ಬೆಳಗಾವಿ – ಬೆಳಗಾವಿಯ ಹೆಮ್ಮೆಯಾಗಿರುವ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಯಾವುದೇ ಕಾರಣಕ್ಕೂ ವಿತಾಯು ವಿಭಜನೆ ಮಾಡಬಾರದಾದೆಂಬ ಮನವಿಗೆ ಉತ್ತರ ಕರ್ನಾಟಕದ 23 ಜನ ಶಾಸಕರು ಸಹಿ ಹಾಕಿದ್ದಾರೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ
ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಮರು ವಿಂಗಡನೆ ಮಾಡುವ ನಿರ್ಧಾರವನ್ನು ತಕ್ಷಣ ಕೈಬಿಡುವಂತೆ ನಾಳೆ ಮಂಗಳವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದ್ದು ಸಿಎಂ ಗೆ ಸಲ್ಲಿಸುವ ಮನವಿಗೆ ಈಗಾಗಲೇ 23 ಜನ ಶಾಸಕರು ಸಹಿ ಹಾಕಿದ್ದು ಇನ್ನೂ 27 ಜನ ಶಾಸಕರ ಸಹಿ ಪಡೆದುಕೊಂಡು ಮುಖ್ಯಮಂತ್ರಿಗಳನ್ನು ಖುದ್ಧಾಗಿ ಭೇಟಿಯಾಗಿ ಮನವಿ ಅರ್ಪಿಸಲಾಗುವದು ಎಂದು ಅಭಯ ಪಾಟೀಲ ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ