Breaking News
Home / Breaking News / ಚೊಕ್ಕ ಮನಸ್ಸಿನ ಚಿಕ್ಕ ಯಜಮಾನ್ರು ಈ ಬಾರಿ M L A ಇಲೆಕ್ಷನ್ ಗೆ ನಿಲ್ತಾರಂತೆ…!

ಚೊಕ್ಕ ಮನಸ್ಸಿನ ಚಿಕ್ಕ ಯಜಮಾನ್ರು ಈ ಬಾರಿ M L A ಇಲೆಕ್ಷನ್ ಗೆ ನಿಲ್ತಾರಂತೆ…!

ಬೆಳಗಾವಿ- ಗೋಕಾಕ ತಾಲೂಕಿನ ಜನ ನಮ್ಮ ಬಂಧುಗಳು ಗೋಕಾಕ ತಾಲೂಕು ನಮ್ಮ ಕುಟುಂಬ ಎಂದು ತಾಲೂಕಿನ ಜನರ ಸುಖ ದುಖಗಳಲ್ಲಿ ಪಾಲ್ಗೊಂಡು ಅಪಾರ ಜನ ಮೆಚ್ಚುಗೆ ಗಳಿಸಿರುವ ಜಾರಕಿಹೊಳಿ ಕುಟುಂಬದ ಚೊಕ್ಕ ಮನಸ್ಸಿನ ಚಿಕ್ಕ ಯಜಮಾನ ಲಖನ್ ಜಾರಕಿಹೊಳಿ ರಾಜಕೀಯ ರಂಗದಲ್ಲಿ ಧುಮುಕಲು ಜೋರದಾರ ತಯಾರಿ ನಡೆಸಿದ್ದಾರೆ

ಈ ಸಲ ನಾನು ಯಮಕನಮರಡಿ ಕ್ಷೇತ್ರದಿಂದ ನಾನು ನಿಲ್ಲುತ್ತೇನೆ ಬೆಳಗಾವಿ ಉತ್ರರದಿಂದ ಸತೀಶಣ್ಣ ನಿಲ್ತಾರೆ ಅಂತ ಲಖನ್ ಜಾರಕಿಹೊಳಿ ತಮ್ಮ ಆಪ್ತರ ಎದುರು ಹೇಳಿಕೊಂಡಿದ್ದಾರೆ ಅವರೇನಾದರು ಮುಂದಿನ ಚುನಾವಣೆಯಲ್ಲಿ ಗೆದ್ದರೆ ಜಾರಕಿಹೊಳಿ ಕುಟುಂಬ ನಾಲ್ಕು ಜನ ಸಹೋದರರು ಶಾಸಕರಾಗುವ ಮೂಲಕ ಹೊಸ ದಾಖಲೆ ಮಾಡಲಿದ್ದಾರೆ

ಸತೀಶ ಜಾರಕಿಹೊಳಿ ಕುಟುಂಬದ ಮಾಸ್ಟರ್ ಮೈಂಡ್ ಬಾಲಚಂದ್ರ ದಾನ ಶೂರ,ರಮೇಶ ನೇರ ನುಡಿಯ ಕೆಲಸಗಾರ ಲಖನ್ ಜಾರಕಿಹೊಳಿ ಎಲ್ಲರಕ್ಕಿಂತ ಕಿರಿಯರಾದರೂ ಕುಟುಂಬದಲ್ಲಿ ಹಿರಿಯಣ್ಣನ ಪಾತ್ರ ನಿಭಾಯಿಸುತ್ತಾರೆ ಎಲ್ಲ ಸಹೋದರರು ಆಯೋಜಿಸುವ ಕಾರ್ಯಕ್ರಮಗಳನ್ನು ಅಷ್ಟೇ ನೀಟಾಗಿ ನಿಭಾಯಿಸುತ್ತಾರೆ

ಸಂಘಟನಾ ಚಾತುರ್ಯ ಹೊಂದಿರುವ ಲಖನ್ ಜಾರಕಿಹೊಳಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗುವ ಇಚ್ಛಾಶಕ್ತಿಯಿಂದ ಈಗ ರಾಜಕೀಯ ಕ್ಷೇತ್ರದಲ್ಲಿ ಕ್ರೀಯಾಶೀಲರಾಗಿದ್ದಾರೆ

ಜಾರಕಿಹೊಳಿ ಕುಟುಂಬದ ಮೂರು ಜನ ಸಹೋದರರಾದ ಸತೀಶ ಜಾರಕಿಹೊಳಿ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಬಾಲಚಂದ್ರ ಜಾರಕಿಹೊಳಿ ಮಾತ್ರ ಬಿಜೆಪಿ ಪಕ್ಷದಲ್ಲಿದ್ದಾರೆ ಈಗ ಲಖನ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿ ಕ್ರೀಯಾಶೀಲರಾಗಿದ್ದಾರೆ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ತಪ್ಪದೇ ಪಾಲ್ಗೊಂಡು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ

ಜಾರಕಿಹೊಳಿ ಸಹೋದರರು ಜಿಲ್ಲೆಯ ಯಾವದೇ ಗ್ರಾಮದಲ್ಲಿ ಹೋಗಿ ನಿಂತರೆ ಅಲ್ಲಿ ಜನ ಜಾತ್ರೆಯೇ ಸೇರುತ್ತದೆ ಅವರು ನಡೆದರೆ ಅಲ್ಲಿ ಮೆರವಣಿಗೆ ಹೊರಡುವದು ಗ್ಯಾರಂಟಿ ಏಕೆಂದರೆ ಅವರು ಅಷ್ಟೊಂದು ಜನ ಮೆಚ್ಚುಗೆ ಗಳಿಸಿದ್ದಾರೆ

ರಮೇಶ ಜಾರಕಿಹೊಳಿ  ಮಂತ್ರಿ ಆದಾಗಿನಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದೆ ಮನೆ ಸೇರಿಕೊಂಡಿದ್ದ ಹಲವಾರು ಜನ ನಿಷ್ಠಾವಂತ ಕಾರ್ಯಕರ್ತರು ಮನೆ ಬಿಟ್ಟು ಈಗ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ರಿದ್ದಾರೆ

ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ನೇರವಾಗಿ ಬೆಳಗಾವಿಯ ಪುಲಬಾಗ್ ಗಲ್ಲಿಯ ಕಾಂಗ್ರೆಸ ಕಚೇರಿಗೆ ಆಗಮಿಸಿ ಕಚೇರಿಯ ಹೊಸ್ತಿಲಕ್ಕೆ ಶಿರಬಾಗಿ ನಮಸ್ಕರಿಸಿ ಹಿರಿಯ ಕಾರ್ಯಕರ್ತ ಮಿರಜಕರ ಅವರ ಕಾಲಿಗೆ ನಮಸ್ಕರಿಸಿ ಅವರಿಂದ ಆಶಿರ್ವಾದ ಪಡೆದಿರುವ ರಮೇಶ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ನನ್ನ ಉಸಿರು ಕಾರ್ಯಕರ್ತರು ನನ್ನ ಜೀವ ಎಂದು ಕಟ್ಟ ಕಡೇಯ ಕಾರ್ಯಕರ್ತನ ಸಮಸ್ತೆಗೆ ಸ್ಪಂದಿಸುತ್ತಿರುವದರಿಂದ ಪಕ್ಷದ ಸಂಘಟನೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಿದೆ ಅಂತಾರೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು

ಒಟ್ಟಾರೆ ಜಾರಕಿಹೊಳಿ ಕುಟುಂಬದ ಮತ್ತೊಂದು ಕುಡಿ ಜಿಲ್ಲೆಯ ರಾಜಕಾರಣದಲ್ಲಿ ಸ್ಪರ್ಧೆಯೊಡ್ಡಲಿದೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಅನ್ನೋದನ್ನು ಕಾದು ನೋಡಬೇಕಾಗಿದೆ

Check Also

ಮನೆ,ಮನೆಗೆ ಹೋಗಿ ಮತದಾರರ ಚೀಟಿ ವಿತರಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ, ):ಮತದಾರರಿಗೆ ತಮ್ಮ ಮತಗಟ್ಟೆಗಳ ಬಗ್ಗೆ ಮುಂಚಿತವಾಗಿ ಮತದಾರರ ಚೀಟಿ(ವೋಟರ್ ಸ್ಲಿಪ್)ಗಳನ್ನು ನೀಡಿದರೆ ಮತದಾನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಂದು …

Leave a Reply

Your email address will not be published. Required fields are marked *