Breaking News

LOCAL NEWS

ಡವರಿ ಹರ್ಯಾಶ್ಮೆಂಟ್ ಕೇಸ್ ವಿರುದ್ಧ ಡವ್ ಕೇಸ್ ಎಂದು ಕೌಂಟರ್ ಕೇಸ್…!!

ಬೆಳಗಾವಿ, ಡವರಿ ಕೇಸ್ ಗೆ ಟ್ವಿಸ್ಟ್ ಕೌಂಟರ್ ಕೇಸ್ ದಾಖಲು….!!! ಬೆಳಗಾವಿ – ಗಂಡ ಮೋಸ ಮಾಡಿದ್ದಾನೆ ವರದಕ್ಷಣೆ ಕಿರುಕಳ ಕೊಟ್ಟಿದ್ದಾನೆ, ಗಂಡನ ಮಾವ ಲೈಂಗಿಕ ಕಿರುಕಳ ಕೊಟ್ಟಿದ್ದಾನೆ, ಎಂದು ಆರೋಪಿಸಿದ ಮಹಿಳೆ ಆತ್ಮಹತ್ಯೆಗೆ ಯತ್ಮಿಸಿದ ಘಟನೆ ದೊಡ್ಡ ಸುದ್ಧಿಯಾಗಿತ್ತು ಆದ್ರೆ ಇದಕ್ಕೆ ಪ್ರತಿಯಾಗಿ ಗಂಡನ ಕುಟುಂಬಸ್ಥರು ಮಹಿಳೆ ಅನ್ಯ ಯುವಕರ ಜೊತೆ ಮೋಜು ಮಾಡಿರುವ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವದರ ಜೊತೆಗೆ ಮಹಿಳೆಯ ವಿರುದ್ದ ಪ್ರತಿದೂರು ದಾಖಲಿಸಿದ್ದಾರೆ. …

Read More »

ರಜೆ ಇದ್ರೂ ಸಹ, ನದಿ ಪಾತ್ರಗಳ ಪರಿಸ್ಥಿತಿ ಪರಶೀಲಿಸಿದ ಜಿಲ್ಲಾಧಿಕಾರಿ…

ನದಿಪಾತ್ರಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ: ಪ್ರವಾಹ ನಿರ್ವಹಣೆ ಸಿದ್ಧತೆ ಪರಿಶೀಲನೆ ಬೆಳಗಾವಿ,-  ಪಕ್ಕದ  ಮಹಾ ನಿನ್ನೆಯ ದಿನ ಮೊಹರಂ ಹಬ್ಬದ ಸರ್ಕಾರಿ ರಜೆ ಇದ್ದರೂ ಸಹ ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ ರೋಷನ್ ಅವರು ಜಿಲ್ಲೆಯ ನದಿಗಳ ಒಳ ಹರಿವು ಹಾಗೂ ಪ್ರವಾಹ ಪರಿಸ್ಥಿತಿ ಎದುರಿಸಲು ಮಾಡಿರುವ ಸಿದ್ಧತೆಗಳನ್ನು ಪರಶೀಲಿಸಿದರು   ರಾಷ್ಟ್ರ ಹಾಗೂ ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ವಿವಿಧೆಡೆ ಭೇಟಿ ನೀಡಿ ಘಟಪ್ರಭಾ, ಕೃಷ್ಣಾ …

Read More »

ಬೆಳಗಾವಿಯಲ್ಲಿ ಅತ್ಯಾಚಾರಕ್ಕೆ ಯತ್ನ ಆರೋಪಿಗೆ, ಥಳಿತ…!!

ಬೆಳಗಾವಿ -ಬುದ್ಧಿಮಾಂದ್ಯೆ ಯುವತಿ ಮೇಲೆ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳಗಾವಿಯ ಕಾಕತಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಪೋಷಕರು ಜಮೀನಿಗೆ ಹೋಗಿದ್ದ ವೇಳೆ ಸಮಯ ಸಾಧಿಸಿ ಮನೆಗೆ ನುಗ್ಗಿರುವ ಕಾಮುಕ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ,ಯುವತಿ ಚೀರಾಟ ಕೂಗಾಟ ನಡೆಸಿದ ತಕ್ಷಣವೇ ಮನೆ ಒಳಗೆ ಹೋಗಿರುವ ಯುವತಿಯ ಚಿಕ್ಕಪ್ಪ,ಕಾಮುಕನನ್ನು ಹಿಡಿದು ಥಳಿಸಿದ್ದಾನೆ.ಬಳಿಕ ಪ್ರಜ್ಞೆ ತಪ್ಪಿ ಬಿದ್ದು ಕಾಮುಕ …

Read More »

ಕ್ಯಾಂಟೋನ್ ಮೆಂಟ್ ವಸತಿ ಪ್ರದೇಶ ಮಹಾನಗರ ಪಾಲಿಕೆಗೆ ಹಸ್ತಾಂತರ ಕುರಿತು ಸಭೆ

15 ದಿನಗಳಲ್ಲಿ ಸಮೀಕ್ಷಾ ವರದಿ‌ ಸಲ್ಲಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಬೆಳಗಾವಿ ನಗರದ ಪ್ರದೇಶದ ಕ್ಯಾಂಟೋನಮೆಂಟ್ ಏರಿಯಾದ ವಸತಿ ಪ್ರದೇಶವನ್ನು ಬೆಳಗಾವಿ ಮಹಾನಗರ ಪಾಲಿಕೆಗೆ ವಿಲಿನಗೊಳಿಸುವುದಕ್ಕೆ ಸಂಬಂಧಿಸಿದಂತೆ ಕ್ಯಾಂಟೋನ್‌ಮೆಂಟ್ ಬೋರ್ಡನ ಒಟ್ಟು 1763.78 ಎಕರೆ ಜಾಗೆಯ ವಿವಿಧ ಅಂಶಗಳನ್ನು ಒಳಗೊಂಡಂತೆ ಸಂಪೂರ್ಣ ಸಮೀಕ್ಷೆ ಕೈಗೊಂಡು 15 ದಿನಗಳೊಳಗಾಗಿ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚನೆ ನೀಡಿದ್ದಾರೆ. ರಕ್ಷಣಾ ಸಚಿವಾಲಯದ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ …

Read More »

ರೈತನ ಮೇಲೆ ಕರಡಿ ದಾಳಿ, ರೈತನಿಗೆ ಗಾಯ

ಲೊಂಡಾದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ 65 ವರ್ಷದ ರೈತನ ಮೇಲೆ ಮೂರು ಕರಡಿ ದಾಳಿ ಮಾಡಿದ ಪರಿಣಾಮ ಮಂಗಳವಾರ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರಡಿ ದಾಳಿಗೆ ಒಳಗಾದ ರೈತ ಪ್ರಭು ದೇಸೂರಕರ ಎಂದು‌ ಗುರುತಿಸಲಾಗಿದೆ. ಜಮೀನಲ್ಲಿ ಕೆಲಸ ಮಾಡುತ್ತಿರುವಾಗ ದಾಳಿ ನಡೆಸಿದ ಕರಡಿ ಹಿಂಡು ಪ್ರಭುವಿನ ಮೇಲೆ ಭೀಕರ ದಾಳಿ ನಡೆಸಿವೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Read More »

ಬೆಳಗಾವಿಯಲ್ಲಿ ಸಭೆ ನಡೆಸಿದ ರಾಹುಲ್ ವಾರ್ನಿಂಗ್ ಮಾಡಿದ್ದೇನು ಗೊತ್ತಾ..??

ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಜಿ.ಪಂ. ಸಿ.ಇ.ಓ.ರಾಹುಲ್ ಶಿಂಧೆ ಸೂಚನೆ ಬೆಳಗಾವಿ, – ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದರ ಮೂಲಕ ಸಾರ್ವಜನಿಕರ ಸಮಸ್ಯೆಗಳ ತ್ವರಿತ ಪರಿಹಾಕ್ಕೆ ಮುಂದಾಗಬೇಕು. ತಾಲೂಕುಗಳ ಅಭಿವೃದ್ಧಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ಪಾತ್ರ ಮಹತ್ವದಾಗಿದ್ದು, ತಮ್ಮ ಜವಾಬ್ದಾರಿ ಅರಿತು ಸಮರ್ಪಕವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಅವರು ತಿಳಿಸಿದರು. ಜಿಲ್ಲಾ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ (ಜು.16) ಜರುಗಿದ …

Read More »

ಡಾ.‌ ಸೋನಾಲಿ ಸರ್ನೋಬತ್ ಗೆ ಬಿಜೆಪಿಯಲ್ಲಿ ರಾಜ್ಯಮಟ್ಟದ ಜವಾಬ್ದಾರಿ

ಬೆಂಗಳೂರು : ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಸಕ್ರೀಯವಾಗಿರುವ ಡಾ.ಸೋನಾಲಿ ಸರ್ನೋಬತ್ ಅವರು ನೀಯತಿ ಫೌಂಡೇಶನ್ ಮೂಲಕ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಕ್ರೀಯಾಶೀಲ ಬಿಜೆಪಿ ಮಹಿಳಾ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಸೇವೆಯನ್ನು ಗುರುತಿಸಿ ಅವರಿಗೆ ಪಕ್ಷ ಈಗ ರಾಜ್ಯಮಟ್ಟದ ಜವಾಬ್ದಾರಿ ನೀಡಿದೆ. ಬೆಳಗಾವಿಯ ಬಿಜೆಪಿ ಮಹಿಳಾ ನಾಯಕಿ ಹಾಗೂ ಖ್ಯಾತ ವೈದ್ಯೆ ಡಾ. ಸೋನಾಲಿ ಸರ್ನೋಬತ್ ಅವರನ್ನು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ. ಪಕ್ಷ …

Read More »

ಮಳೆಗಾಲದ ಅಧಿವೇಶನದಲ್ಲಿ ಬೆಳಗಾವಿ ಶಾಸಕರ ಧ್ವನಿ….!!

ಬೆಳಗಾವಿ- ನಮ್ಮ ಕ್ಷೇತ್ರದ ಶಾಸಕರು ಅಧಿವೇಶನದಲ್ಲಿ ಭಾಗವಹಿಸಲು ಬೆಂಗಳೂರಿಗೆ ಹೋಗಿದ್ದಾರೆ ಅವರು ನಮ್ಮ ಪರವಾಗಿ ಸದನದಲ್ಲಿ ಅವಾಜ್ ಹಾಕ್ತಾರೋ ಇಲ್ಲವೋ ಎನ್ನುವ ಕುತೂಹಲ ಎಲ್ಲರಿಗೂ ಇರುವದು ಸಹಜ. ಬೆಳಗಾವಿ ಜಿಲ್ಲೆಯ ಶಾಸಕರಾದ ರಾಜು ಕಾಗೆ,ಬಾಬಾಸಾಹಶೆಬ್ ಪಾಟೀಕ, ದುರ್ಯೋಧನ ಐಹೊಳೆ,ಮಹಾಂತೇಶ್ ಕೌಜಲಗಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವಾರು ಜನ ಶಾಸಕರು ಸೋಮವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಭಾಗವಹಿಸಿ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದಿದ್ದಾರೆ. ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ …

Read More »

ಸದನದಲ್ಲಿ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಪ್ರಸ್ತಾಪ…

ಬೆಂಗಳೂರು- ಮಳೆಗಾಲದ ಅಧಿವೇಶನ ಶುರುವಾಗಿದೆ.ಮೊದಲ ದಿನದ ಸದನದಲ್ಲಿ ವಾಲ್ಮೀಕಿ ನಿಗಮದ ಹಗರಣದ ಕುರಿತು ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದೆ ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ವಾಲ್ಮೀಕಿ ನಿಗಮದ ಹಗರಣದ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಸದಸ್ಯರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು ಈ ಹಗರಣದ ಕುರಿತು ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಸುಧೀರ್ಘವಾಗಿ ಮಾತನಾಡಿ,187 ಕೋಟಿ ರೂ ನಿಗಮದ ಹಣ ಹೇಗೆ ವರ್ಗಾವಣೆ ಆಯ್ತು …

Read More »

ಬೆಳಗಾವಿ: ಮಗನ ಕಿತಾಪತಿಗೆ ವೃದ್ಧ ತಾಯಿಯ ಕಣ್ಣೀರು ……!!

  ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರ ಗಮನಕ್ಕೆ…….. ಬೆಳಗಾವಿ-ಮಕ್ಕಳಿದ್ದರೂ ತಾಯಿ ತನ್ನ ಮನೆಯಲ್ಲಿ ಒಂಟಿಯಾಗಿದ್ದಳು ಒಬ್ಬ ಮಗ ಆಗಾಗ ಆಹಾರ ಸಾಮುಗ್ರಿಗಳನ್ನು ಆಗಾಗ ತಾಯಿಗೆ ಕೊಟ್ಟು ಹೋಗುತ್ತಿದ್ದ ಆದ್ರೆ ಇನ್ನೊಬ್ಬ ಮಗ ಬಂದು ತಾಯಿ ವಾಸವಾಗಿದ್ದ ಮನೆಯನ್ನು ತನ್ನ ಹೆಂಡತಿ ಮಕ್ಕಳ ಹೆಸರಿನಲ್ಲಿ ಬರೆಯಿಸಿಕೊಂಡು ತಾಯಿ ವಾಸವಾಗಿದ್ದ ಮನೆಯನ್ನು ಧ್ವಂಸ ಮಾಡಿದ್ದಾನೆ ಜಿಟಿ,ಜಿಟಿ ಸುರಿಯುತ್ತಿರುವ ಮಳೆಯಲ್ಲಿ ಆ ತಾಯಿ ಈಗ ಬೀದಿಪಾಲಾಗಿದ್ದು, ಯಾರಾದ್ರು ಇದ್ರೆ ನನಗೆ ನ್ಯಾಯ ಕೊಡಿಸಿ …

Read More »

ಗಂಡ ಕೈಕೊಟ್ಟ.,ಗಂಡನ ಮಾವ, ಲೈಂಗಿಕ ಕಿರುಕುಳ, ಕೊಟ್ಡ, ಎಂದು ಆತ್ಮಹತ್ಯೆಗೆ ಯತ್ನ…

ಬೆಳಗಾವಿ- ನಾನು BE ಇಂಜಿನಿಯರಿಂಗ್ ವರ್ಷಕ್ಕೆ 15 ಲಕ್ಷ ಪ್ಯಾಕೇಜ್ ,( ಪಗಾರ) ಎಂದು ಸುಳ್ಳು ಹೇಳಿ,ಯುವತಿಯನ್ನು ನಂಬಿಸಿದ ಮದುವೆಯಾದ ಬೆಳಗಾವಿಯ ಪೋರ ಈಗ ಮದುವೆ ಮಾಡಿಕೊಂಡ ಯುವತಿಗೆ ವರದಕ್ಷಣೆ ಕೊಡುವಂತೆ ಕಿರುಕಳ ಕೊಡುತ್ತಿದ್ದು, ಗಂಡನ ಮಾವ ಲೈಂಗಿಕ ಕಿರುಕಳ ಕೊಡುತ್ತಿದ್ದಾನೆ ಎಂದು ಆರೋಪಿಸಿರುವ ಬೆಳಗಾವಿಯ ವಿವಾಹಿತ ಯುವತಿ ಇಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು 20 ವರ್ಷದ ವಿವಾಹಿತೆಯೋರ್ವಳು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಜಿಲ್ಲಾಸ್ಪತ್ರೆಗೆ …

Read More »

ಅರವಿಂದ್ ಅರಗೊಂಡ,ಪೋಲೀಸರ ಕೈಯ್ಯಾಗ ಸಿಕ್ಕೊಂಡ…!!

ಬೆಳಗಾವಿ- ಬೆಳಗಾವಿ ಮಹಾನಗರದ ಮಾರ್ಕೆಟ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆ ಮಾಡಿ,ಈ ಮನೆಯಲ್ಲಿ ಕಂಪ್ಯುಟರ್, ಲ್ಯಾಪಟಾಪ್ ಪ್ರೀಂಟರ್ ಇಟ್ಕೊಂಡು ನೀಟ್ ಪರೀಕ್ಷೆಯಲ್ಲಿ ಲಫಡಾ ಮಾಡುತ್ತಿದ್ದ ಖದೀದ ಅರವಿಂದ್ ಅಳಗೊಂಡ್ ಎಂಬಾತ ಕೊನೆಗೂ ಬೆಳಗಾವಿ ಪೋಲೀಸರ ಕೈಗೆ ಸಿಕ್ಕೊಂಡಿದ್ದಾನೆ. ಸರ್ಕಾರಿ ಕೋಟಾದಡಿ ಸೀಟ್ ಕೊಡಿಸುತ್ತೇನೆ ಅಂತ ಪಂಗನಾಮ ಹಾಕಿದ್ದ, ವಂಚಕ ಕೊನೆಗೂ ಅರೆಸ್ಟ್ ಆಗಿದ್ದಾನೆ.ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡ್ತಿದ್ದ ವಂಚಕ,ಆರೋಪಿ ಅರವಿಂದ್ ಅರಗೊಂಡ ಎಂಬಾತನನ್ನ ಬಂಧಿಸಿದ ಮಾರ್ಕೆಟ್ …

Read More »

ಆನ್ ಲೈನ್ ಲವ್ ಮಾಡಿದ ನಯನಾ ಪ್ರಾಣ ಅಂತ್ಯ….!

ನಯನಾ… ಕೊಲೆಯೋ ಆತ್ಮಹತ್ಯೆಯೋ!! ಬೆಳಗಾವಿ-ಆಕೆ ಮೈಸೂರು ಹುಡುಗಿ ಈತ ಬೆಳಗಾವಿ ಹುಡುಗ ಎತ್ತಿಂದೆತ್ತ ಸಂಬಂಧ‌ ನೋಡಿ. ಇನ್ಸಾಟ್ ಗ್ರಾಮ್ ನಲ್ಲಿ ಪರಸ್ಪರ ಪರಿಚಯ ಆಗುತ್ತೆ ಪರಿಚಯ ಕಡೆಗೆ ಪ್ರತಿಯೂ ಆಗಿ ಬದಲಾಗುತ್ತೆ ಹೆತ್ತವರ ವಿರೋಧದ ನಡುವೆ ಮೈಸೂರು ಬಿಟ್ಟು ಬಂದವಳು ಹೊಟ್ಟೆಯಲಿದ್ದ ಮಗು ಸಮೇತ ಸಧ್ಯ ಹೆಣವಾಗಿದ್ದಾಳೆ.ಮದುವೆಯಾಗಿ ಕೇವಲ ಒಂದು ವರ್ಷ ಮೂರು ತಿಂಗಳು ಬದುಕಿನ ಸುಂದರ ಕ್ಷಣಗಳ ಕನಸು ಕಂಡಿದ್ದ ಗರ್ಭಿಣಿ ತೀರಿ ಹೋಗಿದ್ದಾಳೆ.ಈ ಘಟನೆ ನಡೆದಿದ್ದು ಬೆಳಗಾವಿಯಲ್ಲಿ. …

Read More »

ಜನರ ಆಶೀರ್ವಾದ ಇದ್ದರೆ ಸಾಕು,ಯಾವ ಹುದ್ದೆಗೂ ಆಸೆ ಪಡಲ್ಲ.

ಅಥಣಿ–ರಾಜಕೀಯ ಬೆಳವಣಿಗೆ ಕಂಡು ಮಂತ್ರಿ ಸ್ಥಾನದಿಂದ ಹಿಂದೆ ಸರಿದ್ರಾ ಲಕ್ಷ್ಮಣ ಸವದಿ..? ಎನ್ನುವ ಪ್ರಶ್ನೆ ಎದುರಾಗಿದೆ ಅವರು ನಿನ್ನೆ ಮಾತನಾಡಿದ ಧಾಟಿ ನೋಡಿದ್ರೆ ಲಕ್ಷ್ಮಣ ಸವದಿ ಅವರು ಅಸಮಾಧಾನ ಆಗಿದ್ದಾರೆ ಎಂದು ಗೊತ್ತಾಗುತ್ತದೆ. ನನಗೆ ಮಂತ್ರಿ ಬೇಡಾ ಮಂತ್ರಿಗಿರಿಗಾಗಿ ನಾನು ಯಾರ ಕಾಲು ಬೀಳಲ್ಲ.ನನ್ನ ಕ್ಷೇತ್ರದ ಜನರ ಆಶಿರ್ವಾದ ಮಾತ್ರ ಸಾಕು ನಾನು ಯಾವ ಹುದ್ದೇಗು ಆಸೆ ಪಡಲ್ಲಾ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸವದಿ …

Read More »

ಕಿತ್ತೂರು ಉತ್ಸವಕ್ಕೆ 200 ವರ್ಷ ಶೀಘ್ರದಲ್ಲೇ ಸಿಎಂ ಬಳಿ ನಿಯೋಗ..

ಬೆಳಗಾವಿ- ದೇಶದಲ್ಲಿ ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ಸಮರ ಸಾರಿ,ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯ ರುಂಡ ಚೆಂಡಾಡಿದ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಇತಿಹಾಸದ ಗತವೈಭವ ಬಿಂಬಿಸುವ ಕಿತ್ತೂರು ಉತ್ಸವಕ್ಕೆ ಈ ವರ್ಷ 200 ವರ್ಷಗಳಾಗಿದ್ದು ಈಬಾರಿಯ ಕಿತ್ತೂರು ಉತ್ಸವವನ್ನು ಅದ್ಧೂರಿಯಾಗಿ ಆಚರಿಸುವಂತೆ ಕೋರಲು ಸಿಎಂ ಬಳಿ ಬೆಳಗಾವಿ ಜಿಲ್ಲೆಯ ಶಾಸಕರ ನಿಯೋಗ ಕೊಂಡೊಯ್ಯಲು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಒತ್ತಾಯಿಸಿದ್ರು. ನಿನ್ನೆ ಸುವರ್ಣ ವಿಧಾನಸೌಧದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು …

Read More »