ಬೆಳಗಾವಿ-ಪ್ರದಾನಿ ನರೇಂದ್ರ ಮೋದಿ ಅವರು ಪೊರಕೆ ಹಿಡಿದು ದೇಶದ ಜನರಿಗೆ ಸ್ವಚ್ಛ ಭಾರತದ ಪಾಠ Àಹೇಳಿ ಮೊತ್ತೊಂದು ಬಾರಿ ಪೊರಕೆ ಹಿಡಿದ ಉದಾಹರಣೆ ಇಲ್ಲ ಆದರೆ ಮಾಜಿ ಶಾಸಕ ಅಭಯ ಪಾಟೀಲರು ನಿರಂತರವಾಗಿ ಅಭಿಯಾನ ಮುಮದುವರೆಸಿ ಎಲ್ಲರ ಗಮನ ಸೆಳೆದಿದ್ದಾರೆ
ತಮ್ಮ ನೂರಾರು ಯುವ ಮಿತ್ರರೊಂದಿಗೆ ಪ್ರತಿ ಭಾನುವಾರ ನಗರದ ವಿವಿಧ ಪ್ರದೇಶಗಳಲ್ಲಿ ತಪ್ಪದೇ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದು ಈ ಭಾನುವಾರ ಅಭಯ ಪಾಟೀಲರ ಸ್ವಚ್ಛತಾ ಪಡೆ ಏಕಾ ಏಕಿ ನಗರದ ಜಿಲ್ಲಾ ಆಸ್ಪತ್ರೆಗೆ ನುಗ್ಗಿ ಪೌರ ಕಾರ್ಮಿಕರಂತೆ ಸ್ವಚ್ಛತಾ ಕಾಮಗಾರಿಗಳನ್ನು ನಡೆಸಿ ಎಲ್ಲರ ಗಮನ ಸೆಳೆಯಿತು
ಆಸ್ಪತ್ರೆಯ ತುರ್ತು ನಿಗಾ ಘಟಕ ಮಹಿಳಾ ರೋಗಿಗಳ ವಿಭಾಗ ಸೇರಿದಂತೆ ಆಸ್ಪತ್ರೆಯ ಶೌಚಾಲಯ ಸೇರಿದಂತೆ ಆಸ್ಪತ್ರೆಯ ಮೈಲಿಗೆಯನ್ನು ತೊಳೆದು ಹಾಕಿದ ಅಭಯ ಪಾಟೀಲರ ಕ್ಲೀನ್ ಪಡೆ ಯಾವುದೇ ರೀತಿಯ ಸಂಕೋಚ ಇಲ್ಲದೇ ಪೌರ ಕಾರ್ಮಿಕರಂತೆ ಕೈಯಲ್ಲಿ ಪೊರಕೆ ಹಿಡಿದು ಸರಸರನೇ ಕಸಗೂಡಿಸಿ ಫಟಾ..ಫಟ್ ಎಂದು ಕ್ಷಣಾರ್ಧದಲ್ಲಿಯೇ ಆಸ್ಪತ್ರೆಯನ್ನು ಸ್ವಚ್ಛಗೊಳಿಸಿದರು
ಸುಮಾರು ನೂರು ಜನರ ಪಡೆ ಅಭಯ ಪಾಟೀಲರ ನೇತ್ರತ್ವದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಧೀಡೀರನೇ ಸ್ವಚ್ಛತಾ ಅಭಿಯಾನ ನಡೆಸಿ ಆಸ್ಪತ್ರೆಯ ಅಧಕಾರಿಗಳಿಗೆ ಸ್ವಚ್ಛತೆಯ ಚುಚ್ಚುಮದ್ದು ನೀಡಿತು
ಆಸ್ಪತ್ರೆಯ ಸ್ವಚ್ಛತೆಗೆ ಹೊರ ಗುತ್ತಿಗೆ ನೀಡಲಾಗಿದೆ ಆದರೂ ಆಸ್ಪತ್ರೆಯ ಪರಿಸ್ಥಿತಿ ನೋಡಿದರೆ ನಿಜವಾಗಿಯೂ ಇದು ಸರ್ಕಾರಿ ದವಾಖಾನೆ ಅಲ್ಲವೇ ಅಲ್ಲ ಇದೊಂದು ಸರ್ಕಾರಿ ಕಸಾಯಿ ಖಾನೆ ಎನ್ನುವ ಪರಿಸ್ಥಿತಿ ಇಲ್ಲಿದೆ ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಮಾಜಿ ಶಾಸಕ ಅಭಯ ಪಾಟೀಲ ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತಾ ಅಬಿಯಾನ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
ಅಭಯ ಪಾಟೀಲರು ತಪ್ಪದೇ ಪ್ರತಿ ರವಿವಾರ ಸ್ವಚ್ಛತಾ ಅಭಿಯಾನ ನಡೆಸುತ್ತಾರೆ ಈ ಕುರಿತು ಅವರು ಮಾದ್ಯಮಗಳಿಗೂ ಮಾಹಿತಿ ನೀಡುವದಿಲ್ಲ ಅವರಿಗೆ ಪ್ರಚಾರದ ಹಂಗೂ ಇಲ್ಲ ಅನ್ನೋದು ಇದರಿಂದ ಸ್ಪಷ್ಠವಾಗುತ್ತದೆ ಈ ರವಿವಾರ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ್ದರಿಂದ ಇದನ್ನು ನೋಡಿದ ಸಾರ್ವಜನಿಕರೇ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಭಯ ಪಾಟೀಲರ ಸ್ವಚ್ಛತಾ ಅಭಿಯಾನಕ್ಕೆ ದೊಡ್ಡ ಇತಿಹಾಸವೇ ಇದೆ ಈ ಹಿಂದೆ
ಅಭಯ ಪಾಟೀಲರು ಆಗಿನ ಹಿರೇಬಾಗೇವಾಡಿ ಈಗಿನ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದಾಗ ಜಾಫರವಾಡಿ ಗ್ರಾಮದಲ್ಲಿ ಶ್ರಮದಾನ ಮಾಡಿ ರಾಜ್ಯದ ಗಮನ ಸೆಳೆದಿದ್ದರು ಅಪಾರ ಜನ ಮೆಚ್ಚುಗೆ ಗಳಿಸಿದ್ದರು ಗ್ರಾಮದ ಜನ ಅವರ ಹೆಸರನ್ನು ತಮ್ಮ ಗ್ರಾಮಕ್ಕೆ ನಾಮಕರಣ ಮಾಡಿ ಜಾಫರವಾಡಿಯನ್ನು ಅಭಯವಾಡಿ ಎಂದು ಮರು ನಾಮಕರಣ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.