Breaking News

ಬೆಳಗಾವಿ ರಸ್ತೆಗಳು ಬಿಡಾಡಿ…..ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದ ಬಿಜೆಪಿಯ ಜೋಡಿ ಖಿಲಾಡಿ…..!!!!

ಬೆಳಗಾವಿ
ನಗರದಲ್ಲಿರುವ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಇದಕ್ಕೆ ಕಳಪೆ
ಗುಣಮಟ್ಟದ ಕಾಮಗಾರಿ ಹಾಗೂ ಗುತ್ತಿಗೆದಾರರ ಜೊತೆ ಅಧಿಕಾರಿಗಳು
ಶಾಮೀಲಾಗಿರುವದು ಕಾರಣ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ
ಹಾಗೂ ಉತ್ತರ ಶಾಸಕ ಅನಿಲ ಬೆನಕೆ ನೇರ ಆರೋಪ ಮಾಡಿದರು.

ನಗರದಲ್ಲಿ ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು ಚುನಾವಣೆಗೆ
ಒಂದು ತಿಂಗಳು ಮೊದಲು ಮಾಡಿದ ಮಹಾನಗರಪಾಲಿಕೆ, ಲೋಕೋಪಯೋಗಿ
ಹಾಗೂ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹಾಳಾಗಿವೆ.
ಸರಕಾರದ ಹಣ ಸಾಕಷ್ಟು ದುರುಪಯೋಗ ಆಗಿದೆ ಎಂದು ಹೇಳಿದರು.

ಈ ರೀತಿಯ ಕಳಪೆ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಗುತ್ತಿಗೆದಾರರ ಜೊತೆ
ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ. ಈ ಹಿನ್ನಲೆಯಲ್ಲಿ ಗುತ್ತಿಗೆದಾರರು ಹಾಗೂ
ಅಧಿಕಾರಿಗಳಿಗೆ ದಂಡವಿಧಿಸುವದಲ್ಲದೆ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಸಚಿವರಿಗೆ ಒತ್ತಾಯಿಸಲಾಗುವದು
ಎಂದರು.

ಚುನಾವಣೆಯ ಗಡಿಬಿಡಿಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಬೇಕಾಬಿಟ್ಟಿಯಾಗಿ
ಸುಮಾರು 90 ಕೋಟಿ ರೂ ಗಳ ಕಾಮಗಾರಿ ಮಾಡಲಾಗಿದೆ. ರಸ್ತೆಗಳನ್ನು ಮಾಡಿ
ಮೂರು ತಿಂಗಳಾಗಿಲ್ಲ ಎಲ್ಲ ಕಡೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ.
ಇದೆಲ್ಲದರ ಬಗ್ಗೆ ತನಿಖೆಯಾಗಬೇಕು ಎಂದು ಶಾಸಕ ಅನಿಲ ಬೆನಕೆ ಹೇಳಿದರು.

ಬೆಳಗಾವಿ ದಕ್ಷಿಣ ಭಾಗಕ್ಕೆ ಹೋಲಿಸಿದರೆ ಉತ್ತರದಲ್ಲಿ ಎಲ್ಲ ರಸ್ತೆಗಳ ಸ್ಥಿತಿ ಬಹಳ
ದಯನೀಯವಾಗಿದೆ. ಮಾಜಿ ಶಾಸಕರ ಮಾತು ಕೇಳಿ ಅಧಿ ಕಾರಿಗಳು ಹಾಗೂ
ಗುತ್ತಿಗೆದಾರರು ಹಣ ದುರುಪಯೋಗ ಮಾಡಿದ್ದಾರೆ. ಇದರಿಂದ ಎಲ್ಲ ಕಡೆ ಕಳಪೆ
ಕಾಮಗಾರಿ ಎದ್ದುಕಾಣುತ್ತಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು
ಅನಿಲ ಬೆನಕೆ ಆಗ್ರಹಿಸಿದರು.

ಕಳೆದ ಹಲವಾರು ವರ್ಷಗಳಿಂದ ಇಲ್ಲಿಯೇ ಬೇರುಬಿಟ್ಟಿರುವ ಅಧಿಕಾರಿಗಳು
ಗುತ್ತಿಗೆದಾರರ ಜೊತೆ ಶಾಮೀಲಾಗಿದ್ದಾರೆ. ಹೀಗಾಗಿ ಯಾವ ಕಾಮಗಾರಿಗಳು
ಗುಣಮಟ್ಟದಿಂದ ಕೂಡಿಲ್ಲ. ಬರುವ ದಿನಗಳಲ್ಲಿ ಈ ಅಧಿಕಾರಿಗಳನ್ನು ವರ್ಗಾವಣೆ
ಮಾಡುವಂತೆ ಸರಕಾರದ ಮೇಲೆ ಒತ್ತಡ ಹಾಕುವದಿಲ್ಲ. ಆದರೆ ಅಮಾನತ್‍ಗೆ
ಒತ್ತಾಯಿಸುವ ಕೆಲಸ ಅರಂಭ ಮಾಡುತ್ತೇವೆ ಎಂದು ಅಭಯ ಪಾಟೀಲ
ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕಳೆದ ಎರಡು ವರ್ಷಗಳಿಂದ ನಗರದಲ್ಲಿ ಎಷ್ಟು ರಸ್ತೆಗಳನ್ನು ಮಾಡಲಾಗಿದೆ.
ಅದಕ್ಕೆ ತಗುಲಿದ ವೆಚ್ಚ, ಗುತ್ತಿಗೆದಾರರು ಯಾರು. ರಸ್ತೆಗಳ ಗುಣಮಟ್ಟ
ಪರಿಶೀಲಿಸಿದ ಅ„ಕಾರಿಗಳು ಯಾರು ಎಂಬ ವಿವರವನ್ನು ಪಾಲಿಕೆಯ ಆಯುಕ್ತರಿಂದ
ಕೇಳಲಾಗಿದೆ. ಈ ವರದಿ ಬಂದ ನಂತರ ಪರಿಶೀಲಿಸಿ ನಂತರ ನಮ್ಮ ಮುಂದಿನ
ಕ್ರಮದ ಕಾರ್ಯಾಚರಣೆ ಆರಂಭವಾಗಲಿದ ಎಂದ ಅಭಯ ಪಾಟೀಲ ಕಸ
ವಿಲೇವಾರಿ ಹಾಗೂ ಬೀದಿ ದೀಪಗಳನ್ನು ಅಳವಡಿಸುವ ವಿಷಯದಲ್ಲಿ ಭಾರೀ
ಗೋಲ್‍ಮಾಲ್ ನಡೆದಿದೆ ಎಂದು ಆರೋಪ ಮಾಡಿದರು.

ರಸ್ತೆ ಮಾಡಿದ ಮೇಲೆ ಗುತ್ತಿಗೆದಾರರಿಗೆ ಮೂರು ವರ್ಷಗಳ ಕಾಲ ಅದರ
ನಿರ್ವಹಣೆ ಕೆಲಸವನ್ನು ಅವರಿಗೇ ವಹಿಸಬೇಕು. ಆದರೆ ಕಾಂಗ್ರೆಸ್ ರಸ್ತೆ
ಸೇರಿದಂತೆ ಬಹುತೇಕ ಕಡೆ ಒಂದು ಅಡಿಯಷ್ಟೂ ರಸ್ತೆ ಚೆನ್ನಾಗಿಲ್ಲ. ಇದಕ್ಕೆ
ಯಾರು ಹೊಣೆ. ಈ ಎಲ್ಲ ವಿಚಾರಗಳನ್ನು ನಗರಾಭಿವೃದ್ಧಿ ಸಚಿವರ ಗಮನಕ್ಕೆ
ತಂದು ಬೆಳಗಾವಿಗೆ ಭೆಟ್ಟಿ ನೀಡಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು
ಎಂದು ಒತ್ತಾಯಿಸಲಾಗುವದು ಎಂದರು.

ನಗರದ ಎಲ್ಲ ರಸ್ತೆಗಳ ಪುನರ್ ನಿರ್ಮಾಣಕ್ಕೆ ಕನಿಷ್ಟ 200 ಕೋಟಿ ರೂ ಬೇಕು.
ಅಧಿವೇಶನದ ಸಂದರ್ಭದಲ್ಲಿ ತುರಾತುರಿಯಲ್ಲಿ ರಸ್ತೆಗಳನ್ನು ದುರಸ್ತಿ
ಮಾಡಿದರೆ ಕೆಲವೇ ದಿನಗಳಲ್ಲಿ ಹಾಳಾಗುತ್ತವೆ, ಆದ್ದರಿಂದ ಮಳೆಗಾಲದ ನಂತರ
ಸುಸ್ಥಿರ ರಸ್ತೆಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು
ಹೇಳಿದರು.

ನಗರದ ಕೆಲವು ಪ್ರದೇಶಗಳಲ್ಲಿ ರಸ್ತೆಯ ಮೇಲೆಯೇ ಮದ್ಯಪಾನ ಹಾಗೂ
ಮದ್ಯ ಮಾರಾಟ ನಡೆಯುತ್ತಿವೆ. ಪೋಲೀಸರೇ ಹಪ್ತಾ ವಸೂಲಿ ಮಾಡಿ ಇದಕ್ಕೆ
ಸಹಕಾರ ನೀಡುತ್ತಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ ಅಭಯ ಪಾಟೀಲ
ನಗರ ಪೋಲೀಸ್ ಆಯುಕ್ತರು ತಕ್ಷಣ ಜಾಗೃತರಾಗಿ ಇಂತಹ ಸಿಬ್ಬಂದಿಗಳ ಮೇಲೆ
ಕ್ರಮಕೈಗೊಳ್ಳಬೇಕು ಎಂದು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *