ಬೆಳಗಾವಿ-
ಹಲವಾರು ಸಾಮಾಜಿಕ ಕಾರ್ಯಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಮಾಜಿ ಶಾಸಕ ಈಗ ಸೆಲ್ಫಿ ವಿತ್ ಮದರ್ ಎಂಬ ಹೃದಯ ಸ್ಪರ್ಷಿ ಕಾರ್ಯಕ್ರಮ ಆಯೋಜಿಸಿ ಎಲ್ಲರ ಗಮನ ಸೆಳೆದಿದ್ದಾರೆ
ಭಾರತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಪ್ರಕರಣಗಳು ಹೆಚ್ಚಾಗಿವೆ ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲ್ಫಿ ತೆಗೆಯುವದು ಪ್ರಾಣಕ್ಕೆ ಕುತ್ತು ಎನ್ನುವ ಜನಜಾಗೃತಿ ಮೂಡಿಸುವದರ ಜೊತೆಗೆ ತಮಗೆ ಜನ್ಮ ನೀಡಿದ ತಾಯಿಯ ಜೊತೆ ಸೆಲ್ಫಿ ತೆಗೆದು ತಾಯಿಯ ಜೊತೆಗಿನ ಸಮಂಧ ಇನ್ನಷ್ಟು ಗಟ್ಟಿಯಾಗಲಿ ಅನ್ನೋದು ಅಭಯ ಪಾಟೀಲರ ಉದ್ದೇಶ.
ಬಹಳಷ್ಟು ಜನ ತಮ್ಮ ಸಂಗಾತಿಯ ಜೊತೆ ತಮ್ಮ ಮಕ್ಕಳ ಜೊತೆ ತಾವು ಇಷ್ಟ ಪಡುವ ಸೆಲೆಬ್ರಿಟಿ ಗಳ ಜೊತೆ ಸೆಲ್ಫಿ ತೆಗೆಯೋದು ಫ್ಯಾಶನ್ ಆಗಿದೆ ತಾಯಿಯ ಜೊತೆ ಸೆಲ್ಫಿ ತೆಗೆದುಕೊಂಡು ತಾಯಿಯ ಜೊತೆಗಿನ ಪವಿತ್ರ ರಿಲೇಶನ್ ಮತ್ತಷ್ಟು ಗಟ್ಟಿಯಾಗಲಿ ಎನ್ನುವ ಉದ್ದೇಶದಿಂದ ಸೆಲ್ಫಿ ವಿತ್ ಮದರ್ ಸ್ಪರ್ದೆ ಏರ್ಪಡಿಸಲಾಗಿದೆ ಎಂದು ಅಭಯ ಪಾಟೀಲ ತಿಳಿಸಿದ್ದಾರೆ.
ಹೆಣ್ಣು ಇರಲಿ ಗಂಡು ಇರಲಿ ಮಕ್ಕಳಿರಲಿ ಅಥವಾ ವಯಸ್ಸಾದವರು ಇರಲಿ ಇದಕ್ಕೆ ವಯಸ್ಸಿನ ಮಿತಿ ಇಲ್ಲ ತಮ್ಮ ತಾಯಿಯ ಜೊತೆ ಸೆಲ್ಫಿ ತೆಗೆದು ನವ್ಹೆಂಬರ್ 12 ರೊಳಗಾಗಿ ವ್ಯಾಟ್ಸ್ ಪ್ ನಂ 9482322901 ಈ ನಂಬರ್ ಗೆ ಕಳುಹಿಸಬೇಕು.
ಸೆಲ್ಫಿ ವಿತ್ ಮದರ್ ಸ್ಪರ್ದೆಯಲ್ಲಿ ವಿಜೇತರಾದವರಿಗೆ ವಜ್ರದ ರಿಂಗ್ ಸನ್ ಗ್ಲಾಸ್ ಪೈಠಣಿ ಸೀರೆ ಸೇರಿದಂತೆ ಒಟ್ಟು 500 ವಿವಿಧ ಬಹುಮಾನ ನೀಡಲಾಗುತ್ತದೆ ಎಂದು ಮಾಜಿ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ಮಹಿಳೆಯರಿಗಾಗಿ ರಂಗೋಲಿ ಸ್ಪರ್ದೆ ಮಕ್ಕಳಿಗಾಗಿ ಗಾಳಿಪಟ ಉತ್ಸವ, ಯುವಕರಿಗಾಗಿ ಕೆಸರಿನ ಗದ್ದೆ ಓಟ ದಾಂಡಿಯಾ ಮೊಸರಿನ ಗಡಿಗೆ ಒಡೆಯುವ ಸ್ಪರ್ದೆ ವಿಧ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ದೆ ಹೀಗೆ ಹತ್ತು ಹಲವು ಸ್ಪರ್ದೆ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಭಾರತೀಯ ಸಂಸ್ಕೃತಿಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುತ್ತಿರುವ ಅಭಯ ಪಾಟೀಲ ದೇಶದಲ್ಲಿಯೇ ಮೊದಲ ಬಾರಿಗೆ ಸೆಲ್ಫಿ ವಿತ್ ಮದರ್ ಎಂಬ ವಿಭಿನ್ನ ಸ್ಪರ್ದೆ ಏರ್ಪಡಿಸಿ ತಾಯಿ ಮತ್ತು ಮಕ್ಕಳ ನಡುವಿಣ ಸಮಂಧವನ್ನು ಗಟ್ಟಿಗೊಳಿಸುವ ಪ್ರಯತ್ನ ಅಭಯ ಪಾಟೀಲ ಮಾಡುತ್ತಿರುವದು ಒಳ್ಳೆಯ ಬೆಳವಣಿಗೆಯಾಗಿದೆ.