Breaking News

ಕುಂದಾನಗರಿಯ ಬಾನಂಗಳದಲ್ಲಿ ದ್ರೋಣಯಾನ…ಮನೆಯಲ್ಲಿ ಇದ್ದವನೇ ಜಾಣ….!!!

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ಸಮರ್ಪಕವಾಗಿ ತಡೆಗಟ್ಟಲು,ಬೆಳಗಾವಿ ನಗರದ ಜನ ಅನವಶ್ಯಕವಾಗಿ ಸುತ್ತಾಡುವದನ್ನು ನಿಯಂತ್ರಿಸಲು ಶಾಸಕ ಅಭಯ ಪಾಟೀಲ ಹೊಸ ಐಡಿಯಾ ಹುಡಕಿದ್ದಾರೆ .

ಅತ್ಯಂತ ವಿಶಾಲವಾಗಿರುವ ಬೆಳಗಾವಿ ನಗರದಲ್ಲಿ ಹೊರಗಡೆ ಸುತ್ತಾಡುವ ಜನರನ್ನು ತಡೆಯಲು ಪೋಲೀಸರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.ಅನವಶ್ಯಕವಾಗಿ ಸುತ್ತಾಡುವ ಜನರನ್ನು ಸರಳವಾಗಿ ಗುರುತಿಸಿ ಅವರನ್ನು ದಂಡಿಸಲು ಶಾಸಕ ಅಭಯ ಪಾಟೀಲ ಬೆಳಗಾವಿ ನಗರದಲ್ಲಿ ಹದಿನಾಲ್ಕು ದ್ರೋಣ ಕ್ಯಾಮರಾಗಳನ್ನು ಬೆಳಗಾವಿಯ ಬಾನಂಗಳದಲ್ಲಿ ಹಾರಿ ಬಿಡುತ್ತಿದ್ದಾರೆ .

ಬೆಳಗಾವಿ ಬಾನಂಗಳದಲ್ಲಿ ಹಾರಾಡುವ ದ್ರೋಣ ಕ್ಯಾಮರಾಗಳು ಸ್ಮಾರ್ಟ್ ಸಿಟಿಯ ಕಮಾಂಡ್ ಸೆಂಟರ್ ಗೆ ದೃಶ್ಯಗಳನ್ನು ರವಾನಿಸುತ್ತವೆ .ಕಮಾಂಡ್ ಸೆಂಟರ್ ನಲ್ಲಿ ಕುಳಿತುಕೊಳ್ಳುವ ಪೋಲೀಸ್ ಇಲಾಖೆ,ಆರೋಗ್ಯ ಇಲಾಖೆ,ಮಹಾನಗರ ಪಾಲಿಕೆಯ ನಿಯೋಜಿತ ಅಧಿಕಾರಿಗಳು ಇಡೀ ಬೆಳಗಾವಿ ನಗರದ ಚಲನವಲನಗಳನ್ನು ಗಮನಿಸುತ್ತಾರೆ .ಸರ್ಕಾರದ ನಿರ್ದೇಶನ ಉಲ್ಲಂಘನೆ ಮಾಡುವವರನ್ನು ಗುರುತಿಸಿ ಅವರನ್ನು ದಂಡಿಸುವ ಕೆಲಸ ಮಾಡುತ್ತಾರೆ .

ಬೆಳಗಾವಿ ನಗರದಲ್ಲಿ ದ್ರೋಣ ಕ್ಯಾಮರಾ ಹೊಂದಿರುವ ಹದಿನಾಲ್ಕು ಜನರನ್ನು ಒಗ್ಗೂಡಿಸಿ ಕೊರೋನಾ ನಿಯಂತ್ರಿಸಲು ನಿಮ್ಮ ಸಹಾಯ ಬೇಕು ಎಂದು ದ್ರೋಣ ಫ್ಲಾಯರ್ ಗಳಿಗೆ ಮನವರಿಕೆ ಮಾಡುವಲ್ಲಿ ಶಾಸಕ ಅಭಯ ಪಾಟೀಲ ಯಶಸ್ವಿಯಾಗಿದ್ದು ಶಾಸಕ ಅನೀಲ ಬೆನಕೆ ಅಭಯ ಪಾಟೀಲರ ಮಹತ್ವದ ಕಾರ್ಯದಲ್ಲಿ ಕೈಜೋಡಿಸಿ ಬೆಳಗಾವಿ ನಗರದ ಆರೋಗ್ಯದ ಮೇಲೆ ವಿಶೇಷ ಗಮನ ಹರಿಸಿದ್ದಾರೆ .

ಬೆಳಗಾವಿ ನಗರದ ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ ನಲ್ಲಿ ದ್ರೋಣ ದೃಶ್ಯಾವಳಿಗಳನ್ನು ಗಮನಿಸಿ ಮಾತನಾಡಿದ ಶಾಸಕ ಅಭಯ ಪಾಟೀಲ ಬೆಳಗಾವಿ ನಗರದಲ್ಲಿ ಕಾನೂನು ಉಲ್ಲಂಘಿಸುವವರ ವಿರುದ್ಧ ಪೋಲೀಸರು ಶಿಸ್ತಿನ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *