Breaking News

ಗ್ಯಾರಂಟಿ ಬ್ಯಾನರ್ ಹರಿದ ಬಿಜೆಪಿ ನಾಯಕರ ವಿರುದ್ದ ಕೇಸ್ ಬಿತ್ತು…!

 

ಬೆಳಗಾವಿ-ಬಿಜೆಪಿ ಪ್ರತಿಭಟನೆ ವೇಳೆ ಸರ್ಕಾರದ ಗೃಹಲಕ್ಷ್ಮಿ ಬ್ಯಾನರ್ ಹರಿದವರ ವಿರುದ್ದ ಪ್ರಕರಣ ದಾಖಲಾಗಿದೆ.ಬಿಜೆಪಿ ಮುಖಂಡರು ಸೇರಿ ಒಟ್ಟು 23 ಜನರ ವಿರುದ್ಧ ಕೇಸ್ ದಾಖಲಾಗಿದೆ.

A1 ಮುರಗೇಂದ್ರಗೌಡ ಪಾಟೀಲ್, A2 ಶ್ವೇತಾ ಜಗದಾಳೆ, A3 ಪ್ರಶಾಂತ ಅಮಿನಬಾವಿ, A 4 ಮಹಾಂತೇಶ ವಕ್ಕುಂದ ಸೇರಿ ಮುಖಂಡರು, ಕಾರ್ಯಕರ್ತರ ಮೇಲೆ ಕೇಸ್ ದಾಖಲಾಗಿದೆ.ಪ್ರತಿಭಟನೆಯಲ್ಲಿದ್ದ ಮಾಜಿ ಶಾಸಕರ ಹೆಸರನ್ನು ಪೊಲೀಸರು ಕೈಬಿಟ್ಟಿದ್ದಾರೆ.ಯಾಕಂದ್ರೆ ಅವರು ಪ್ರತಿಭಟನೆಯ ಸಂಧರ್ಭದಲ್ಲಿ ಶಾಂತ ರಾಗಿದ್ದರು.ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಮಾರ್ಚ್ 23 ರಂದು ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತ್ತು, ಬಿಜೆಪಿಯ 18 ಶಾಸಕರ ಅಮಾನತು, ಗುತ್ತಿಗೆಯಲ್ಲಿ‌ ಮುಸ್ಲಿಂರಿಗೆ ಶೇಕಡಾ4 ರಷ್ಟು ಮೀಸಲಾತಿ ನೀಡಿದ್ದನ್ನ ಖಂಡಿಸಿ ಪ್ರತಿಭಟನೆ ನಡೆಸಿದ್ರು

ಡಿಸಿ ಕಚೇರಿಯಲ್ಲಿ ಮನವಿ ನೀಡಿ ವಾಪಸ್ ಬರುವಾಗ ಸರ್ಕಾರದ ಗೃಹ ಲಕ್ಷ್ಮೀ ಬ್ಯಾನರ್ ಹರಿದು ಹಾಕಿದ್ರು,ಬ್ಯಾನರ್ ಹರಿಯುವ ಮುನ್ನ ಪೊಲೀಸರು ಪ್ರತಿಭಟನಾಕಾರರ ಮಧ್ಯೆ ಹೈಡ್ರಾಮಾವೇ ನಡೆದಿತ್ತು, ರಸ್ತೆ ತಡೆ, ಸಾರ್ವಜನಿಕ ಆಸ್ತಿ ಹಾನಿ ಮಾಡಿದ್ದಕ್ಕೆ ಕೇಸ್ ದಾಖಲು ಮಾಡಲಾಗಿದೆ. ಬಿಎನ್ಎಸ್ ಆಕ್ಟ್ ನ ವಿವಿಧ ಕಲಂಗಳ ಅಡಿ ಕೇಸ್ ದಾಖಲು ಮಾಡಲಾಗಿದೆ

Check Also

ಲವ್ ಮ್ಯಾರೇಜ್ ಆಗಿದೆ, ಪೋಷಕರ ಬೆದರಿಕೆ ಇದೆ. ರಕ್ಷಣೆ ಕೊಡಿ…!!

ಬೆಳಗಾವಿ ಕೊರಳಲ್ಲಿ ತಾಳಿ, ಮುಖದಲ್ಲಿ ಮಂದಹಾಸ, ಕೈಯಲ್ಲೊಂದು ಮನವಿ ಪತ್ರ, ನನಗೆ ನೀನು ನಿನಗೆ ನಾನು ಎಂದು ಕೈ ಕೈ …

Leave a Reply

Your email address will not be published. Required fields are marked *