ಬೆಳಗಾವಿ- ಚಾಕ್ಲೇಟ್ ಆಮೀಷ ತೋರಿಸಿ ನಾಲ್ಕು ವರ್ಷದ ಮುಗ್ದ ಬಾಲೆಯ ಮೇಲೆ ಅತ್ಯಾಚಾರ ವೆಸಗಿದ್ದ ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ 25 ಸಾವಿರ ರೂ ದಂಡ ವಿಧಿಸಿ ಬೆಳಗಾವಿಯ ಮೂರನೇಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ
ಹುಕ್ಕೇರಿ ತಾಲೂಕಿನ ಗ್ರಾಮವೊಂದರಲ್ಲಿ ನಾಲ್ಕು ವರ್ಷದ ಬಾಲೆಯ ಮೇಲೆ ಅತ್ಯಾಚಾರ ವೆಸಗಿದ್ದ ಶಿವಾನಂದ ಉರ್ಫ ಪಪ್ಪು ಬಾಬು ಮಾಳಿ ಉರ್ಪ ಮಾಲಗಾರ (22) ಎಂಬ ಆರೋಪಿಗೆ ನ್ಯಾಯಾಧೀಶ ಬಸವಾಜ ಜಿಗ್ಗರೆಡ್ಡಿ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ
23-8-2013 ರಂದು ಈ ಆರೋಪಿ ಚಾಕಲೇಟ್ ಕೊಟ್ಟು ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ ಈ ಘಟನೆಯಿಯಿಂದ ತೀವ್ರ ವಾಗಿ ಅಸ್ವಸ್ಥ್ಯಗೊಂಡಿದ್ದ ಬಾಲಕಿ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ 43 ದಿನ ICU ನಲ್ಲಿ ಚಿಕಿತ್ಸೆ ಪಡೆದು ಗುಣಮುಖ ವಾಗಿದ್ದಳು
ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಸಂಕೇಶ್ವರ ಠಾಣೆಯ ಪೋಲೀಸರು ಕಲಂ 376,307 ಕೇಸು ಹಾಕಿ ನ್ಯಾಯಾಲಯದಲ್ಲಿ 19 ಸಾಕ್ಷಿಗಳನ್ನು 24 ಡಾಕುಮೆಂಟ್ ಗಳನ್ನು ಮತ್ತು 9 ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದರು ಸರ್ಕಾರಿ ಅಭಿಯೋಜಕರಾಗಿ ನ್ಯಾಯವಾದಿ ಎಲ್ ವ್ಹಿ ಪಾಟೀಲರು ವಾದ ಮಂಡಿಸಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ