ಬೆಳಗಾವಿ- ಐದು ದಿನಗಳ ಸಿಎಂ ಕುಮಾರಸ್ವಾಮಿಗೆ ಉತ್ತರ ಕರ್ನಾಟಕ ಪ್ರವಾಸಕ್ಕೆ ಬೆಳಗಾವಿಯಲ್ಲಿ ವಿರೋಧ ವ್ಯಕ್ತವಾಗಿದೆ.
ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಉತ್ತರ ಕರ್ನಾಟಕ ಹೋರಾಟ ಸಮಿತಿ ಮುಖಂಡರಾದ ನಾಗೇಶ ಗೋಲಶೆಟ್ಟಿ, ಅಡಿವೇಶ ಇಟಗಿ ಈ ಎಚ್ಚರಿಕೆ ನೀಡಿದ್ದು, ಸುವರ್ಣ ವಿಧಾನ ಸೌಧಕ್ಕೆ ಕಚೇರಿ ಸ್ಥಳಾಂತರಿಸದೆ ಉತ್ತರಕ್ಕೆ ಕಾಲಿಡಬೇಡಿ. ಎಂದು ಸಮೀತಿ ಎಚ್ಚರಿಕೆ ನೀಡಿದೆ
ಮಠಾಧೀಶರ ನೇತ್ರತ್ವದಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಸಿಎಂ ಭರವಸೆ ಕೊಟ್ಟಿದ್ದರು.15 ದಿನಗಳಲ್ಲಿ ಶಕ್ತಿ ಸೌಧಕ್ಕೆ ವಿವಿಧ ಕಚೇರಿ ಸ್ಥಳಾಂತರಿಸುವುದಾಗಿ ಹೇಳಿದ್ರು. ಆ 15 ದಿನಗಳ ಗಡುವು ಮುಗಿದಿದೆ. ಇನ್ನೂ ಕಚೇರಿಗಳು ಬಂದಿಲ್ಲಾ..
ಸುವರ್ಣ ಸೌಧಕ್ಕೆ ಕಚೇರಿಗಳನ್ನ ಸ್ಥಳಾಂತರಿಸದೇ ಬಂದ್ರೆ ಪ್ರತಿಭಟನೆ ಮಾಡ್ತಿವಿ. ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಪ್ರತಿಭಟನೆ ಮಾಡ್ತಿವಿ. ಸಮಿತಿ ಜಿಲ್ಲಾಧ್ಯಕ್ಷ ಅಡಿವೇಶ ಇಟಗಿ ಸಿಎಂಗೆ ಎಚ್ಚರಿಕೆ ನೀಡಿದ್ರು.
ಅಭಿವೃದ್ಧಿ ಇಲ್ಲವೇ ಪ್ರತ್ಯೇಕ ರಾಜ್ಯ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದ್ದಾರೆ.ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟದ ರೂಪುರೇಷೆಗಳನ್ನು ಶಿಘ್ರದಲ್ಲಿಯೇ ಸಿದ್ಧಪಡಿಸುತ್ತೇವೆ ಎಂದು ಉಕ ಅಭಿವೃದ್ಧಿ ಸಮೀತಿ ತಿಳಿಸಿದೆ