ಬೆಳಗಾವಿ-ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ 1924ರಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನಕ್ಕೆ ಇದೀಗ ನೂರನೇ ವರ್ಷದ ಸಂಭ್ರಮಾಚರಣೆ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಕಾಂಗ್ರೆಸ್ ಅಧಿವೇಶನದ ಸ್ಮರಣೆಗಾಗಿ ಡಿ. 26 ಮತ್ತು 27 ರಂದು ಕಾಂಗ್ರೆಸ್ ಅಧಿವೇಶನದ ಕಾರ್ಯಕ್ರಮ ಆಯೋಜಿಸಲಾಗಿದೆ.1924ರಲ್ಲಿ ಬೆಳಗಾವಿಗೆ ಆಗಮಿಸಿದ್ದ ಮಹಾತ್ಮ ಗಾಂಧೀಜಿ ಅವರನ್ನು ಕಾರಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗಿತ್ತು.
ಗಾಂಧೀಜಿ ಅವರಿಗೆ ಬೆಳಗಾವಿಯ ಬೋರಾಗವೇಸ್ ಬಳಿಯಿರುವ ಜಾಂಬೋಟಕರ ಕುಟುಂಬದವರು ತಮ್ಮ ಕಾರನ್ನು ನೀಡಿದ್ದರು. ಹಾಗಾಗಿ, ಸರ್ಕಾರ ಆ ಕಾರನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡುತ್ತಿದೆ ಎನ್ನಲಾಗಿದೆ.
ಅಂದು ಗಾಂಧೀಜಿ ಅವರಿಗೆ ಬೆಳಗಾವಿಯಲ್ಲಿ ಆತಿಥ್ಯ ನೀಡಿ, ಅವರು ಬಳಸಿದ್ದ ಕಾರ್‌ನ್ನು ಈ ಸಂದರ್ಭದಲ್ಲಿ ತಂದು, ಅದನ್ನು ಗಾಂಧೀ ಸ್ಮಾರಕವನ್ನಾಗಿಸಲು ಸರ್ಕಾರ ಮುಂದಾಗಿದೆ. ಆದರೆ, ಆ ಕಾರನ್ನು ಜಾಂಬೋಟಕರ ಕುಟುಂಬದವರು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಆ ಕಾರನ್ನು ಗುಜರಾತ್ ರಾಜ್ಯಕ್ಕೆ ಮಾರಾಟ ಮಾಡಲಾಗಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರವು ಕಾರನ್ನು ಪತ್ತೆ ಮಾಡುವ ಕಾರ್ಯ ಕೈಗೊಂಡಿದೆ. ಆ ಕಾರಿಗಾಗಿ ಶೋಧ ಕಾರ್ಯವೂ ನಡೆದಿದೆ. ಆ ಕಾರು ಎಲ್ಲಿದೆ? ಈಗ ಹೇಗಿದೆ? ಎಂಬುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಆ ಕಾರು ಸಿಕ್ಕ ಬಳಿಕ ಅದನ್ನು ಮಾಡಿ ಪೈ ಮಾಡಿ ಅದನ್ನು ಸ್ಮಾರಕವನ್ನಾಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂಬ ಮಾಹಿತಿ ಬೆಳಗಾವಿ ಡಾಟ್ ಕಾಮ್‌ಗೆ ಲಭ್ಯವಾಗಿದೆ.