Breaking News

ರಾಜ್ಯ ಸರ್ಕಾರದ ವಿರುದ್ಧ ಸಂಸದ ಅಂಗಡಿ ವಾಗ್ದಾಳಿ

ಸ್ಮಾರ್ಟ ಸಿಟಿ ಯೋಜನೆಯ ವಿಷಯದಲ್ಲಿ ರಾಜ್ಯ ಸರ್ಕಾರ ಬೆಳಗಾವಿಯನ್ನು ಕೆಡೆಗನಿಸುತ್ತಿದೆ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಸಂಸದ ಸುರೇಶ ಅಂಗಡಿ ಆರೋಪಿಸಿದ್ದಾರೆ

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು

ಬಿಜೆಪಿಯ ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್ ಅವಧಿಯಲ್ಲಿ ಬೆಳಗಾವಿಯನ್ನು ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಈಗಾಗಲೇ ಕೇಂದ್ರ ಸರಕಾರ  ೧೯೬ಕೋಟಿ ನೀಡಿದೆ. ಈಗ ರಾಜ್ಯ ಸರಕಾರ ತನ್ನ ೨೦೦ ಕೋಟಿ ಕೊಡಬೇಕಾಗಿದೆ. ಜತೆಗೆ ಪಾಲಿಕೆ ೧೦೦ ಕೋಟಿ ಸೇರಿಸಿದೆರೆ ಒಟ್ಟು ೫೦೦ಕೋಟಿ ಸಿಗುತ್ತದೆ. ಆದರೆ ಈ ಕೆಲಸ ಆಗುತ್ತಿಲ್ಲ  ಸರ್ಕಾರ ಸ್ಮಾರ್ಟ ಸಿಟಿ ಯೋಜನೆಯ ಬಗ್ಗೆ ತೆಲೆಕೆಡಿಸಿಕೊಳ್ಳುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು
ದೇವರಾಜ ಅರಸು ಕಾಲದಲ್ಲಿ ಅಭಿವೃದ್ಧಿ ಆಗಿದೆ ನಂತರದ ಯಾವ ಕಾಂಗ್ರೆಸ್ ಸರಕಾರದಲ್ಲೂ ರಾಜ್ಯಕ್ಕೆ ಒಳಿತಾಗಿಲ್ಲ ಎಂದು ಆರೋಪಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜಿಲ್ಲಾಧಿಕಾರಿ, ನಗರಕ್ಕೆ ಸಂಬಂಧಿಸಿದ ಎಂಪಿ, ಎಂ ಎಲ್ ಎ ಸೇರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರಕಾರ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು. ಕೇಂದ್ರ ಸರಕಾರ ಸ್ಮಾರ್ಟ್ ಸಿಟಿ ಯೋಜನೆ ಜಾರಿ ಉಆಯಾ ರಾಜ್ಯ ಸರಕಾರಗಳಿಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನಗರಾಭಿವೃದ್ದಿ ಸಚಿವ ರೋಷನ ಬೇಗ್ ಅವರಿಗೆ ಬೆಳಗಾವಿಯೆಂದರೆ ತಾತ್ಸಾರ ಎಂದು ಸರಕಾರದ ವಿರುದ್ದ ಸುರೇಶ ಅಂಗಡಿ ಅಸಮಧಾನ ವ್ಯಕ್ತಪಡಿಸಿದರು. ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ರಾಜ್ಯ ಸರಕಾರ ಪ್ರತಮಾಧ್ಯತೆ ನೀಡಬೇಕೆಂದು  ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಸ್ಮಾರ್ಟ ಸಿಟಿ ಯೋಜನೆಯ ಬಗ್ಗೆ ಚರ್ಚೆ ನಡೆಯಬೇಕು ಒಂದು ದಿನ ಬೆಳಗಾವಿ ನಗರದ ಅಭಿವೃದ್ಧಯ ನಗ್ಗೆ ಒಂದು ದಿನ ಮಹಾದಾಯಿ ಬಗ್ಗೆ ಇನ್ನೊಂದು ದಿನ ಉತ್ತರಕರ್ನಾಟಕದ ಬಗ್ಗೆ ಚರ್ಚೆಯಾಗಲಿ ಎಂದು ಸುರೇಶ ಅಂಗಡಿ ಒತ್ರಾಯಿಸಿದರು

Check Also

ಲಕ್ಷ ರೂ ಸಾಲದಲ್ಲಿ, ಫಿಫ್ಟೀ ,ಗುಳುಂ, ಸಾವಿರಾರು ಮಹಿಳೆಯರು ಗರಂ….!!!!

ಮನೆಗೆ ಬಂದು ಒಂದು ಲಕ್ಷ ರೂ ಸಾಲ ಕೊಡ್ತಿವಿ ಅಂತಾ ಹೇಳಿದ್ರೆ ಯಾರಾದ್ರೂ ಬೇಡ ಅಂತಾರಾ…? ಮೈಕ್ರೋ ಫೈನಾನ್ಸ್ ಮೂಲಕ …

Leave a Reply

Your email address will not be published. Required fields are marked *