Breaking News
Home / ಬೆಳಗಾವಿ ನಗರ / ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..

ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..

ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿಪಿ ಛಾಬ್ರಾ ಅವರು ಇತ್ತಿಚಿಗೆ ನಿಧನರಾಗಿದ್ದು ತಂದೆಯ ದೇಹವನ್ನು ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಕ್ಕೆ ದೇಹದಾನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ

ಬೆಳಗಾವಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಶಾಲಿನಿ ರಜನೀಶ್ ಈಗ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

ಶಾಲಿನಿ ರಜನೀಶ್ ಅವರ ತಂದೆ ಪಿಪಿ ಛಾಬ್ರಾ ಅವರು ನಿವೃತ್ತ IAS  ಅಧಿಕಾರಿಯಾಗಿದ್ದರು 87 ವರ್ಷ ವಯಸ್ಸಿನ ಅವರು ಇತ್ತಿಚಿಗೆ ಬೆಂಗಳೂರಿನಲ್ಲಿ ನಿಧನರಾಗಿದ್ದರು ತಂದೆ ನಿಧನರಾದ ಬಳಿಕ ಶಾಲಿನಿ ರಜನೀಶ್ ತಮ್ಮ ಇಬ್ಬರು ಸಹೋದರರ ಸಹಕಾರದೊಂದಿಗೆ ತಂದೆಯ ದೇಹವನ್ನು ಸರ್ಕಾರಿ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಿ ಇಲಾಖೆಗೆ ಮಾದರಿಯಾಗಿದ್ದಾರೆ

ಹ್ಯಾಟ್ಸಪ್ ಶಾಲಿನಿ ಮೇಡಂ

About BGAdmin

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ