ಅಂಬೋಲಿ ಜಲಪಾತದ ಬಳಿ ಕಾರಿಗೆ ಬೆಂಕಿ ಸುಟ್ಟು ಭಸ್ಮವಾದ ಬೆಳಗಾವಿಯ ಮಹಿಳೆ ….

 

ಸಳಗಾವಿ- ಅಂಬೋಲಿ ಜಲಪಾತದದ ಬಳಿ ಕಾರು ಹೊತ್ತ ಉರಿದು ಕಾರಿನಲ್ಲಿದ್ದ ಮಹಿಳೆ ಸುಟ್ಟು ಭಸ್ಮವಾಗಿದ್ದು ಕಾರಿನ ಚಾಲಕ ಪಾರಾದ ಘಟನೆ ರಾತ್ರಿ 9 ಘಂಟೆ ನಡೆದಿದೆ

ಪೀರನವಾಡಿ ಗ್ರಾಮದ ದುಂಡಪ್ಪಾ ಪದ್ಮನ್ನವರ ಮತ್ತು ಅವರ ಪತ್ನಿ ಸಾವಂತವಾಡಿಯಿಂದ ಬೆಳಗಾವಿಗೆ ಬರುತ್ತಿರುವಾಗ ಈ ದುರಂತ ಸಂಭವಿಸಿದೆ

ಅಂಬೋಲಿ ಜಲಪಾತದದ ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಕಾರು ಚಲಾತಿಸುತ್ತಿದ್ದ ದುಂಡಪ್ಪ ಕಾರಿನಿಂದ ಜಿಗಿದಿದ್ದಾನೆ ಕಾರಿನಲ್ಲಿದ್ದ ದುಂಡಪ್ಪನ ಪತ್ನಿ ಸೀಟ್ ಬೆಲ್ಟ್ ಧರಿಸಿದ್ದರಿಂದ ಕಾರಿನಿಂದ ಹೊರಗೆ ಬರುವಷ್ಟರಲ್ಲಿ ಕಾರು ಧಗಧಗನೇ ಹೊತ್ತು ಉರಿದ ಪರಿಣಾಮ ಕಾರಿನಲ್ಲಿದ್ದ ದುಂಡಪ್ಪನ ಪತ್ನಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ‌‌.
ದುಂಡಪ್ಪ ತನ್ನ ಪತ್ನಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ.ಆದರೂ ಪ್ರಯತ್ನ ವಿಫಲವಾಗಿದೆ .ಕ್ಷಣಾರ್ಧದಲ್ಲಿ ಮಹಿಳೆ ಸುಟ್ಟು ಭಸ್ಮವಾಗಿದ್ದಾಳೆ

ಪೀರನವಾಡಿಯ ದುಂಡಪ್ಪ ಪದ್ಮಣ್ಣವರ ಗಾಯಗೊಂಡಿದ್ದು ಸಾವಂತವಾಡಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

Check Also

ರೇಖಾ ಗುಪ್ತಾ ದೆಹಲಿ ಸಿಎಂ ಇಂದು ಪ್ರಮಾಣ ವಚನ

ಬೆಳಗಾವಿ- ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನ ಕೊಡುತ್ತಾರೆ ಎನ್ನುವ ವಿಚಾರ ಈಗ ಮತ್ತೊಮ್ಮೆ ಸಾಭೀತಾಗಿದೆ. ಪ್ರಥಮ ಬಾರಿಗೆ …

Leave a Reply

Your email address will not be published. Required fields are marked *