ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ದಕ್ಷಿಣ ಉತ್ತರದ ಸಮ್ಮಿಲನವಾಗಿದೆ ಎರಡೂ ಕ್ಷೇತ್ರದ ಶಾಸಕರು ಒಟ್ಟಿಗೆ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಶೀಲಿಸಿ ನಿಗದಿತ ಸಮಯದಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡುತ್ತಿರುವ ದೃಶ್ಯ ಬೆಳಗಾವಿ ನಗರದಲ್ಲಿ ಸಾಮಾನ್ಯವಾಗಿದೆ
ಶಾಸಕರಾಗಿ ಆಯ್ಕೆ ಆಗುತ್ತಿದ್ದಂತೆಯೇ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಅವರು ಈಗಾಗಲೇ ಬೆಳಗಾವಿಯ ರೆಲ್ವೇ ಮೇಲ್ಸೇತುವೆ ಕಾಮಗಾರಿ ಹಾಗು ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಶೀಲನೆ ಮಾಡುವ ಜೊತೆಗೆ ಅನೇಕ ಕಾಮಗಾರಿಗಳ ಪರಶೀಲನೆ ನಡೆಸಿರುವದು ವಿಶೇಷವಾಗಿದೆ
ಶನಿವಾರ ಶಾಸಕದ್ವಯರು ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದ ಕಟ್ಟಡ ಕಾಮಗಾರಿಯನ್ನು ಪರಶೀಲಿಸಿದರು ಸಾರಿಗೆ ಇಲಾಖೆಯ ಅಧಿಕಾರಿಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು
ಬೆಳಗಾವಿ ಕೇಂದ್ರ ಬಸ್ ನಿಲ್ಧಾಣದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ಸಾರಿಗೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಅಭಯ ಪಾಟೀಲ ಬೆಳಗಾವಿ ಮಹಾನಗರಕ್ಕೆ ದಿನನಿತ್ಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಪ್ರಯಾಣಿಕರು ಸೇರಿದಂತೆ ಸಾವಿರಾರು ಜನ ಪ್ರಯಾಣಿಕರು ಬರುತ್ತಾರೆ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದ ಕಟ್ಟಡ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದು ಕೊಳ್ಳಬೇಕು ಅಧಿಕಾರಿಗಳು ಕಾಮಗಾರಿಯ ಗುಣ ಮಟ್ಟದ ಮೇಲೆ ನಿರಂತರ ನಿಗಾ ಇಡುವುದರ ಮೂಲಕ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಭಯ ಪಾಟೀಲ ಅಧಿಕಾರಿಗಳಿಗೆ ತಾಕೀತು ಮಾಡಿದರು
ಕಾಮಗಾರಿ ಪರಶೀಲನೆ ಮಾಡಿದ ಬಳಿಕ ಮಾದ್ಯಮಗಳ ಜತೆ ಮಾತನಾಡಿದ ಅಭಯ ಪಾಟೀಲ ಬೆಳಗಾವಿ ಮಹಾನಗರ ಅತೀ ವೇಗದಲ್ಲಿ ಬೆಳೆಯುತ್ತರುವ ನಗರವಾಗಿದೆ ಇಲ್ಲಿಯ ಬಸ್ ನಿಲ್ಧಾಣ ಹೈಟೆಕ್ ಆಗಬೇಕೆನ್ನುವದು ಸಾರ್ವಜನಿಕರ ಮಹಾದಾಸೆಯಾಗಿತ್ತು ಕಾಮಗಾರಿ ಆರಂಭಗೊಂಡು ವರ್ಷ ಕಳೆದಿದೆ ಕಾಮಗಾರಿ ಮಂದ ಗತಿಯಲ್ಲಿ ನಡೆಯುತ್ತಿದೆ ಕಾಮಗಾರಿಯ ವೇಗವನ್ನು ಹೆಚ್ಚಿಸಿ ಗುಣಮಟ್ಟ ಕಾಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಪ್ರತಿ ಎರಡು ವಾರಕ್ಕೊಮ್ಮೆ ಕಾಮಗಾರಿಯ ವೇಗವನ್ನು ಪರಶೀಲನೆ ಮಾಡುತ್ತೇವೆ ಕಾಮಗಾರಿಯ ಗುಣಮಟ್ಟದ ಮೇಲೆ ನಿಗಾ ಇಡುತ್ತೇವೆ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಎಲ್ಲ ರೀತಿಯ ಕ್ರಮ ಜರುಗಿಸುತ್ತೇವೆ ಎಂದು ಅಭಯ ಪಾಟೀಲ ಹೇಳಿದರು