ಬೆಳಗಾವಿ- ಬುಧವಾರ ಬೆಳಿಗ್ಗೆ ಯುವ ಪಡೆ ರಾಷ್ಟ್ರಪೇಮದೊಂದಿಗೆ ರಾಷ್ಟ್ರ ಪ್ರೇಮ, ರಾಷ್ಟ್ರ ಪ್ರಜ್ಞೆ ರಾಷ್ಟ್ರೀಯತೆಯ ಕಡೆಗೆ ಎಲ್ಲರನ್ನು ಕೊಂಡೊಯ್ಯುವ ತಿರಂಗಾ ರ್ಯಾಲಿ ಹೊರಡಿಸಿ ಬೆಳಗಾವಿಯಲ್ಲಿ ಎಲ್ಲರ ಗಮನ ಸೆಳೆದರು
ಬೆಳಗಾವಿಯ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಸ್ವಾಮಿ ವಿವೇಕಾನಂದರ 155ನೇ ಜಯಂತಿ ಮತ್ತು ಸಹೋದರಿ ನಿವೇದಿತಾರ 150ನೇ ಜಯಂತೋತ್ಸವದ ಅಂಗವಾಗಿ ಬುಧವಾರ ನಮ್ಮ ನಡಿಗೆ ರಾಷ್ಟ್ರೀಯತೆ ಕಡೆಗೆ ಎಂಬ ವಿವೇಕ ತಿರಂಗಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು
500 ಮೀಟರ್ ಉದ್ದದ ತಿರಂಗಾ ರ್ಯಾಲಿಯನ್ನು ಶ್ರೀ. ಕೃಷ್ಣದೇವರಾಯ ವೃತ್ತದಿಂದ ಆರಂಭವಾದ ರ್ಯಾಲಿ ಚನ್ನಮ್ಮ ವೃತ್ತದ ಮೂಲಕ ಸಂಚರಿಸಿ ಧರ್ಮವೀರ
ಸಂಭಾಜಿ ಚೌಕ ವರೆಗೆ ಭಾರತ ಮಾತಾ ಕೀ ಜೈ ಎನ್ನುವ ಜೈಘೋಷಗಳೊಂದಿಗೆ ಸಾಗಿತು
ಮಹಾರ್ಯಾಲಿಯಲ್ಲಿ ಬೆಳಗಾವಿಯ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು ಸುಮಾರು 5000 ಕೂ ಹೆಚ್ಚು ವಿದ್ಯಾರ್ಥಿಗಳು ಈ ಐತಿಹಾಸಿಕ ರ್ಯಾಲಿಗೆ ಸಾಕ್ಷಿಯಾದರು
ರಾಷ್ಟ್ರೀಯತೆಯ ಭಾವೈಕ್ಯತೆ ಮೂಡಿಸುವ ಈ ರ್ಯಾಲಿಯಲ್ಲಿ ಭಾರತ ಮಾತಾಕಿ ಜೈ, ವಂದೇಮಾತರಂ ಘೊಷಣೆಯೊಂದಿಗೆ ಸ್ವಾಮಿ ವಿವೇಕಾನಂದರ ಹಾಗೂ ಸಹೋದರಿ ನಿವೇದಿತಾರ ಮೇರವಣಿಗೆ ನಡೆಸಲಾಯಿತು
ಕೈವಲ್ಯಾನಂದ ಸ್ವಾಮೀಜಿ ಹಾಗೂ ವಿದ್ಯಾರ್ಥಿ ಮುಖಂಡರು ಪಾಲ್ಗೊಂಡಿದ್ದರು