ಬೆಳಗಾವಿ- ನಗರದ ಶಿವಾಜಿ ಉದ್ಯಾನದಲ್ಲಿ ಆರು ವರ್ಷದ ಹಿಂದೆ ಶಾಸಕ ಅಭಯ ಪಾಟೀಲರು ನಿರ್ಮಿಸಿದ್ದ ಶಿವಸೃಷ್ಠಿ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಭಯ ಪಾಟೀಲ ಶಿವಸೃಷ್ಠಿಯ ಧ್ವನಿ ಮತ್ತು ಬೆಳಕಿನ ರಿಕಾರ್ಡಿಂಗ್ ಕೆಲಸದ ಪ್ರಗತಿ ಪರಶೀಲನೆ ಮಾಡಿದರು
ಪುನಾ ದಲ್ಲಿರುವ ಡಿಜಿಟಲ್ ಆರ್ಟ್ ಇಂಡಿಯಾ ಪ್ರಾವೇಟ್ ಲಿಮಿಟೆಡ್ ಸ್ಟುಡಿಯೋಗೆ ಭೇಟಿ ನೀಡಿದ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರು ಶಿವಾಜಿ ಉದ್ಯಾನದಲ್ಲಿ ನಿರ್ಮಿಸಲಾದ ಶಿವಾಜಿ ಮಹಾರಾಜರ ಬಾಲ್ಯ ಹೋರಾಟದ ಇತಿಹಾಸದ ಗತವೈಭವ ವನ್ನು ಧ್ವನಿ ಮತ್ತು ಬೆಳಕಿನ ಮೂಲಕ ಶಿವಾಜಿ ಮಹಾರಾಜರ ಹೋರಾಟದ ಚಿತ್ರಣವನ್ನು ತಿಳಿಸುವ ಶಿವಸೃಷ್ಠಿ ಯೋಜನೆಯ ಪ್ರಗತಿ ಪರಶೀಲಿಸಿದರು
ನಿಖಿಲ್ ತಿಂಗಳೆ,ಜೋಶಿ ಅವರ ಜೊತೆ ಸುಧೀರ್ಘ ಸಮಾಲೋಚನೆ ನಡೆಸಿದ ಅವರು ಶಿವಾಜಿ ಉದ್ಯಾನವನದಲ್ಲಿ ಶಿವಸೃಷ್ಠಿ ಯೋಜನೆಯ ಎಲ್ಲ ಮೂರ್ತಿಗಳನ್ನು ಸ್ಥಾಪಿಸಲಾಗಿದೆ ಧ್ವನಿ ಮತ್ತು ಬೆಳಕಿನ ರಿಕಾರ್ಡಿಂಗ್ ಕೂಡಲೇ ಮುಗಿಸಿ ದಿಪಾವಳಿ ಹಬ್ಬದ ಒಳಗಾಗಿ ಶಿವಸೃಷ್ಠಿಯನ್ನು ಶಿವಭಕ್ತರಿಗೆ ಸಮರ್ಪಿಸಬೇಕು ಎಂದು ಅಭಯ ಪಾಟೀಲ ಸ್ಟುಡಿಯೋ ಮುಖ್ಯಸ್ಥರಲ್ಲಿ ಮನವಿ ಮಾಡಿಕೊಂಡರು
ಮುಂದಿನ ವಾರ ಪುನೆಯ ಡಿಜಿಟಲ್ ಆರ್ಟ್ ಇಂಡಿಯಾ ತಂಡ ಬೆಳಗಾವಿಗೆ ಭೇಟಿ ನೀಡಿ ಶಿವಸೃಷ್ಠಿ ಯೋಜನೆಗೆ ಫೈನಲ್ ಟಚಪ್ ನೀಡುವದಾಗಿ ತಿಳಿಸಿತು
ಶಾಸಕ ಅಭಯ ಪಾಟೀಲ ಇದೇ ಸಂಧರ್ಭದಲ್ಲಿ ಬೆಳಗಾವಿ ನಗರದಲ್ಲಿ ಡಿಜಿಟಲ್ ಮ್ಯಜಿಯಂ ,ಡಿಜಿಟಲ್ ಲ್ಯಾಬ್ರರಿ, ಸೇರಿದಂತೆ ಇನ್ನಿತರ ಡಿಜಿಟಲ್ ಯೋಜನೆಗಳನ್ನು ಬೆಳಗಾವಿ ನಗರದಲ್ಲಿ ಸ್ಥಾಪನೆ ಮಾಡುವದರ ಕುರಿತು ಡಿಜಿಟಲ್ ಆರ್ಟ್ ಇಂಡಿಯಾ ಜೊತೆ ಚರ್ಚೆ ನಡೆಸಿದರು
ಬೆಳಗಾವಿ ನಗರದ ಶಿವಾಜಿ ಉದ್ಯಾನದಲ್ಲಿ ಆರು ವರ್ಷದ ಹಿಂದೆಯೇ ಅಭಯ ಪಾಟೀಲ ಅವರು ಆರಂಭಿಸಿದ್ದ ಶಿವಸೃಷ್ಠಿಯನ್ನು ಸಾರ್ವಜನಿಕರಿಗೆ ಸಮರ್ಪಿಸುವಲ್ಲಿ ಜನ ಪ್ರತಿನಿಧಿಗಳು ಅಧಿಕಾರಿಗಳು ವಿಫಲರಾಗಿದ್ದರು ಅಭಯ ಪಾಟೀಲರು ಈಗ ಮತ್ತೆ ಶಾಸಕರಾಗಿ ಆಯ್ಕೆ ಆಗುತ್ತಿದ್ದಂತೆ ಶಿವಸೃಷ್ಠಿ ಯೋಜನೆಗೆ ಮತ್ತೆ ಕಾಯಕಲ್ಪ ನೀಡಲು ಅಭಯ ಪಾಟೀಲ ಶ್ರಮಿಸುತ್ತಿದ್ದು ದೀಪಾವಳಿ ಹಬ್ಬದ ಒಳಗಾಗಿ ಬೆಳಗಾವಿಯ ಶಿವಾಜಿ ಉದ್ಯಾನದಲ್ಲಿ ಧ್ವನಿ ಮತ್ತು ಬೆಳಕಿನ ಮೂಲಕ ಶಿವಾಜಿ ಮಹಾರಾಜರ ಧೈರ್ಯ ಸಹಾಸದ ಇತಿಹಾಸದ ಗತವೈಭವ ಝೇಂಕರಿಸಲಿದೆ