ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ಕುರಿತು ಸರ್ಕಾರದಿಂದ ನೋಟೀಸ್ ಜಾರಿಯಾದ ಹಿನ್ನಲೆಯಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಎಲ್ಲ ಆರೋಪಗಳಿಗೆ ಶನಿವಾರ ನಡೆಯುವ ಪಾಲಿಕೆ ಸಭೆಯಲ್ಲಿ ಎಲ್ಲ ಆರೋಪಗಳಿಗೆ ಉತ್ತರ ಕೊಡುವದಾಗಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಸರ್ಕಾರದ ಎಚ್ಚರಿಕೆಗೆ ಬಿಜೆಪಿ ಶಾಸಕ ಅಭಯ ಪಾಟೀಲ್ ಗರಂ ಆಗಿದ್ದಾರೆ.ಪಾಲಿಕೆ ವಿಸರ್ಜನೆ ಮಾಡಲು ಆಗುವುದಿಲ್ಲ.ಕೆಲ ಅಧಿಕಾರಿಗಳು ಕೆಲವರ ಕೈಗೊಂಬೆ ಆಗಿ ಕೆಲಸ ಮಾಡುತ್ತಿದ್ದಾರೆ.ಸರ್ಕಾರಕ್ಕೆ ಅಧಿಕಾರಿಗಳೇ ತಪ್ಪು ವರದಿ ನೀಡಿದ್ದಾರೆ.ಸರ್ಕಾರದ ಸೂಚನೆಯಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.ಆದ್ರೆ ಠರಾವು ಅಂಶಗಳನ್ನ ತಿರುಚಿ ಸರ್ಕಾರಕ್ಕೆ ಕಳುಹಿಸಿದ್ದಾರೆ.ಎಂದು ಶಾಸಕ ಅಭಯ ಪಾಟೀಲ ಅವರು ಪಾಲಿಕೆಯ ಕೆಲವು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಮುಂದಿನ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಎಲ್ಲವನ್ನೂ ಬಿಚ್ಚಿಡುತ್ತೇನೆ. ಸರ್ಕಾರ ಕಳುಹಿಸಿರುವ ನೋಟೀಸ್ ಗೆ ಆಡಳಿತ ಗುಂಪು,ಮತ್ತು ವಿರೋಧಿ ಗುಂಪಿನ ಸದಸ್ಯರು ಸೇರಿಕೊಂಡು ಸಮರ್ಪಕ ಉತ್ತರ ಕೊಟ್ಟಿದ್ದಾರೆ. ನನ್ನ ಮೇಲೆ ಕೆಲವರು ಬ್ರಷ್ಟಾಚಾರದ ಆರೋಪ ಮಾಡಿದ್ದು ನಾನು ಯಾವುದೇ ರೀತಿಯ ತನಿಖೆಗೆ ಸಿದ್ಧ ಎಂದು ಮೂರು ತಿಂಗಳ ಹಿಂದೆಯೇ ಹೇಳಿದ್ದೇನೆ.ಇವತ್ತೂ ಹೇಳುತ್ತೇನೆ. ನಿಮ್ಮದೇ ಸರ್ಕಾರ ಇದೆ ತನಿಖೆ ಮಾಡಿ ಎಂದು ಶಾಸಕ ಅಭಯ ಪಾಟೀಲ ಹೇಳಿದ್ರು.
ಮಹಾಪೌರ ಮತ್ತು ಉಪಮಹಾಪೌರರು ಮುಖ್ಯಮಂತ್ರಿಗಳು ಬೆಳಗಾವಿಗೆ ಬಂದಾಗ ಅವರನ್ನು ಸ್ವಾಗತ ಮಾಡಿಕೊಳ್ಳಲು ಹೋಗೀದಿಲ್ಲ ಎನ್ನುವ ಆರೋಪ ಇದೆಯಲ್ಲ ಎಂದು ಮಾದ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಿಎಂ ಸರ್ಕಾರಿ ಕಾರ್ಯಕ್ರಮಕ್ಕೆ ಬಂದಾಗ ಮಹಾಪೌರರು ಹೋಗ್ತಾರೆ, ಅಧಿಕಾರಿಗಳು ಮಾಹಿತಿ ನೀಡಿದ್ರೆ ಮಹಾಪೌರರು ಹೋಗ್ತಾರೆ,ಅಧಿಕಾರಿಗಳು ಎಷ್ಟು ಸಲ ಮಾಹಿತಿ ಕೊಟ್ಟಿದ್ದಾರೆ ನೀವೇ ಅಧಿಕಾರಿಗಳನ್ನು ಕೇಳಿ ಎಂದು ಅಭಯ ಪಾಟೀಲ ಹೇಳಿದ್ರು.