Breaking News

ಚನ್ನಮ್ಮನ ನಾಡಿನಲ್ಲಿ ಕಾಗೋಡು ತಿಮ್ಮಪ್ಪನವರ ಅವಾಜ್

ಎತ್ತರದ ಧ್ವನಿಯಲ್ಲಿ ಕಡಕ ಮಾತುನಾಡುವಲ್ಲಿ ಹೆಸರುವಾಸಿಯಾದ ಲೋಹಿಯಾವಾದಿ ರಾಜ್ಯ ಕಂದಾಯ ಖಾತೆ ಸಚಿವ ಕಾಗೋಡ ತಿಮ್ಮಪ್ಪನವರು ಬ್ರಿಟಿಷರ ವಿರುದ್ದ ಗುಡುಗಿ P್ಫ್ರಂತಿ ಕಹಳೆ ಊದಿದ ವೀರರಾಣಿ ಚನ್ನಮ್ಮ ನಾಡಿನಲ್ಲಿ ಗುಡುಗಿನ ಮಾತುಗಳ ಗುಡುಗು ಚನ್ನಮ್ಮನ ನಾಡಿನಲ್ಲಿ ಇರಬೇಕಾಗಿರುವುದು ಇಂಥ ಅವಜ್ ಎಂದು ನೆರೆದ ಜನಕ್ಕೆ ಕೂಗಿ ಹೇಳಿದಂತಿತ್ತು.
ರವಿವಾರ ಸಂಜೆ ಕತ್ತಲು ಆವರಿಸುತ್ತಿದ್ದಂತೆ ಮುಖ್ಯವೇದಿಕೆಯಲ್ಲಿ ಕಿತ್ತೂರು ಉತ್ಸವಕ್ಕೆ ದೀಪ ಬೆಳಗಿಸಿ ಚಲನೆ ನೀಡಿ ಮಾತನಾಡಲು ಆರಂಭಿಸಿದ್ದೇ ದೊಡ್ಡದಾದ ಧ್ವನಿಯಲ್ಲಿ. ಕಾಗೋಡು ತಿಮ್ಮಪ್ಪನವರ ಅವಾಜ್ ಪ್ರತಿಧ್ವನಿಗೊಳ್ಳುತ್ತಿದ್ದಂತೆ ಉತ್ಸವದಲ್ಲಿ ಸೇರಿದತ ಜನ ಸ್ಥಬದ್ದವಾಯಿತು. ಭಾಷಣದ ಕೊನೆತನಕ ಸಾಮಾಜಿಕ ಕಳಕಳಿ, ಆಡಳಿತ ವ್ಯವಸ್ಥೆಯಲ್ಲಿ ಕ್ರಿಯಾಹೀನತೆಯ ಆಕ್ರೋಶ ಮುಂದುವರೆದಿತ್ತು.
ಆರಂಭದಲ್ಲಿ ಸಚಿವರು ಚನ್ನಮ್ಮನ ಹೆಸರು ಹೇಳುತ್ತಿದ್ದಂತೆ ವೇದಿಕೆಯ ಮೂಲೆಚಿiÀುಲ್ಲಿ ಕುಳಿತ್ತಿದ್ದ ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ಐಹೊಳೆ ಅವರನ್ನು ಉದ್ದೇಶಿಸಿ, “ಜಿಲ್ಲಾ ಪಂಚಾಯಿತಿ ಅಧ್ಯಕ್ಷರೇ!!, ಚನ್ನಮ್ಮನಿಂದ ಕಲಿಯಿರಿ..!!’’ ಎಂದು ಜೋರಾಗಿ ಹೇಳಿದಾಳ ಅದುವರೆಗೆ ಮೆತ್ತಗೆ ಕೂತಿದ್ದ ಆಶಾ ಅವರು ಕಾಗೋಡು ತಿಮ್ಮಪ್ಪನವರ ಪ್ರತಿಧ್ವನಿಯಿಂದ ಹಲಚಲಾಗಿ ಎದ್ದು ನಿಂತು ಸಭಿಕರಿಗೆ ನಮಸ್ಕರಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಮುಂದುವರೆದು ಮಾತನಾಡಲಿಲ್ಲವದರೂ ಆಡಿದ ಎರಡೇ ಮಾತಿನ ಪ್ರತಿಧ್ವನಿಯಲ್ಲಿ ಹೊರ ರಾಜ್ಯವನ್ನು ಕಟ್ಟಿ ನಾಡನ್ನು ಧೈರ್ಯದಿಂದ ಆಳಿ, ಬ್ರಿಟಿಷರ ವಿರುದ್ದ ಗುಡುಗಿದ ಮಹಿಳೆಯಂತೆ ನಮ್ಮ ಜನ ಪ್ರತಿನಿಧಿ ಮಹಿಳೆಯರು ಧೈರ್ಯಶಾಲಿಗಳಾಗಬೇಕು ಎಂಬ ಸೂಚನೆ ಇತ್ತು.
ಈ ಮಧ್ಯ ಸಾರ್ವಜನಿಕ ಆಡಳಿತದ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ ಅವರು, ಬೆಳಗಾವಿ ಜಿಲ್ಲಾ ಆಡಳಿತ ಮಲಗಿದೆ ಎಂದು ಛೇಡಿಸಿದರು. ಇದಕ್ಕಾಗಿ ಸಾರ್ವಜನಿಕರು ಅವಾಜ್ ಮಾಡಬೇಕು ಎಂದು ಹೇಳಿದಾಗ ವೇದಿಕಯ ಮೇಲೆ ಇದ್ದ ಅಧಿಕಾರಿಗಳು ಕಾಗೋಡು ತಿಮ್ಮಪ್ಪನವರನ್ನೇ ಹವ್ವಹಾರಿ ನೋಡುತ್ತಿದ್ದರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *