೋಗುವಾಗ ಬೆಳಗ್ಗೆ 8-00 ಗಂಟೆ ಸುಮಾರಿಗೆ ಮಜಗಾವಿಯ ಗೂಡಂಗಡಿಯಲ್ಲಿ ಚಹಾ ಸವಿದು ಎಂಜಾಯ್ ಮಾಡಿದ್ಸರು.ಅವರು ಈ ಅಂಗಡಿಯಲ್ಲಿ ಡಬಲ್ ಚಹಾ ಕುಡಿದು ಹೋದ …

Read More »

ವಿಷಾಧಿಸಿ ಹೇಳಿಕೆ ಹಿಂಪಡೆದ ಸತೀಶ್ ಜಾರಕಿಹೊಳಿ….

ಬೆಳಗಾವಿ: ಹಿಂದೂ ಶಬ್ದದ ಬಗ್ಗೆ ವಿವಾದಿತ ಹೇಳಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದೆ ಪಡೆದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ‘ನಿಪ್ಪಾಣಿ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ ಆ ಒಂದು ಮಾತು ವಿವಾದಕ್ಕೀಡಾಗಿದೆ. ಅಲ್ಲದೇ ಅದನ್ನು ತಿರುಚಿ ಅಪಪ್ರಚಾರಗೊಳಿಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಬಾರದು ಎಂಬ ಸದುದ್ದೇಶದಿಂದ ಅಂದು ನಾನು ಹೇಳಿದ್ದ ಆ ಹೇಳಿಕೆ ಹಿಂದೆ ಪಡೆಯುತ್ತಿದ್ದೇನೆ. ಆ ಹೇಳಿಕೆಯಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಲ್ಲಿ …

Read More »

ಹುಡಗಿಯನ್ನು ಚುಡಾಯಿಸಿದವನಿಗೆ ಬುದ್ದಿ ಹೇಳಲು ಹೋದ ನಾಲ್ವರಿಗೆ ಚಾಕು ಇರಿತ

ಬೆಳಗಾವಿ-ಬಾಲಕಿಯನ್ನ ಚೂಡಾಯಿಸಿದ್ದನ್ನ ಪ್ರಶ್ನಿಸಿದ್ದಕ್ಕೆ ಚಾಕು ಇರಿತ.ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ನಿನ್ನೆ ಸಂಜೆ ಬಾಲಕಿಯನ್ನ ಚೂಡಾಯಿಸಿದ್ದಕ್ಕೆ ಪ್ರಶ್ನಿಸಲು ಹಿರಿಯ ಸಮೇತ ಬಾಲಕಿ ತಂದೆ ಹುಡುಗನ ಮನೆಗೆ ಹೋಗಿದ್ದರು.ಈ ವೇಳೆ 17ವರ್ಷದ ಬಾಲಕ ಹಾಗೂ ಆತನ ಸ್ನೇಹಿತರಿಂದ ಬುದ್ದಿ ಹೇಳಲು ಹೋದವರ ಮೇಲೆ ಹಲ್ಲೆ ಮಾಡಿದ್ದಾನೆ.*ಜಗಳ ವಿಕೋಪಕ್ಕೆ ತಿರುಗಿ ಬುದ್ದಿ ಹೇಳಲು ಹೋದ ನಾಲ್ವರಿಗೆ ಚಾಕು ಇರಿತ,ಆಗಿದ್ದು ಓರ್ವನ ಮೇಲೆ ಹಲ್ಲೆ …

Read More »

ಲಕ್ಷ್ಮೀ ಹೆಬ್ಬಾಳಕರ,ಚನ್ನರಾಜ್ಹಟ್ಟಿಹೊಳಿ ಬಿಜೆಪಿ ಸೇರ್ತಾರೆ- ಸಂಜಯ ಪಾಟೀಲ

ಲಕ್ಷ್ಮೀ ಹೆಬ್ಬಾಳಕರ,ಚನ್ನರಾಜ್ ಬಿಜೆಪಿ ಸೇರ್ತಾರೆ ಎನ್ನುವ ಸುದ್ದಿ ಇದೆ- ಸಂಜಯ ಪಾಟೀಲ ಬೆಳಗಾವಿ-ಬಿಜೆಪಿ ಉದಯಿಸುವ ಸೂರ್ಯ,ಕಾಂಗ್ರೆಸ್ ಮುಳುಗುವ ಹಡಗು, ಉದಯಿಸುವ ಸೂರ್ಯನನ್ನು ಎಲ್ಲರೂ ನಮಸ್ಕಾರ ಮಾಡ್ತಾರೆ,ಮುಳುಗುವ ಹಡಗನ್ನು ಯಾರೂ ಹತ್ತುವದಿಲ್ಲ,ಲಕ್ಷ್ಮೀ ಹೆಬ್ಬಾಳಕರ ಮತ್ತು ಚನ್ನರಾಜ್ ಹಟ್ಟಿಹೊಳಿ ಇಬ್ಬರೂ ಬಿಜೆಪಿ ಸೇರ್ತಾರೆ ಎನ್ನುವ ಸುದ್ದಿ ಇದೆ.ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಮಾಜಿ ಶಾಸಕ ಸಂಜಯ ಪಾಟೀಲ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಜಯ ಪಾಟೀಲ,ಲಕ್ಷ್ಮೀ ಹೆಬ್ಬಾಳಕರ …

Read More »

ಕ್ರಾಂತಿ ನೆಲದ ಮಣ್ಣು ಪಡೆಯಲು ಕಿತ್ತೂರಿಗೆ ಆಗಮಿಸಿದ ನಾಲ್ಕು ಜನ ಮಂತ್ರಿಗಳು…

ಬೆಳಗಾವಿ- ಸಚಿವರುಗಳಾದ ಅರಗ ಜ್ಞಾನೇಂದ್ರ,ಆರ್ ಅಶೋಕ,ಅಶ್ವತ್ಥ ನಾರಾಯಣ,ಹಾಗು ಸಚಿವ ನಾರಾಯಣಗೌಡ ಅವರು ಇಂದು ಬೆಳಗ್ಗೆ ಬೆಳಗಾವಿಯ ಸುವರ್ಣ ವಿಧಾನಸೌಧದ ಹೆಲಿಪ್ಯಾಡ್ ನಲ್ಲಿ ಬಂದಿಳಿದು ಕಿತ್ತೂರಿಗೆ ತೆರಳಿ ವೀರರಾಣಿ ಚನ್ನಮ್ಮಾಜಿಯ ಕ್ರಾಂತಿಯ ನೆಲದ ಮಣ್ಣು ತೆಗೆದುಕೊಂಡು ಹೋದರು. ಈ ಪುಣ್ಯ ಭೂಮಿಯ ಮಣ್ಣನ್ನು ಬೆಂಗಳೂರಿನಲ್ಲಿ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೆಗೌಡರ ಮೂರ್ತಿಯ ಪ್ರತಿಷ್ಠಾನೆ ಬಳಕೆ ಮಾಡಲಿದ್ದಾರೆ.ಬೆಳಗಾವಿಯ ಸುವರ್ಣಸೌಧದ ಬಳಿ ಮಾದ್ಯಮಗಳ ಜೊತೆ ಮಾತನಾಡಿದ,ಗೃಹ ಸಚಿವ ಅರಗ ಜ್ಞಾನೇಂದ್ರ ಕೆಂಪೇಗೌಡರ 108 ಅಡಿಯ ಪ್ರತಿಮೆ …

Read More »

ಅಪ್ಪು ಭಾವಚಿತ್ರ ಹಿಡಿದು ಸಂಭ್ರಮಿಸಿದ-ಜಾರಕಿಹೊಳಿ

ಬೆಳಗಾವಿ-ಕನ್ನಡ ರಾಜ್ಯೋತ್ಸವ ನಿಮಿತ್ತ ಮೂಡಲಗಿಯಲ್ಲಿ ನಡೆದ ಸಿರಿಗನ್ನಡ ಉತ್ಸವದಲ್ಲಿ ಅಪ್ಪು ಭಾವಚಿತ್ರ ಹಿಡಿದು ಸಂಭ್ರಮಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ,ಶೀಘ್ರದಲ್ಲೇ ಅಪ್ಪು ಹೆಸರಿನಲ್ಲಿ ಕೆಎಂಎಫ್ ಉತ್ಪನ್ ಬಿಡುಗಡೆ ಮಾಡುವದಾಗಿ ಘೋಷಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಸ್ವಕ್ಷೇತ್ರ ಅರಭಾವಿ ವ್ಯಾಪ್ತಿಯ ಮೂಡಲಗಿಯಲ್ಲಿ ನಡೆದ ಅದ್ಧೂರಿ ಸಿರಿಗನ್ನಡ ಉತ್ಸವದಲ್ಲಿ ಭಾಗಿಯಾಗಿ ಅಪ್ಪು ಭಾವಚಿತ್ರ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.ಅದ್ಧೂರಿ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಭಾಗಿಯಾದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂಬ್ರಮಿಸಿದರು. ಅಪ್ಪು ಚಿತ್ರದ …

Read More »

ನಾಳೆ ಶನಿವಾರ ಬೆಳಗಾವಿಗೆ ಟಿ.ಎ ನಾರಾಯಣಗೌಡ್ರು….

ಬೆಳಗಾವಿ-ಹಿರಿಯ ಕನ್ನಡಪರ ಹೋರಾಟಗಾರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ,ಕನ್ನಡ ನೆಲ,ಜಲ,ಭಾಷೆಯ ರಕ್ಷಕ ಟಿ.ಎ ನಾರಾಯಣಗೌಡ್ರು ನಾಳೆ ಶನಿವಾರ ಬೆಳಗಾವಿಗೆ ಬರಲಿದ್ದಾರೆ. ಬೆಳಗ್ಗೆ ಬೆಳಗಾವಿಗೆ ಆಗಮಿಸುವ ಅವರು ನಗರದಲ್ಲಿ ಕರವೇ ಪದಾಧಿಕಾರಿಗಳ ಜೊತೆ ಸಭೆ ನಡೆಸಿ, ಈ ತಿಂಗಳು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಬೆಳಗಾವಿ ಗಡಿ ವಿವಾದದ ಕುರಿತು ಅಂತಿಮ ಹಂತದ ವಿಚಾರಣೆ ನಡೆಯಲಿದ್ದು,ಇಂತಹ ಮಹತ್ವದ ಸಂಧರ್ಭದಲ್ಲಿ ಕರ್ನಾಟಕ ಸರ್ಕಾರ ಕೈಗೊಳ್ಳಬೇಕಾದ ಮುಂಜಾಗೃತೆ,ಸರ್ಕಾರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿ …

Read More »

ಸಿದ್ದರಾಮಯ್ಯಗೆ ತಾಕತ್ತಿದ್ದರೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲಿ-ಶ್ರೀರಾಮಲು  

ಬೆಳಗಾವಿ: ನಿಮಗೆ ತಾಕತ್ತು ಇದ್ದರೆ ಬಾದಾಮಿ ಮತಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ನೋಡೋಣ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಸವಾಲು ಹಾಕಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನ್ನ ಸ್ಪರ್ಧೆ ಬಗ್ಗೆ ಮೊಳಕಾಲ್ಮೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಕೆಲಸ ಮಾಡಿದವರಲ್ಲ. ಹಾಗಾಗಿ, ನೀವು ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ, ಅಲ್ಲಿನ …

Read More »

ನೋವು ತಾಳಲಾರದೆ, ತನ್ನ ಕಾಲನ್ನು ತಾನೇ ಕಟ್ ಮಾಡಿಕೊಂಡ….!!

ಬೆಳಗಾವಿ- ಕೆಲವು ತಿಂಗಳ ಹಿಂದೆ ಪಾರ್ಶವಾಯು ಹೊಡತದಿಂದ ಬಳಲುತ್ತಿದ್ದ ಯುವಕನೊಬ್ಬ ನೋವು ತಾಳಲಾರದೆ ತನ್ನ ಕಾಲನ್ನು ತಾನೇ ಕಟ್ ಮಾಡಿಕೊಂಡ ಘಟನೆ ಬೈಲಹೊಂಗಲ ತಾಲ್ಲೂಕಿನ ನಾವಲಗಟ್ಟಿ ಗ್ರಾಮದಲ್ಲಿ ನಡೆದಿದೆ. ನಾವಲಗಟ್ಟಿ ಗ್ರಾಮದ ರಾಜು ಫಕೀರಪ್ಪ ಯರಗುದ್ದಿ (24) ಎಂಬಾತ ಮನೆಯಲ್ಲಿ ಯಾರು ಇಲ್ಲದಿರುವಾಗ,ಕಬ್ಬು ಕಡೆಯುವ ಕೊಯಿತಾ ದಿಂದ ತನ್ನ ಕಾಲನ್ನು ಕಟ್ ಮಾಡಿಕೊಂಡಿದ್ದಾನೆ.ಕಾಲಿನ ಪಾದ ಕಾಲಿನಿಂದ ಬೇರ್ಪಟ್ಟಿದ್ದು,ಗ್ರಾಮಸ್ಥರು ಗಾಯಾಳು ವ್ಯಕ್ತಿಯನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ‌ . ರಾಜು …

Read More »