ಬೆಳಗಾವಿ- ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬವಾಗುತ್ತಿರುವ ಕಾರಣ ಭೂಪಾಲ್ ಗೆ ಭೇಟಿ ನೀಡಿ ಅಲ್ಲಿಯ ಕಾಮಗಾರಿ ವಿಕ್ಷಿಸಿದ ಶಾಸಕ ಅಭಯ ಪಾಟೀಲ ಬೆಳಗಾವಿ ಕಾಮಗಾರಿಯ ಕುರಿತು ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ
ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬವಾಗುತ್ತಿದೆ,ಯೋಜನಾ ವೆಚ್ಚವೂ ಹೆಚ್ಚಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಸ್ಮಾರ್ಟ್ ಸಿಟಿ ಅಧಿಕಾರಿಗೆ ದೂರು ನೀಡಿ ಈ ಕುರಿತು ಅದ್ಯಯನ ಪ್ರವಾಸ ಕೈಗೊಳ್ಳುವಂತೆ ಶಾಸಕ ಅಭಯ ಪಾಟೀಲ ಮನವಿ ಮಾಡಿಕೊಂಡ ಕಾರಣ ಭೂಪಾಲ್ ನಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಸಿಸಲು ರಾಜ್ಯದ ತಂಡ ಭೂಪಾಲ್ ಗೆ ಹೋಗಿತ್ತು
ಭೂಪಾಲ್ ನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಆಕರ್ಷಕ ಸೈಕಲ್ ಟ್ರ್ಯಾಕ್.ಕಮಾಂಡ್ ಸೆಂಟರ್ ಸೇರಿದಂತೆ ಹಲವಾರು ಕಾಮಗಾರಿಗಳು ಮುಗೆದು ಕಮಾಂಡ್ ಸೆಂಟರ್ ಕೂಡಾ ರೆಡಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ ಆದರೆ ಬೆಳಗಾವಿಯಲ್ಲಿ ಇನ್ನೂವರೆಗೆ ಒಂದೂ ಕಾಮಗಾರಿ ಮುಗಿಯದೇ ಇರುವದು ಅದ್ಯಯನ ತಂಡದ ಅಸಮಾಧಾನಕ್ಕೆ ಕಾರಣವಾಯಿತು
ಭೂಪಾಲ್ ನಲ್ಲಿ ಕಾಮಗಾರಿಗಳು ಮುಗಿದಿವೆ ಆದರೆ ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿವೆ ಮಂಡೊಳ್ಳಿ ರಸ್ತೆ,,ಮತ್ತು ಕೆಪಿಟಿಸಿಎಲ್ ರಸ್ತೆಯ ಕಾಮಗಾರಿಯ ಯೋಜನಾ ವೆಚ್ಚವೂ ಹೆಚ್ಚಾಗಿದೆ ಈ ಕುರಿತು ಕ್ರಮ ಕೈಗೊಂಡು ತ್ವರಿತಗತಿಯಲ್ಲಿ ಕಾಮಗಾರಿ ನಡೆಸುವಂತೆ ರಾಜ್ಯದ ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ
ಸ್ಮಾರ್ಟ್ ಸಿಟಿಯ ಕಾಮಗಾರಿಗಳ ಕುರಿತು ಬೆಳಗಾವಿಯ ಜನ ಉತ್ಸುಕರಾಗಿದ್ದಾರೆ ಕಾಮಗಾರಿಗಳು ವಿಳಂಬವಾಗಿ ಈಗ ನಡೆಯುತ್ತಿರುವ ಕಾಮಗಾರಿಗಳಲ್ಲಿ ಗುತ್ತಿಗೆದಾರ ಗೋಲ್ ಮಾಲ್ ನಡೆಸಿದ್ದು ರಾಜ್ಯದ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದಿದ್ದರೆ ಈ ವಿಷಯವನ್ನು ಕೇಂದ್ರದ ನಗರಾಭಿವೃದ್ಧಿ ಸಚಿವರ ಗಮನಕ್ಕೆ ತರಲಾಗುವದು ಅಗತ್ಯ ಬಿದ್ದರೆ ಅವರನ್ನು ಬೆಳಗಾವಿಗೆ ಕರೆಯುವದಾಗಿ ಅಭಯ ಪಾಟೀಲ ಎಚ್ಚರಿಕೆ ನೀಡಿದ್ದಾರೆ
ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ದೇಶದ ಎಲ್ಲ ನಗರಗಳಲ್ಲಿ ಯುದ್ದೋಪಾದಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ ಭೂಪಾಲ್ ನಲ್ಲಿ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ ಆದರೆ ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಇನ್ನುವರೆಗೆ ನೆಲ ಬಿಟ್ಟು ಮೇಲಕ್ಕೆದ್ದಿಲ್ಲ ತಗ್ಗು ತೆಗೆದು ಮಣ್ಣು ಮುಚ್ವುವ ಹಂತದಲ್ಲಿವೆ ಎಂದು ಶಾಸಕ ಅಭಯ ಪಾಟೀಲ ಅಧಿಕಾರಿಗಳ ವಿಳಂಬ ನೀತಿಯ ಕುರಿತು ಆಕ್ರೋಶ ವ್ಯಕ್ತ ಪಡಿಸಿದ್ದಾರೆ