ಬೆಳಗಾವಿ – ಬೆಳಗಾವಿಯ ಯಡೊಯೂರಪ್ಪ ಮಾರ್ಗಕ್ಕೆ ಈಗ ಹೊಸ ಕಳೆ ಬಂದಿದೆ ಈ ಮಾರ್ಗದಲ್ಲಿರುವ ಮಾಲಿನಿ ಸಿಟಿಯ ಬಾನಂಗಳದಲ್ಲಿ ಬಣ್ಣದ ಹಕ್ಕಿಗಳ ಚಿತ್ತಾರ ಮೂಡಿದೆ
ಶಾಸಕ ಅಭಯ ಪಾಟೀಲರು ಆಯೋಜಿಸಿರುವ ಗಾಳಿಪಟ ಉತ್ಸವದಲ್ಲಿ ವಿವಿಧ ದೇಶಗಳ ಬಣ್ಣದ ಹಕ್ಕಿಗಳು ಮಾಲಿನಿ ಸಿಟಿಯಲ್ಲಿ ಗೂಡು ಕಟ್ಟಿವೆ ಮಲೇಸಿಯಾ ಸಿಂಗಾಪೂರ ಇಂಡೋನೇಶಿಯಾ ಪೋಲಂಡ ಸೇರಿದಂತೆ ದೇಶದ ವಿವಿಧ ಮಹಾನಗರಗಳ ಗಾಳಿಪಟಗಳು ಎಲ್ಲರನ್ನು ಆಕರ್ಷಿಸುತ್ತವೆ
ಮಾಲಿನಿ ಸಿಟಿ ಈಗ ಬೆಳಗಾವಿ ನಿವಾಸಿಗರಿಗೆ ಈಗ ಮನರಂಜನೆಯ ಕೇಂದ್ರವಾಗಿದೆ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನೋಡಲು ಜನಸಾಗರವೇ ಹರಿದು ಬರುತ್ತಿದೆ ಗಾಳಿಪಟ ನೋಡುತ್ತ ..ಗಿರ್ಮಿಟ್ ತಿನ್ನುತ್ತ ಜನಾ ಇಲ್ಲಿ ಮಜಾ ಮಾಡುತ್ತಿದ್ದಾರೆ
ಮಾಲಿನಿ ಸಿಟಿಯಲ್ಲಿ ವಿವಿಧ ತಿಂಡಿ ತಿನುಸುಗಳ ಸ್ಟಾಲ್ ಗಳು ಇವೆ ಮಕ್ಕಳೊಂದಿ ಇಲ್ಲಿ ಹ್ಯಾಪಿ ಸಂಡೇ ಕಳೆಯಬಹುದಾಗಿದೆ ಉತ್ಸವ ನೋಡಲು ಯಾವುದೇ ರೀತಿಯ ಎಂಟ್ರಿ ಫೀಸ್ ಇಲ್ಲವೇ ಇಲ್ಲ ಬಣ್ಣದ ಹಕ್ಕಿಗಳ ಚಿತ್ತಾರವನ್ನು ಇಂದು ಭಾನುವಾರ ನಾಳೆ ಸೋಮವಾರ ಕೂಡಾ ನೋಡಬಹುದಾಗಿದೆ
ವಿವಿಧ ದೇಶಗಳ ಗಾಳಿಪಟಗಳು ಜನರನ್ನು ಆಕರ್ಷಿಸುತ್ತವೆ ಎಂಜಾಯ್ ಮಾಡಲು ತಪ್ಪದೇ ಮಾಲಿನಿ ಸಿಟಿಗೆ ಭೇಟಿ ಕೊಡಿ ಮಕ್ಕಳೊಂದಿಗೆ ಎಂಜಾಯ್ ಮಾಡಿ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ