ಬೆಳಗಾವಿ- ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದ ವ್ಯಾಕ್ಸೀನ್ ಡಿಪೋದಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾರಿ ಸಂಪೂರ್ಣವಾಗಿ ಕಳಪೆಮಟ್ಟದಾಗಿದ್ದು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಗಳಲ್ಲಿ ಅವ್ಯೆವಹಾರ ನಡೆಯುತ್ತಿದೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಗಂಬೀರ ಆರೋಪ ಮಾಡಿದ್ದಾರೆ
ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಕ್ಸೀನ್ ಡಿಪೋದಲ್ಲಿ ಸುಮಾರು ಎರಡು ನೂರು ಅಡಿ ಆಳದಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾರಿಯನ್ನು ಪರಶೀಲನೆ ಮಾಡಿರುವ ಅಭಯ ಪಾಟೀಲ ಈ ಕಾಮಗಾರಿಯಲ್ಲಿ ಶೇ80 ರಷ್ಟು ಮಣ್ಣು ಮಿಶ್ರಿತ ಮರಳನ್ನು ಉಪಯೋಗಿಸಲಾಗಿದೆ ಅತ್ಯಂತ ಆಳದಲ್ಲಿ ನಡೆಯುತ್ತಿರುವ ಈ ಕಾಮಗಾರಿಯನ್ನು ಯಾರೂ ನೋಡುವದಿಲ್ಲ ಎಂದು ಕಳಪೆಮಟ್ಟದ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅಭಯ ಪಾಟೀಲ ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ
ಮಣ್ಣು ಮಿಶ್ರಿತ ಮರಳು ಉಪಯೋಗಿಸಿ ಕಾಲುವೆ ನಿರ್ಮಾಣ ಮಾಡಲಾಗಿದ್ದು ಕ್ಯುರಿಂಗ್ ಗಾಗಿ ಹೊದಿಸಲಾದ ಗೋಣಿ ಚೀಲಗಳು ಕಾಲುವೆಯಲ್ಲಿ ಅಂಟಿಕೊಂಡಿವೆ ಕಬ್ನಿಣ ತುಕ್ಕು ಹಿಡಿದಿದ್ದು ಈ ಬಗ್ಗೆ ಸ್ಮಾರ್ಟ್ ಸಿಟಿ ಇಂಜಿನಿಯರ್ ವಿಚಾರಿಸಿದರೆ ಅವೈಜ್ಞಾನಿಕ ಉತ್ತರ ಕೊಡುತ್ತಿದ್ದು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ದೊಡ್ಡ ಫ್ರಾಡ್ ನಡೆಯುತ್ತಿದೆ ಎಂದು ಅಭಯ ಪಾಟೀಲ ಆರೋಪಿಸಿದ್ದಾರೆ