ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಬಹುಮತ ಪಡೆದುಕೊಂಡಿದೆ,ಪಕ್ಷದ 35 ಜನ ನಗರ ಸೇವಕರು ಚುನಾಯಿತ ರಾಗಿದ್ದು ಅವರು ಪ್ರತಿಜ್ಞಾವಿಧಿ ಸ್ವೀಕರಿಸುವ ಮೊದಲೇ ಈ ನಗರ ಸೇವಕರು ಜನರ ಬಳಿಗೆ ಧಾವಿಸುವ,ಎಲ್ಲರ ಸಮಸ್ಯೆ
ಆಲಿಸುವ,ವಿಭಿನ್ನವಾದ,ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಶಾಸಕ ಅಭಯ ಪಾಟೀಲ ಆಯೋಜಿಸಿದ್ದಾರೆ.
ರವಿವಾರ, ದಿನಾಂಕ:12-09-2021 ಮುಂಜಾನೆ: 09:00 ಗಂಟೆಗೆ ಮಿಲೇನಿಯಮ್ ಉದ್ಯಾನದಲ್ಲಿ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಎಲ್ಲ ನಗರಸೇವಕರು ಭಾಗವಹಿಸಿ,ಸಂಘ ಸಂಸ್ಥೆಗಳ,ಬೀದಿ ವ್ಯಾಪಾರಿಗಳ,ವಿವಿಧ ಕಸುಬು ಮಾಡುತ್ತಿರುವ ಕಾರ್ಮಿಕರನ್ನು,ಬೆಳಗಾವಿಯಲ್ಲಿ ಇರುವ ಸುಮಾರು 27 ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಚೆಂಬರ್ಸ ಆಫ ಕಾಮಸ್೯, ಸಣ್ಣ ಕೈಗಾರಿಕೆ ಉದ್ಯಮಿಗಳು, ಲಘು ಉದ್ಯೋಗ ಭಾರತಿ, ಸಾರಿ ಅಸೋಸಿಯೇಷನ್, ಹೇರ್ ಸಲೂನ್ ಅಸೋಸಿಯೇಷನ್, ಕಾಯಿಪಲ್ಲೆ ವ್ಯಾಪಾರಸ್ಥರು, ಬಾರ್ ಅಸೋಸಿಯೇಷನ್ ಹಾಗೂ ಮುಂತಾದ ಸಂಘಟನೆಯ ಪದಾಧಿಕಾರಿಗಳು, ನೂತನ ನಗರ ಸೇವಕರ ಜೊತೆ ಸಂವಾದ ನಡೆಸಿ ಸಮಸ್ಯೆಗಳನ್ನು ಹೇಳಿಕೊಳ್ಳಲಿದ್ದಾರೆ.
ನೂತನ ನಗರ ಸೇವಕರಿಗೆ ಬೆಳಗಾವಿ ಜನತೆಯ ಸಮಸ್ಯೆಗಳ ಬಗ್ಗೆ ಗೊತ್ತಾಗಬೇಕು,ನೂತನ ನಗರ ಸೇವಕರು ಸದೃಡ,ಸ್ವಾವಲಂಬಿ ಬೆಳಗಾವಿ ನಗರ ನಿರ್ಮಾಣಕ್ಕೆ ನಗರ ಸೇವಕರು ಸಂಕಲ್ಪ ಮಾಡಬೇಕು ಎನ್ನುವ ಸದುದ್ದೇಶದಿಂದ ಶಾಸಕ ಅಭಯ ಪಾಟೀಲ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರುವ ಮೊದಲೇ ಜನರ ಬಳಿಗೆ ಧಾವಿಸುವ ಅಪರೂಪದ ಕಾರ್ಯಕ್ರಮ ಏರ್ಪಡಿಸಿದ್ದಾರೆ.
ಇಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಬೆಳಗಾವಿ ನಗರದ ಮಿಲೇನಿಯಂ ಗಾರ್ಡನ್ ದಲ್ಲಿ ಆರಂಭವಾಗುವ ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಪ್ರಾಯ ಮಂಡಿಸಲು,ತಮ್ಮ ಸಮಸ್ಯೆಗಳನ್ನು ನೂತನ ನಗರ ಸೇವಕರ ಗಮನಕ್ಕೆ ತರಲು ಎಲ್ಲರಿಗೂ ಅವಕಾಶ ಇದೆ.
ತಪ್ಪದೇ ಸಂವಾದದಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಲು ಈ ಸಂವಾದ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ.