ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಯರಮಾಳ ಗ್ರಾಮ ಅಭಿವೃದ್ಧಿಯಿಂದ ಬೆಳಗಲಿದೆ ಕ್ಷೇತ್ರದ ಶಾಸಕ ಅಭಯ ಪಾಟೀಲ ಈ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಿ ಇಂದು ಬೆಳಿಗ್ಗೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು
2.5 ಕೋಟಿ ರೂ ಅನುದಾನದಲ್ಲಿ ಯರಮಾಳ ಗ್ರಾಮದಲ್ಲಿ ರಸ್ತೆ,ಚರಂಡಿ,ಕುಡಿಯುವ ನೀರಿನ ಪೈಪ್ ಲೈನ್,ಅಂಗನವಾಡಿ ಕಟ್ಟಡ, ಲೈಬ್ರರಿ, ಸೇರಿಂತೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು
ಈ ಸಂಧರ್ಭದಲ್ಲಿ ಮಾತನಾಡಿದ ಅವರು ಯರಮಾಳ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ ಈ ಗ್ರಾಮದ ಒಂದು ಬೀದಿಯಲ್ಲಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಸಲಾಗುತ್ತಿದೆ ಜೊತೆಗೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಗ್ರಾಮಕ್ಕೆ ಹೊಸ ಸ್ವರೂಪ ಕಾಣಲಿದೆ ಎಂದು ಹೇಳಿದರು
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಈಗಾಗಲೇ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಯುದ್ದೋಪಾದಿಯಲ್ಲಿ ನಡೆಯುತ್ತಿವೆ ಕ್ಷೇತ್ರದಲ್ಲಿ ನಾಲ್ಕು ಗ್ರಾಮಗಳು ಬರುತ್ತಿದ್ದು ಈ ನಾಲ್ಕು ಗ್ರಾಮಗಳನ್ನು ಹಂತ ಹಂತವಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ಪಡಿಸಿ ಹಳ್ಳಿಯ ಜನರಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಂಕಲ್ಪ ಮಾಡಿದ್ದೇನೆ ಎಂದು ಅಭಯ ಪಾಟೀಲ ಹೇಳಿದರು
ಅಭಿವೃದ್ಧಿಯ ವಿಷಯದಲ್ಲಿ ನಗರ ಮತ್ತು ಹಳ್ಳಿಗಳ ನಡುವೆ ದೊಡ್ಡ ಕಂದಕ ನಿರ್ಮಾಣವಾಗಿದೆ ನಗರ ನಿವಾಸಿಗಳಿಗೆ ಸಿಗುವ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳು ಹಳ್ಳಿಯ ಜನರಿಗೂ ಸಿಗಬೇನ್ನುವದು ನನ್ನ ಸಂಕಲ್ಪ ವಾಗಿದೆ ಎಂದರು