ಬೆಳಗಾವಿ-
ಟಿಪ್ಪರ್ ಹರಿದು ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಕ್ಯಾಂಪ್ ಪ್ರದೇಶ ಗಣೇಶಪುರ ರಸ್ತೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಕಾಂಪ್ ಪ್ರದೇಶದ ಜಿ.ಎ. ಹೈಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿ ಯುಸೂಫ್ ಹುದಲಿ (14) ಮೃತಪಟ್ಟ ದುರ್ದೈವಿ. ಯುಸೂಫ್ ಸೈಕಲ್ ಮೇಲೆ ಶಾಲೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಟಿಪ್ಪರ್ ಹರಿದಿದೆ. ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು, ಆರ್ಮಿ ಸಿಬ್ಬಂದಿಗಳೂ ಟಿಪ್ಪರ್ ಚಾಲಕನ್ನ ಹಿಡಿದು ಸಂಚಾರಿ ಪೊಲೀಸರ ಕೈಗೆ ಒಪ್ಪಿಸಿದ್ದಾರೆ
ಕೆಲದಿನಗಳ ಹಿಂದಷ್ಟೆ ಈ ಬಾಲಕ ತನ್ನ ತಂದೆಯ ಜೊತೆ ಜಗಳಾಡಿ ಸೈಕಲ್ ಕೊಡಿಸುವಂತೆ ಹಟ ಹಿಡಿದಾಗ ಅಟೋ ಚಾಲಕನಾದ ಇತನ ತಂದೆ ಹೊಸ ಸೈಕಲ್ ಕೊಡಸಿದ್ದ ಎಂದು ತಿಳಿದು ಬಂದಿದೆ ಎಲ್ಲವೂ ವಿಧಿಯಾಟ ಸೈಕಲ್ ಮೇಲೆ ಶಾಲೆಗೆ ಹೋಗುತ್ತಿದ್ದ ಬಾಲಕ ಮಸಣ ಸೇರಿರುವದು ದುರ್ದೈವದ ಸಂಗತಿ
. ಘಟನೆಯಿಂದ ಆಕ್ರೋಶಗೊಂಡ ಜನ್ರು ಅಡ್ಡಾದಿಡ್ಡಿ ವಾಹನ ಚಾಲಾಯಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಸ್ಥಳಕ್ಕೆ ಡಿಸಿಪಿ ಅಮರನಾಥ ರೆಡ್ಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಬೆಳಗಾವಿಯ ಸಂಚಾರಿ ದಕ್ಷಿಣ ವಿಭಾಗದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ