ಸರ್ಕಾರಿ ನೌಕರರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ವಿಷಯಕ್ಕೆ ಸಮಂಧಿಸಿದಂತೆ ಮಾನ್ಯ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಈ ತೀರ್ಪನ್ನು ಯಥಾವತ್ತಾಗಿ ರಾಜ್ಯದಲ್ಲಿ ಅನುಷ್ಠಾನ ಮಾಡಬೇಕೆಂದು ಆಗ್ರಹಿಸಿ ಅಲ್ಪ ಸಂಖ್ಯಾತ,ಹಿಂದುಳಿದ ಮತ್ತು ಸಾಮಾನ್ಯ ನೌಕರ ಸೇರಿಕೊಂಡು ಅಸ್ತಿತ್ವಕ್ಕೆ ತಂದ ಅಹಿಂಸಾ ಸಂಘಟನೆ ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು
ಜಾತಿ ಆಧಾರಿತ ಮೀಸಲಾತಿ ಬಡ್ತಿಯಲ್ಲಿ ಬೇಡ ಸೇವಾ ಆಧಾರಿತ ಬಡ್ತಿಯನ್ನು ರಾಜ್ಯ ಸರ್ಕಾರದ ನೌಕರರಿಗೆ ಕೊಡಬೇಕು ಎಂದು ಮಾನ್ಯ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ್ದರೂ ಕೂಡ ರಾಜ್ಯ ಸರ್ಕಾರ ಇನ್ನುವರೆಗೆ ತೀರ್ಪನ್ನು ಅನುಷ್ಠಾನಗೊಳಿಸದೇ ಸಾಮಾಜಿಕ ನ್ಯಾಯಕ್ಕೆ ಚ್ಯುತಿ ತಂದಿದೆ ಎಂದು ಅಹಿಂಸಾ ನೌಕರರು ಆಕ್ರೋಶ ವ್ಯೆಕ್ತಪಡಿಸಿ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು
ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ ಆದೇಶದಂತೆ ರಾಜ್ಯ ಸರ್ಕಾರಿ ನೌಕರರಿಗೆ ಸೇವಾ ಆಧಾರಿತ ಬಡ್ತಿ ನೀಡಬೇಕು ಬೇರೆಯವರ ಪಾಲು ನಮಗೆ ಬೇಡ ನಮ್ಮ ಪಾಲು ನಮಗೆ ಕೊಡಿ ಎಂದು ಅಹಿಂಸಾ ನೌಕರರು ಒತ್ತಾಯ ಮಾಡಿದರು ಬೇಡಿಕೆ ಈಡೇರಿಸುವಂತೆ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ಮನವಿ ಅರ್ಪಿಸಿದರು
ಸಾವಿರಾರು ಸಂಖ್ಯೆಯಲ್ಲಿ ಸೇರಿದ ಅಹಿಂಸಾ ನೌಕರರು ಸರ್ದಾರ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಸಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ