Breaking News

ಕಾಫಿ ಕುಡಿದು ಟಿವ್ಹಿ ನೋಡುತ್ತ ..ವೈಫೈ ಆನ್ ಮಾಡಿ ಬಸ್ ಗಾಗಿ ಕಾಯೋ ಹೈಫೈ ಬಸ್ ಶೆಲ್ಟರ್ ಬೆಳಗಾವಿಯಲ್ಲಿ

 

ಬೆಳಗಾವಿ- ಬೆಳಗಾವಿಯ ಲುಕ್ ಜೊತೆಗೆ ಇಲ್ಲಿಯ ಜನರ ಲೈಫ್ ಸ್ಟೈಲ್ ಕೂಡಾ ಬದಲಾಗುತ್ತಿದೆ ಯಾಕಂದ್ರೆ ಇಲ್ಲಿಯ ಶಾಸಕರ ವಿಚಾರಗಳೂ ಹೈಟೆಕ್ ಆಗುತ್ತಿರುವದರಿಂದ ಅವರು ಮಾಡುವ ಕೆಲಸಗಳೂ ಹೈಟೆಕ್ ಆಗುತ್ತಿವೆ

ಶಾಸಕ ಅಭಯ ಪಾಟೀಲರು ಆರ್ ಪಿ ಡಿ ಕ್ರಾಸ್ ನಲ್ಲಿ ಹೈಟೆಕ್ ಬಸ್ ಶೆಲ್ಟರ್ ನಿರ್ಮಿಸಿದ್ದಾರೆ ಈ ಬಸ್ ಶೆಲ್ಟರ್ ವಿಶೇಷತೆ ಏನೆಂದ್ರೆ ಇಲ್ಲಿ ಟಿವ್ಹಿ ಇದೆ ಟಿವ್ಹಿ ನೋಡುತ್ತ ಬಸ್ ಗಾಗಿ ಕಾಯಬಹುದು ಬ್ರೆಕಿಂಗ್ ನ್ಯುಸ್ ನೋಡುತ್ತ ಬಸ್ ದಾರಿ ನೋಡಬಹುದು

ಬಸ್ ಶೆಲ್ಟರ್ ನಲ್ಲಿ ವೈಫೈ ಸೌಲಭ್ಯವೂ ಇದೆ ಇಂಟರ್ ನೆಟ್ ಆನ್ ಮಾಡಿ ಟೈಮ್ ಪಾಸ್ ಮಾಡಬಹುದು ಬಹಳ ಬೋರ್ ಆದ್ರೆ ಬಿಸಿ ಬಿಸಿ ಕಾಫಿ ಬಸ್ ಶೆಲ್ಟರ್ ನಲ್ಲೇ ಕುಡಿಯಬಹುದು ನ್ಯುಸ್ ಪೇಪರ್ ಓದಬಹುದು

ಇಂತಹದದು ಹೈಟೆಕ್ ಬಸ್ ಶೆಲ್ಟರ್ ನ್ನು ಶಾಸಕ ಅಭಯ ಪಾಟೀಲ ಬೆಳಗಾವಿಯ ಆರ್ ಪಿ ಡಿ ಕ್ರಾಸ್ ನಲ್ಲಿ ನಿರ್ಮಿಸಿ ಇಂದು ಸಂಜೆ ಇದನ್ನು ಲೋಕಾರ್ಪಣೆ ಮಾಡಿದ್ರು

ಶಾಸಕರ ಅನುದಾನದಲ್ಲಿ ಪ್ರಾಯೋಗಿಕವಾಗಿ ಇದನ್ನು ಆರಂಭಿಸಲಾಗಿದ್ದು ಇದು ಸೆಕ್ಸೆಸ್ ಆದ್ರೆ ಇಂತಹ ಹೈಟೆಕ್ ಬಸ್ ಶೆಲ್ಟರ್ ಗಳು ಬೆಳಗಾವಿ ದಕ್ಷಿಣ ಮತಕ್ಷೇತ್ರದೆಲ್ಲೆಡೆ ಕಾಣಬಹುದು

Check Also

ಬೆಳಗಾವಿಗೆ ಹುಲಿ ಬಂದಿದ್ದು ನೂರಕ್ಕೆ ನೂರು ಸತ್ಯ….!!

ಬೆಳಗಾವಿ: ಕಳೆದ ತಿಂಗಳಷ್ಟೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೆಣ್ಣು ಸಿಂಹವೊಂದು ಸೇರ್ಪಡೆಯಾಗಿತ್ತು. ಈಗ ಹೆಣ್ಣು ಹುಲಿಯೊಂದರ …

Leave a Reply

Your email address will not be published. Required fields are marked *