ಬೆಳಗಾವಿ- ಬೆಳಗಾವಿ ನಗರದಲ್ಲಿ ನೂರು ರೂಪಾಯಿ ಬಾಂಡ್ ಪೇಪರ್ ಖರೀಧಿಯ ಮೇಲೆ ನಿರ್ಮಿಸಲಾಗಿರುವ ಅಧಿಕೃತ ಮನೆಗಳ ಮೇಲೆ ಕ್ರಮ ಕೈಗೊಳ್ಳಲಾಗುವದು ಎಂದು ಪ್ರದೇಶಿಕ ಆಯುಕ್ತರು ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಬಡವರ ಮನೆಗಳ ರಕ್ಷಣೆಗೆ ಒತ್ತಾಯಿಸಿ ಇಂದು ಬೆಳಗಾವಿಯಲ್ಲಿ ಮಾಜಿ ಶಾಸಕ ಅಭಯ ಪಾಟೀಲ ನೇತ್ರತ್ವದಲ್ಲಿ ಪ್ರತಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ
ರ್ಯಾಲಿ ಇಂದು ಬೆಳಿಗ್ಗೆ 10-30 ಘಂಟೆಗೆ ನಗರದ ಛತ್ರಪತಿ ಶಿವಾಜಿ ಉದ್ಯಾನ ದಿಂದ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಲಿದೆ
ಬೆಳಗಾವಿಯಲ್ಲಿ ಬಡವರು ನಿರ್ಮಿಸಿದ ಅನಧಿಕೃತ ಮನೆಗಳನ್ನು ಅಧಿಕೃತಗೊಳಿಸಬೇಕು ಬಡವರ ಮನೆಗಳ ವಿರುದ್ಧ ಯಾವುದೇ ಕ್ರಮ ಜರುಗಿಸಬಾರದು ಪ್ರದೇಶಿಕ ಆಯುಕ್ತರು ನೀಡಿದ ಹೇಳಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಬೆಳಗಾವಿ ದಕ್ಷಿಣ ಬಿಜೆಪಿ ಘಟಕ ಇಂದು ಪ್ರತಿಭಟನೆ ನಡೆಸುತ್ತಿದೆ ಪ್ರತಿಭಟನೆಯಲ್ಲಿ ಸಾವಿರಾರು ಜನ ಪಾಲ್ಗೊಳ್ಳಲಿದ್ದಾರೆ ಎಂದು ಬೆಳಗಾ ದಕ್ಷಿಣ ಬಿಜೆಪಿ ಅಧ್ಯಕ್ಷ ಮಂಗೇಶ ಪವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ