ಬೆಳಗಾವಿ – ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಶಾಲಾ ವಿಧ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಹಿರಿಯ ಮರಾಠಿ ಪ್ರಾಥಮಿಕ ಶಾಲೆ ನಂ27 ಹಾಗು ಶಾಲೆ ಸೇರಿದಂತೆ ಕ್ಷೇತ್ರದ ವಿವಿಧ ಶಾಲೆಗಳಿಗೆ ಭೇಟಿ ನೀಡಿದ ಅವರು ಶಾಲಾ ವಿಧ್ಯಾರ್ಥಿಗಳ ಜೊತೆ ಸಂವಾದ ಮಾಡುವ ಜೊತೆಗೆ ಪಾಠ ಮಾಡಿ ಶಾಲಾ ಗುರುಗಳ ಮತ್ತು ವಿಧ್ಯಾರ್ಥಿಗಳ ಗಮನ ಸೆಳೆದರು
ವಿಧ್ಯಾರ್ಥಿಗಳ ಜೊತೆ ಸಂವಾದ ಹಾಗು ಪಾಠ ಮಾಡಿದ ಬಳಿಕ ಶಾಸಕ ಅಭಯ ಪಾಟೀಲ ವಿಧ್ಯಾರ್ಥಿಗಳ ಸಮಸ್ಯೆ ಆಲಿಸಿದರು ಕೆಲವು ವಿಧ್ಯಾರ್ಥಿಗಳು ನಮ್ಮ ಶಾಲೆಗೆ ಕಂಪ್ಯುಟರ್ ಬೇಕು ಎಂದು ಹೇಳಿದರೆ ಇನ್ನು ಕೆಲವು ವಿಧ್ಯಾರ್ಥಿಗಳು ಬೆಂಚ್,ಲೈಬ್ರರಿ,ಲ್ಯಾಬ್, ಬೇಡಿಕೆಯಿಟ್ಟರು
ಈ ಸಂಧರ್ಭದಲ್ಲಿ ಶಾಲಾ ಗುರುಗಳ ಜೊತೆ ಮಾತನಾಡಿದ ಅಭಯ ಪಾಟೀಲ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸಬೇಕು ಶಿಕ್ಷಣದ ಗುಣಮಟ್ಟದಲ್ಲಿ ಸರ್ಕಾರಿ ಶಾಲೆಗಳ ವಿಧ್ಯಾರ್ಥಿಗಳು ಸಾಧನೆ ಮಾಡಬೇಕು ಬಡವರ ಮಕ್ಕಳು ಪ್ರತಿಭಾವಂತರಾಗಬೇಕು ಎನ್ನುವದು ನನ್ನ ಸಂಕಲ್ಪ ವಾಗಿದೆ ಅದಕ್ಕಾಗಿ ದಕ್ಷಿಣ ಕ್ಷೇತ್ರದ ಎಲ್ಲ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ದೊರಕಿಸಿ ಕೊಡುವದಾಗಿ ಶಾಸಕ ಅಭಯ ಪಾಟೀಲ ತಿಳಿಸಿದರು
ಸರ್ಕಾರಿ ಶಾಲೆಗಳಿಗೆ ದೇಶದಲ್ಲಿ ಮೊದಲ ಬಾರಿಗೆ ಸ್ಮಾರ್ಟ್ ಬೋರ್ಡಗಳ ವ್ಯೆವಸ್ಥೆ ಮಾಡಿದ್ದೆ ಆದರೆ ನಿರ್ವಹಣೆ ಸರಿಯಾಗಿ ನಡೆಯಲಿಲ್ಲ ಈಗ ಕ್ಷೇತ್ರದ ಜನ ಆಶೀರ್ವಾದ ಮಾಡಿದ್ದಾರೆ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್,ಗ್ರೀನ್ ಬೋರ್ಡ್ ,ಬೆಂಚ್,ಲೈಬ್ರರಿ,ಲ್ಯಾಬ್, ಕಂಪ್ಯುಟರ್ ಸೇರಿದಂತೆ ಅಗತ್ಯ ವ್ಯೆವಸ್ಥೆ ಮಾಡುವ ಗುರಿ ನನ್ನದಾಗಿದೆ ಐದು ವರ್ಷದಲ್ಲಿ ಸರ್ಕಾರಿ ಶಾಲೆಗಳ ಸ್ವರೂಪ ಬದಲಾಗಿ ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ವಾತಾವರಣ ನಿರ್ಮಿಸಬೇಕು ಎನ್ನುವದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು