ಬೆಳಗಾವಿ- ಮಹಾನಗರ ಪಾಲಿಕೆಯಲ್ಲಿ ಹೊಸ ಕಾರಿಗಾಗಿ ಕದನ ಶುರುವಾಗಿದೆ ತಮಗೆ ಹೊಸ ಕಾರು ಬೇಕು ಎಂದು ಪಟ್ಟು ಹಿಡಿದಿರುವ ಡಪ್ಯುಟಿ ಮೇಯರ್ ಸಂಜಯ ಶಿಂಧೆ, ಪಾಲಿಕೆ ಅಂಬ್ಯಾಸಿಡರ್ ಕಾರನ್ನು ತ್ಯೇಜಿಸಿ ಖಾಸಗಿ ವಾಹನದಲ್ಲಿ ಪಾಲಿಕೆ ಕಚೇರಿಗೆ ಬರುತ್ತಿದ್ದಾರೆ.
ಪಾಲಿಕೆಯ ಅಂಬ್ಯಾಸಿಡರ್ ಕಾರ್ ರೀಪೇರಿಗೆ ಬಂತು ಈ ಕಾರನ್ನು ಹುಬ್ಬಳ್ಳಿಯ ಗ್ಯಾರೇಜಿಗೆ ಕಳುಹಿಸಿ 50 ಸಾವಿರ ಖರ್ಚುಮಾಡಿ ಕಾರು ದುರಸ್ಥಿ ಮಾಡಲಾಯಿತು ಅಲ್ಲಿಯವರೆಗೆ ಉಪಮಹಾಪೌರರು ಪಾಲಿಕೆ ಆರೋಗ್ಯಾಧಿಕಾರಿಗಳ ಕಾರನ್ನು ಉಪಯೋಗ ಮಾಡುತ್ತಿದ್ದರು
ಕಾರು ದುರಸ್ಥಿಯಾಗಿ ಬಂದ ಬಳಿಕ ಕಾರು ಚಾಲಕ ಉಪಮಹಾಪೌರರನ್ನು ಕರೆದುಕೊಂಡು ಬರಲು ಮನೆಗೆ ಹೋದಾಗ ಆಕ್ರೋಶಗೊಂಡ ಸಂಜಯ ಶಿಂದೆ ನಮಗೇನು ಬೆಲೆ ಇಲ್ಲವೇ ಡಕೋಟಾ ಕಾರಿನಲ್ಲಿ ನಾನು ಬರೋದಿಲ್ಲ ಅಂತ ಕಾರನ್ನು ಮರಳಿ ಕಳುಹಿಸಿದ ಬಳಿಕ ಈ ಕಾರು ಈಗ ಪಾಲಿಕೆ ಎದರು ಅನಾಥವಾಗಿ ನಿಂತಿದೆ
ಈಗ ಸದ್ಯಕ್ಕೆ ಸಂಜಯ ಶಿಂಧೆ ಖಾಸಗಿ ವಾಹನದಲ್ಲಿ ಪಾಲಿಕೆ ಬಚೇರಿಗೆ ಬರುವದರ ಮೂಲಕ ಅಧಿಕಾರಿಗಳಿಗೆ ಬಿಸ5 ಮುಟ್ಟಿಸಿದ್ದಾರೆ ನೋಡಿ ನಮ್ಮ ಜನ ಪ್ರತಿನಿಧಿಗಳು ತಮಗೆ ಸೌಲಭ್ಯಗಳು ಸಿಗದೇ ಇದ್ದಾಗ ಯಾವ ರೀತಿ ಪ್ರತಿಭಟಿಸುತ್ತಾರೆ ಹೇಗೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಾರೆ ಅನ್ನೋದನ್ನು ನೋಡಿ ಕಲಿಯಬೇಕ್ರೀ..
ಮೇಯರ್ ಡೆಪ್ಯುಟಿ ಮೇಯರ್ ಗಾಗಿ ಹೊಸ ಕಾರು ಖರಿದಿಸಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಎರಡು ವರ್ಷದ ಹಿಂದೆ ನಿರ್ಣಯ ಕೈಗೊಳಲಾಗಿದೆ ಆದರೆರ ಇನ್ನುವರೆಗೆ ಹೊಸ ಕಾರು ಖರೀದಿಯಾಗಿಲ್ಲ ಹೀಗಾಗಿ ಹೊಸ ಕಾರಿಗಾಗಿ ಬೆಳಗಾವಿ ಪಾಲಿಕೆಯಲ್ಲಿ ಕದನ ಆರಂಭವಾಗಿದ್ದು ಕಾರಿನ ಕ್ಯಾತೆ ಎಲ್ದಲಿಯವರೆಗೆ ಹೊಗಿ ನಿಲ್ಲುತ್ತದೆ ಎನ್ನುವದವನ್ನು ಕಾದು ನೋಡಬೇಕಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ