ಬೆಳಗಾವಿ:ವಿವಿಧ ಹಣಕಾಸು ಸಂಸ್ಥೆಗಳಿಂದ ವಾಹನಗಳ ಮೇಲೆ ಸಾಲ ಪಡೆದು ಚೆಸ್ಸಿ ನಂಬರ ಬದಲಾಯಿಸುತ್ತಿದ್ದ ವಂಚಕರ ಗುಂಪನ್ನು ಪತ್ತೆ ಹಚ್ಚಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಎಸ್ ಪಿ ರವಿಕಾಂತೇಗೌಡ ಒಟ್ಟು ೮ ಜನರನ್ನು ವಶಪಡಿಸಿಕೊಂಡಿದ್ದು ೩ ಜನ ಪರಾರಿಯಾಗಿದ್ದಾರೆ ಎಂದರು. ವಾಸುದೇವ ನಾಯಕ, ಚಂದ್ರಕಾಂತ ಗಾಡಿವಡ್ಡರ, ಮಹೇಶ ಗಾಡಿವಡ್ಡರ, ಉಸ್ಮಾನ್ ಮನಿಯಾರ್, ಮಹಾವೀರ ಗಾಡಿವಡ್ಡರ, ಪ್ರಭಾಕರ ಪೋಳ, ವಿನಾಯಕ ಪೋಳ, ರಾಮಪ್ಪ ಗಾಣಿಗೇರ ಎಂಬುವರನ್ನು ವಿವಿಧ ವಾಹನ ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದೆ.
ಆರೋಪಿತರಿಂದ ೬ ಟ್ರ್ಯಾಕ್ಟರ್, ಬುಲೆರೋ ಹಾಗೂ ಮ್ಯಾಕ್ಸಿ ವಾಹನಗಳು ೪, ಟಾಟಾ ಬೋಲ್ಟ್ ೧, ಮಹಿಂದ್ರಾ ಕಾರ್೧, ಬುಲೆರೋ ೩, ಗೂಡ್ಸ್ ೪ ಸೇರಿದಂತೆ ೧ಕೋಟಿ ೬ ಲಕ್ಷ ಮೌಲ್ಯದ ೧೯ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಫೇಕ್ ದಾಖಲಾತಿ ತಯಾರಿಸಲು ಉಪಯೋಗಿಸುತ್ತಿದ್ದ ಕಂಪ್ಯೂಟರ್ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಇದು ಆಂತಾರಾಜ್ಯ ವಂಚನೆಯ ಜಾಲವಾಗಿದ್ದು ಬಾಗಲಕೋಟ, ವಿಜಯಪುರ, ಗದಗ ಆರ್ ಟಿಪ್ಪಣಿ ಮುದ್ರೆಗಳು ಸಹ ಇವರ ಬಳಿ ಸಿಕ್ಕಿವೆ. ಕೇರಳ, ಮಹಾರಾಷ್ಟ್ರದಲ್ಲಿ ಜಾಲ ಹಬ್ಬಿರುವುದು ಖಚಿತ ಪಟ್ಟಿದೆ ಎಂದರು.
ಹೆಚ್ಚುವರಿ ಎಸ್ ಪಿ ರವೀಂದ್ರ ಗಡಾದಿ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.