ನೇಸಲ್ ಕೆನೂಲಾ ಆಕ್ಸಿಜನ್ ಉಪಕರಣ ಬಿಮ್ಸ್ ಗೆ ಸಮರ್ಪಿಸಿದ ಸಿಎಂ ಯಡಿಯೂರಪ್ಪ

ಬೆಳಗಾವಿ-: ಕೋವಿಡ್-೧೯ ಸೋಂಕಿತರಿಗೆ ವೆಂಟಿಲೇಟರ್ ಬದಲಾಗಿ ಸುಲಭ ಚಿಕಿತ್ಸೆ ನೀಡಬಹುದಾದ ನಾಲ್ಕು ಹೈ ಫ್ಲೋ ನೇಸಲ್ ಕೆನೂಲಾ ಆಕ್ಸಿಜನ್ ಉಪಕರಣಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬಿಮ್ಸ್ ಆಸ್ಪತ್ರೆಗೆ ಸಮರ್ಪಿಸಿದರು.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲರು ಕೊಡಮಾಡಿದ ಈ ಉಪಕರಣಗಳನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯ ಬಳಿಕ ಈ ಉಪಕರಣಗಳನ್ನು ಮುಖ್ಯಮಂತ್ರಿಗಳು ಆಸ್ಪತ್ರೆಗೆ ನೀಡಿದರು.

ರಾಜ್ಯದಲ್ಲಿ ಮೊದಲ ಬಾರಿ ಶಾಸಕ ಪಾಟೀಲ ಅವರು ನೀಡಿದ್ದಾರೆ.
ಇದೇ ರೀತಿ ಉಳಿದ ಕ್ಷೇತ್ರದ ಶಾಸಕರೂ ಈ ರೀತಿಯ ಹೈ ಫ್ಲೋ ನೇಸಲ್ ಕೆನೂಲಾ ಆಕ್ಸಿಜನ್ ಉಪಕರಣಗಳನ್ನು ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಲಹೆ ನೀಡಿದರು.
ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ವತಿಯಿಂದ ಸುತ್ತೋಲೆ ಕೂಡ ಹೊರಡಿಸಲಾಗುತ್ತದೆ ಎಂದರು.

ತಮ್ಮ ಅನುದಾನದಲ್ಲಿ ಬಿಮ್ಸ್ ಗೆ ಆಕ್ಸಿಜನ್ ಉಪಕರಣ ಕೊಡುಗೆ ನೀಡಿದ ಶಾಸಕ ಅಭಯ್ ಪಾಟೀಲ ಅವರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು.
****

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *