Breaking News

ಪ್ರಚಾರದಲ್ಲೂ ಅಭಯ ಪಾಟೀಲ ಡಿಫರಂಟ್ ….!!!

ಬೆಳಗಾವಿ – ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಶಾಸಕ ಅಭಯ ಪಾಟೀಲ ವಿಶಿಷ್ಟವಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ

ಇಂದು ಬೆಳಿಗ್ಗೆ 7 ಗಂಟೆಯಿಂದ ಸುಮಾರು ನಾಲ್ಕು ಸಾವಿರ ಕಾರ್ಯಕರ್ತರು ದಕ್ಷಿಣ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರ ಪರವಾಗಿ ಪ್ರಚಾರ ನಡೆಸಿದ್ದಾರೆ

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಒಟ್ಟು 251 ಮತಗಟ್ಟೆಗಳಿದ್ದು ಪ್ರತಿಯೊಂದು ಮತಗಟ್ಟೆಯ ವ್ಯಾಪ್ತಿಯಲ್ಲಿ ಸುಮಾರು 15 ರಿಂದ 20 ಯುವಕರು ಸಂಚರಿಸಿ ಪ್ರತಿಯೊಂದು ಮನೆಗೆ ಭೇಟಿ ನೋಡಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಸಾಧನೆಗಳನ್ನು ,ಯಡಿಯೂರಪ್ಪ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ,ಮತ್ತುಶಾಸಕ ಅಭಯ ಪಾಟೀಲರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕ್ಷೇತ್ರದ ಜನರಿಗೆ ಮಾಹಿತಿ ನೀಡಿ ಬಿಜೆಪಿ ಪರವಾಗಿ ಮತಯಾಚಿಸುತ್ತಿದ್ದಾರೆ

251 ಮತಗಟ್ಟೆಗಳಲ್ಲಿ,ಸುಮಾರು ನಾಲ್ಕು ಸಾವಿರ ಕಾರ್ಯಕರ್ತರು ಇಂದು ಬೆಳಿಗ್ಗೆ ಕ್ಷೇತ್ರದ 58 ಸಾವಿರ ಮನೆಗಳಿಗೂ ತಲುಪಿ ಬಿಜೆಪಿ ಸಾಧನೆಗಳ ಮಾಹಿತಿ ನೀಡುವ ಕರಪತ್ರಗಳನ್ನು ಹಂಚಿದ್ದಾರೆ ಬೆಳಿಗ್ಗೆ 7 ಘಂಟೆಗೆ ಆರಂಭವಾದ ಪ್ರಚಾರದ ಅಭಿಯಾನ ಬೆಳಿಗ್ಗೆ 11ಘಂಟೆಗೆ ಮುಕ್ತಾಯವಾಗಿದೆ

ಮಂಗಳೂರ ಹೊರತು ಪಡಿಸಿ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲೇ ಈ ರೀತಿಯ ಪ್ರಚಾರ ನಡೆಯುತ್ತಿದೆ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪರವಾಗಿ ಮತಯಾಚಿಸುವ ಜೊತೆಗೆ ಪ್ರತಿಯೊಬ್ಬ ಮತದಾರ ಮತದಾನ ಮಾಡುವಂತೆ ಜಾಗೃತಿ ಮಾಡಿದ್ದಾರೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇದೆ ಈ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗುವದು ನಿಶ್ಚಿತ ಬೆಳಗಾವಿ ಚಿಕ್ಕೋಡಿ ಸೇರಿದಂತೆ ಮುಂಬೈ ಕರ್ನಾಟಕದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ದೇಶದ ಜನ ನರೇಂದ್ರ ಮೋದಿ ಮತ್ತೊಮ್ಮೆ ಎಂದು ನಿರ್ಧರಿದ್ದಾರೆ ಚುನಾವಣೆಯ ಫಲಿತಾಂಶದ ದಿನ ಇದು ಸಾಭೀತಾಗುತ್ತದೆ ಎಂದು ಅಭಯ ಪಾಟೀಲ ವಿಶ್ವಾಸ ವ್ಯೆಕ್ತ ಪಡಿಸಿದ್ದಾರೆ .

ಯಡಿಯೂರಪ್ಪನವರ ಸರ್ಕಾರ ಬೆಳಗಾವಿಯ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ಕೊಟ್ಟಿದೆ ಬೆಳಗಾವಿ ನಗರದ ಅಭಿವೃದ್ದಿಗೆ ಮೊಟ್ಟ ಮೊದಲ ಬಾರಿಗೆ ನೂರು ಕೋಟಿ ಕೊಟ್ಟಿದ್ದು,ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಿದ್ದು ಇಂತಹ ಅನೇಕ ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಮಾಡಿದೆ ಕಾಂಗ್ರೆಸ್ ನಾಯಕರು ಬಿಜೆಪಿ ಬೆಳಗಾವಿಗಾಗಿ ಏನೂ ಮಾಡಿಲ್ಲ ಎಂದು ಟೀಕೆ ಮಾಡುತ್ತಿರುವದು ಹಾಸ್ಯಾಸ್ಪದ ಎಂದು ಅಭಯ ಪಾಟೀಲ ಹೇಳಿದ್ದಾರೆ
ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲೋದು ಗ್ಯಾರಂಟಿ ಎಂದು ಅಭಯ ಪಾಟೀಲ ವಿಶ್ವಾಸ ವ್ಯೆಕ್ತಪಡಿಸಿದ್ದಾರೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *