ಯಾವತ್ತೂ ನೇಕಾರರ ಕಳಕಳಿಯ ಚಿಂತಕರು, ಬೆಳಗಾವಿ ದಕ್ಷಿಣ ಮತಕ್ಷೇತ್ರದ
ಮಾನ್ಯ ಶಾಸಕರಾದ ಶ್ರೀ ಅಭಯ ಪಾಟೀಲ ರವರ ನೇತೃತ್ವದಲ್ಲಿ “ಬೆಳಗಾವಿ ಜಿಲ್ಲೆ ಮತ್ತು ಉತ್ತರ ಕರ್ನಾಟಕ ನೇಕಾರ ಸಮಾಜದ ಪ್ರಮುಖರ ನಿಯೋಗವು”
ಇಂದು ಬೆಂಗಳೂರಿನ ಮುಖ್ಯಮಂತ್ರಿಗಳ
“ಗೃಹ ಕಚೇರಿ ಕೃಷ್ಣಾ ” ದಲ್ಲಿ
ಮಾನ್ಯ ಮುಖ್ಯಮಂತ್ರಿಗಳು ಸನ್ಮಾನ ಶ್ರೀ ಬಿ ಎಸ್ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನೇಕಾರ ವಿಶೇಷ ಸಭೆ ಜರುಗಿತು. ಸುಮಾರು 55 ನಿಮಿಷಗಳ ಕಾಲ ರಾಜ್ಯದ ನೇಕಾರರ ಪ್ರಚಲಿತ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ತೆಗೆದು ಕೊಂಡ ನಿರ್ಣಯಗಳು…
1) “ರೈತರ ಕಿಸಾನ್ ಸನ್ಮಾನ ನಿಧಿ” ಯೋಜನೆಯಂತೆ ರಾಜ್ಯದ ನೇಕಾರರ ಕುಟಂಬಗಳಿಗೂ 2000 ರೂ, ದಂತೆ “ನೇಕಾರ ಸಮ್ಮಾನ್ ನಿಧಿ” ನೀಡುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಐತಿಹಾಸಿಕ ಘೋಷಣೆ ಮಾಡಿದರು.
2) ಸರಕಾರಿ ವಿವಿಧ ಇಲಾಖೆಗಳಿಗೆ ಬೇಕಾದ ಬಟ್ಟೆ /ಸೀರೆಗಳನ್ನು ರಾಜ್ಯದ ನೇಕಾರರಿಂದಲೇ ನೇರವಾಗಿ ಉತ್ಪಾದಿಸಿ ಖರೀದಿಸುವ ಆದೇಶ ನೀಡುವ ಐತಿಹಾಸಿಕ ನಿರ್ಣಯ ಮಾಡಲಾಯಿತು .
3) ಸಾಲಮನ್ನಾ ಯೋಜನೆಯ ಅವಧಿಯನ್ನು 31/3/2019 ದಿಂದ 31/06/2020 ರ ವರೆಗೂ ಅವಧಿ ವಿಸ್ತರಣೆ ಮಾಡಿ, ಸಾಲ ಮತ್ತು ಬಡ್ಡಿ ಮನ್ನಾ ಯೋಜನೆ ಹೊಸ ಮಾರ್ಗ ಸೂಚಿ ರಚಿಸಲು ತೀರ್ಮಾನಿಸಲಾಯಿತು.
ಒಟ್ಟಾರೆ, ಉತ್ತರ ಕರ್ನಾಟಕ ನೇಕಾರ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಅನುಧಾನ ನೀಡುವಂತೆ ಚರ್ಚೆಯಲ್ಲಿ ಉತ್ತರ ಕರ್ನಾಟಕದ ಶಾಸಕರುಗಳಾದ ಮಾನ್ಯ ಉಪ ಮುಖ್ಯಮಂತ್ರಿಗಳು ಶ್ರೀ ಗೋವಿಂದ ಕಾರಜೋಳ, ಮಾನ್ಯ ಸಿದ್ದು, ಸವದಿ, ತೆರದಾಳ ಕೇತ್ರದ ಶಾಸಕರು, ಮಾನ್ಯ ಶಾಸಕರಾದ ಚರಂತಿಮಠರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿ ನೇಕಾರ ಮುಖಂಡರ ನಿಯೋಗದ ಪ್ರತಿನಿಧಿಗಳಾದ ಜಿ. ರಮೇಶ್, ಗಜಾನನ ಗುಂಜೇರಿ, ಸಂತೋಷ ಟೊಪಗಿ, ಭುಜಂಗ್ ಭಂಡಾರಿ, ವೆಂಕಟೇಶ್ ವನಹಳ್ಳಿ, ಶಂಕರ ಢವಳಿ, ಈರಪ್ಪಾ ತಿಗಡಿ.
ಉಪಸ್ಥಿತರಿದ್ದರು..
