ಪಂಡರಪೂರ ತಳಿಯ ಎಮ್ಮೆ ಇದು…….
ಬೆಳಗಾವಿ- ದಿನ ಬೆಳಗಾದ್ರೆ ಕೇವಲ ಅಭಿವೃದ್ಧಿಯ ಜಪ ಮಾಡ್ತಾರೆ,ಮಾತೆತ್ತದ್ರೆ ಐಟಿ,ಬಿಟಿ ಪಾರ್ಕ ಅಂತಾರೆ,ಯಾವಾಗ ನೋಡಿದಾಗ ಕೇವಲ ಡೆವಲಪ್ಮೆಂಟ್ ಬಗ್ಗೆಯೇ ಶಾಸಕ ಅಭಯ ಪಾಟೀಲ ಚಿಂತೆ ಮಾಡ್ತಾರೆ,ಎನ್ನುವ ಟಿಪ್ಪಣಿ ಇತ್ತು…
ಆದ್ರೆ ಶಾಸಕ ಅಭಯ ಪಾಟೀಲ ಇವತ್ತು ವಿಭಿನ್ನವಾದ,ವಿಶೇಷವಾದ,ರೈತಪರವಾದ ಕಾರ್ಯಕ್ರಮವನ್ನು ಬೆಳಗಾವಿ ನಗರದಲ್ಲಿ ಹಮ್ಮಿಕೊಳ್ಳುವ ಮೂಲಕ ಅಭಯ ಪಾಟೀಲ ಎಲ್ಲದಕ್ಕೂ ಸೈ ಎಂದು ಸಾಭೀತು ಮಾಡಿದ್ದಾರೆ..
ಯಾಕಂದ್ರೆ ಇವತ್ತು ರಾಮಲಿಂಗೇಶ್ವರ ಭವನ,ಕಲ್ಮೇಶ್ವರ ಮಂದಿರದ ಆವರಣ,ಹಳೆಯ ಬೆಳಗಾವಿಯಲ್ಲಿ ಆಕಳು,ಎಮ್ಮೆ ಮತ್ತು ಕರುಗಳ ಪ್ರದರ್ಶನ ನಡೆಯಿತು
ಇಲ್ಲಿ ವಿವಿಧ ರಾಜ್ಯಗಳ ವಿವಿಧ ಜಾತಿಯ ಎಮ್ಮೆ,ಆಕಳು,ಮತ್ತು ಕರುಗಳು ಭಾಗವಹಿಸಿದ್ದವು,ಈ ಪ್ರದರ್ಶನದಲ್ಲಿ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಬೇರೆ ಬೇರೆ ತಳಿಗಳ ಬಗ್ಗೆ ಮಾಹಿತಿ ನೀಡಿದ್ರು ಯಾವ ತಳಿಯ ಎಮ್ಮೆ ಒಂದು ಹೊತ್ತಿಗೆ ಎಷ್ಟು ಲೀಟರ್ ಹಾಲು ಕೊಡುತ್ತದೆ,ಯಾವ ರೀತಿಯ ಆಹಾರ ಯಾವ ತಳಿಗೆ ಕೊಡಬೇಕು,ಯಾವ ತಳಿ ಬೆಳಗಾವಿಯ ವಾತಾವರಣಕ್ಕೆ ಸೂಕ್ತ ಎನ್ನುವದರ ಬಗ್ಗೆ ಮಾಹಿತಿ ನೀಡಿದ್ರು…
ಹರಿಯಾಣಾ ಗುಜರಾತ ಸೇರಿದಂತೆ ಬೇರೆ ಬೇರೆ ಜಾತಿಯ ಎಮ್ಮೆಗಳ ಬೆಲೆ ಐದು ಲಕ್ಷರೂ ಗಳಿಂದ ಎಂಟು ಲಕ್ಷದವರೆಗೂ ಇದೆ,ಆದ್ರೆ ಪಂಡರಪೂರ ತಳಿಯ ಎಮ್ಮೆ 1.70 ಲಕ್ಷ ರೂಗೆ ಖರೀಧಿ ಮಾಡಿದ್ದ ಗವಳಿಯೊಬ್ಬ ಪಂಡರಪೂರ ತಳಿಯ ಎಮ್ಮೆ ಇವತ್ತು ಪ್ರದರ್ಶನ ಮಾಡಿದ ಈ ಎಮ್ಮೆ ಒಂದು ಹೊತ್ತಿಗೆ ಎಂಟು ಲೀಟರ್ ಹಾಲು ಕೊಡುತ್ತದೆ ಎಮ್ಮೆ ಬೆಲೆಯೂ ಕಮ್ಮಿ ಹಾಲು ಕೊಡುವದು ಜಾಸ್ತಿ,ಜೊತೆಗೆ ಪಂಡರಪೂರ ತಳಿಯ ಎಮ್ಮೆ ಬೆಳಗಾವಿ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ ಅನ್ನೋದರ ಬಗ್ಗೆ ಗವಳಿ ಮಾಹಿತಿ ನೀಡಿದ.
ಒಟ್ಟಾರೆ ಇವತ್ತು ಬೆಳಗಾವಿಯಲ್ಲಿ ಶಾಸಕ ಅಭಯ ಪಾಟೀಲ,ಆಕಳು,ಎಮ್ಮೆ ಮತ್ತು ಕರುಗಳ ಪ್ರದರ್ಶನ ಏರ್ಪಡಿಸಿ ಸ್ವಾವಲಂಬನೆಗೆ ಸ್ಪೂರ್ತಿ ನೀಡುವ ರೈತರಿಗೆ ಪೂರಕವಾಗುವ ಕಾರ್ಯಕ್ರಮ ಏರ್ಪಡಿಸಿ ಎಲ್ಲರ ಗಮನ ಸೆಳೆದರು
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…