ಬೆಳಗಾವಿ- ಬೆಳಗಾವಿ ನಗರದ ಹತ್ತು ವಾರ್ಡಗಳಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯನ್ನು ಉಳಿದ 48 ವಾರ್ಡಗಳಿಗೆ ವಿಸ್ತರಿಸುವ ಯೋಜನೆ ಕುರಿತು ವಿಧಾನನಸೌಧದಲ್ಲಿ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತ್ರೆಯಲ್ಲಿ ಉನ್ನತ ಮಟಟ್ದ ಸಭೆ ನಡೆಯಿತು.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರ ಒತ್ತಾಯದ ಮೇರೆಗೆ ಬೆಳಗಾವಿ ನಗರದ 24×7 ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. 5 ವರ್ಷದ ಹಿಂದೇಯೇ ಈ ಯೋಜನೆಗೆ ಟೆಂಡರ್ ಕರೆಯಲಾಗಿತ್ತು, ಗುತ್ತಿಗೆದಾರ ನ್ಯಾಯಾಲಯದ ಮೊರೆ ಹೋದ ಹಿನ್ನಲೆಯಲ್ಲಿ ಕಾಮಗಾರಿ ಆರಂಭವಾಗಿಲ್ಲ. ಈ ಯೋಜನೆಗೆ ಮುರು ಟೆಂಡರ್ ಕರೆಯಬೇಕಾಗಿತ್ತು, ಕರೆದಿಲ್ಲ ಹೀಗಾಗಿ ಈ ಯೋಜನೆ ನೆನೆಗುದುಗೆ ಬಿದ್ದಿದೆ ಕೂಡಲೇ ಮರು ಟೆಂಡರ್ ಕರೆಯಬೇಕೆಂದು ಶಾಸಕ ಅಭಯ ಪಾಟೀಲ ಸಭೆಯ ಗಮನಕ್ಕೆ ತಂದರು.
ಸರಕಾರದ ಮುಖ್ಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಡಿ. ವಿ. ಪ್ರಸಾದ ರವರು ಬೆಳಗಾವಿ ನಗರದ 48 ವಾರ್ಡಗಳಿಗೆ ನಿರಂತರ ನೀರು ಪೂರೈಸುವ ಯೋಜನೆಗೆ ಅಡ್ಡಿಯಾಗಿರುವ ಎಲ್ಲ ತಾತ್ರಿಂಕ ತೊಂದರೆಗಳನ್ನು ನಿವಾರಿಸಬೇಕು ಯೋಜನೆಯ ಮಂಜೂರಾತಿಗೆ ಕೂಡಲೇ ವಿಶ್ವಬ್ಯಾಂಕ ನಿಂದ ಅನುಮತಿ ಪಡೆಯಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, 6 ತಿಂಗಳೊಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕೆ.ಯು.ಐ.ಡಿ.ಎಫ್.ಸಿ. ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಇಬ್ರಾಹಿಮ್ ಇವರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಬೆಳಗಾವಿ ನಗರದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬಂದರೆ ನಗರದ ನೀರಿನ ಸಮಸ್ಯೆ ಬಗೆ ಹರಿಯುತ್ತದೆ. ನಗರದ ನಿವಾಸಿಗಳ ಬಹುದಿಗಳ ಬೇಡಿಕೆ ಈಡೇರಲಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಯೋಜನೆಯ ಕುರಿತು ಸುಮಾರು 2 ಘಂಟೆಗಳ ಕಾಲ ಚರ್ಚೆ ನಡೆದು ಯೋಜನೆಗೆ ಅಡ್ಡಿಯಾಗಿದ್ದ ಎಲ್ಲ ತಾತ್ರಿಂಕ ಸಮಸ್ಯೆಗಳು ನಿವಾರಣೆಯಾಗಿ ಯೋಜನೆಯ ಅನುಷ್ಠಾನಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಶಾಸಕ ಅಭಯ ಪಾಟೀಲ ಸಂತಸ ವ್ಯೆಕ್ತ ಪಡಿಸಿದ್ದಾರೆ.