ಬೆಳಗಾವಿಯಲ್ಲಿ ಪ್ರತಿಭಟನೆಗಳ ಮಹಾಪೂರ….
ಬೆಳಗಾವಿ- ಅತ್ತ ಬೆಂಗಳೂರಿನಲ್ಲಿ ವಿಧಾನಸಭೆಯ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಇತ್ತ ಬೆಳಗಾವಿಯಲ್ಲಿ ಪ್ರತಿಭಟನೆಗಳು ಜೋರಾಗಿಯೇ ನಡೆಯುತ್ತಿವೆ.
ಬೆಳಗಾವಿ ಸಮೀಪದ ಸಾಂಬ್ರಾ ಗ್ರಾಮದಲ್ಲಿ ಸರ್ಕಾರಿ ಗಾಯರಾಣದ ಜಾಗೆಯಲ್ಲಿ ಗ್ರಾಮ ಪಂಚಾಯತಿ ಯವರು ಕಚರಾ ಡಿಪೋ ಮಾಡಲು ಹೊರಟಿರುವದನ್ನು ವಿರೋಧಿಸಿ ಗ್ರಾಮದ ರೈತರು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಚರಾ ಡಿಪೋಗೆ ತೀವ್ರ ವಿರೋಧ ವ್ಯೆಕ್ತ ಪಡಿಸಿದರು.
ಸಾಂಬ್ರಾ ಗ್ರಾಮದ ರೈತರ ಜಮೀನನ್ನು ಈಗಾಗಲೇ ಏರ್ ಫೋರ್ಸ್ ಮತ್ತು ಏರ್ ಪೋರ್ಟ್ ನಿರ್ಮಾಣಕ್ಕೆ ಪಡೆಯಲಾಗಿದೆ ಆದರೆ ಗ್ರಾಮದಲ್ಲಿರುವ ರೈತರ ಸಾವಿರಕ್ಕೂ ಹೆಚ್ಚು ದನಕರುಗಳಿಗೆ ಮೇಯಲು ಜಾಗವೇ ಇಲ್ಲ,ಸರ್ಕಾರದ ಗಾಯರಾಣದ ಜಮೀನಿನಲ್ಲಿ ಕಚರಾ ಡಿಪೋ ಮಾಡಬಾರದು ಎಂದು ಸಾಂಬ್ರಾ ಗ್ರಾಮದ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು
ಅಂಗನವಾಡಿಯ ನೂರಾರು ಕಾರ್ಯಕರ್ತೆಯರು ಇಂದು,ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಅಂಗನವಾಡಿಯಲ್ಲಿ ಎಲ್ ಕೆಜಿ ,ಯು ಕೆಜಿ ನಡೆಯಬೇಕು,ಅಂಗನವಾಡಿ ಮಕ್ಕಳಿಗೂ ಸಮವಸ್ತ್ರ ನೀಡಬೇಕು,ಅಂಗನವಾಡಿಯ ಮಕ್ಕಳಿಗೂ LC ನೀಡುವ ಪದ್ದತಿ ಆರಂಭಿಸುವದು ಪಠ್ಯ ಪುಸ್ತಕ ನೀಡುವದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.