ಬೆಳಗಾವಿ- ಬೆಳಗಾವಿಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ,ಸುಭಾಷ್ ಸುರೇಂದ್ರ ಉಪ್ಪಾರ್ ಇವರ ರುಕ್ಮಿಣಿ ನಗರದ ಮನೆ ಸೇರಿದಂತೆ ನಾಲ್ಕು ಕಡೆ ಎಸಿಬಿ ದಾಳಿ ನಡೆದಿದ್ದು ಕೋಟ್ಯಾಂತರ ರೂ ಆಸ್ತಿ ಪತ್ತೆಯಾಗಿದೆ.
ಆಕ್ರಮ ಆಸ್ತಿ ಹೊಂದಿದ ಆರೋಪದ ಮೇಲೆ ಇವರ ವಿರುದ್ಧ,ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಇವರು ಬೆಳಗಾವಿಯಲ್ಲಿ ರಿಸ ನಂ.1291/2-ಪಿ1,ಪ್ಲಾಟ್ ನಂ 84 ಕ್ಷೇತ್ರ 2720 ಚದರ ಅಡಿ,ರುಕ್ಮಿಣಿ ನಗರದಲ್ಲಿ ಭವ್ಯವಾದ ಡುಪ್ಲೆಕ್ಸ್ ಬಂಗಲೆ,ಕುಮಾರಸ್ವಾಮಿ ಲೇಔಟ್ ನಲ್ಲಿ ಪ್ಲಾಟ್,337 ಗ್ರಾಂ ಬಂಗಾರದ ಆಭರಣಗಳು,1511ಗ್ರಾಂ ಬೆಳ್ಳಿಯ ವಸ್ತು.ಗಳನ್ನು ಹಾಗು 51,51,672 ರೂ ವಿವಿಧ ಬ್ಯಾಂಕುಗಳಲ್ಲಿ ಬ್ಯಾಂಕ್ ಬ್ಯಾಲೆನ್ಸ್ ,ಜೊತೆಗೆ 5 ಲಕ್ಷ ರೂಗಳ ಎಲ್ ಐ ಸಿ ಬಾಂಡ್ ಗಳು ಇರುವದು ಪತ್ತೆಯಾಗಿದೆ.ಎಂದು ಬೆಳಗಾವಿಯ ಎಸಿಬಿ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ