ಬೆಳಗಾವಿ- ಸಹ್ಯಾದ್ರಿ ಬೆಟ್ಟದ ಸೆರಗಿನಲ್ಲಿ ನಿತ್ಯ ಹರಿದ್ವರ್ಣ ಪಶ್ಚಿಮ ಘಟ್ಟದ ಮಡಿಲಲ್ಲಿ ಹರಿಯುವ ಜಲಧಾರೆ ನೋಡಲು ಎರಡು ಕಣ್ಣು ಸಾಲುವದಿಲ್ಲ ಸಾಲು ಸಾಲು ಜಲಪಾತಗಳನ್ನು ನೋಡಿ ಮೋಡಗಳಲ್ಲಿ ತೇಲುವ ಮಜಾನೇ ಬೇರೆ
ಬೆಳಗಾವಿ ನಗರದ ಹಿಂಡಲಗಾ ರಸ್ತೆ ಹಿಡಿದು ಬರೊಬ್ಬರಿ 75 ಕಿ ಮೀ ಕ್ರಮೀಸಿದರೆ ಬೇರೊಂದು ಲೋಕಕ್ಕೆ ಹೋದ ಅನುಭವ ನಮಗಾಗುತ್ತದೆ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪೂರ ಜಿಲ್ಲೆಯ ಸಿಂಧದುರ್ಗ ತಾಲೂಕಿನ ಹದ್ದಿಯಲ್ಲಿರುವ ಅಂಬೋಲಿ ಬೆಟ್ಟ ಕರ್ನಾಟಕ ,ಮಹಾರಾಷ್ಟ್ರ, ಮತ್ತು ಗೋವಾ ಈ ಮೂರು ರಾಜ್ಯಗಳ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ
ಬೆಳಗಾವಿ ಗಡಿಯಾಚೆ ಕೇವಲ 75 ಕಿ ಮೀ ದೂರದಲ್ಲಿರಿವ ಅಂಬೋಲಿಯಲ್ಲಿ ಒಂದು ದೊಡ್ಡ ಜಲಪಾತದ ಜಲಧಾರೆ ರಸ್ತೆಯ ಪಕ್ಕದಲ್ಲಿದ್ದರೆ ಹತ್ತಕ್ಕೂ ಹೆಚ್ಚು ಚಿಕ್ಕ ಚಿಕ್ಕ ಜಲಪಾತಗಳು ರಸ್ತೆಯ ಬದಿಗೆ ಕಾಣುತ್ತವೆ
ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ ಹಿರಣ್ಯಕೇಶಿ ನದಿಯ ಉಗಮ ಸ್ಥಾನವಾಗಿರುವ ಅಂಬೋಲಿ ಪ್ರವಾಸಿಗರ ಸ್ವರ್ಗವಾಗಿದೆ
ಅಂಬೋಲಿ ಊರು ಚಿಕ್ಕದಾಗಿದ್ದರೂ ಕೂಡಾ ಇಲ್ಲಿಯ ನಿಸರ್ಗ ಸ್ವರ್ಗಕ್ಕೆ ಸಾಟಿಯಾಗಿದೆ
ಎಲ್ಲಿ ನೋಡಿದಲ್ಲಿ ಜಲಪಾತಗಳು ಮೈದುಂಬಿ ಹರಿಯುವ ಹಿರಣ್ಯಕೇಶಿ ,ಕೈಗೆಟಕುವ ಮೋಡಗಳು ಹೊಸ ಅನುಭವ ನೀಡುತ್ತವೆ
ಮಳೆ ಆಭವಾದರೆ ಸಾಕು ಕರ್ನಾಟಕ ಗೋವಾ ಮತ್ತು ಮಹಾರಾಷ್ಟ್ರ ದ ಸಾವಿರಾರು ಜನ ಪ್ರವಾಸಿಗರು ನಿತ್ಯ ಅಂಬೋಲಿಗೆ ಹೋಗುತ್ತಾರೆ ಇಲ್ಲಿರುವ ಪ್ರಸಿದ್ಧ ಮಹಾದೇವ ಮಂದಿರದ ದರ್ಶನ ಪಡೆಯುತ್ತಾರೆ
ಬೆಟ್ಟ ಗುಡ್ಡಗಳ ಸಂದಿಯಲ್ಲಿ ಹರಿಯುವ ಜಲಪಾತಗಳಲ್ಲಿ ಪ್ರವಾಸಿಗರು ಮೈ ಮರೆತು ಸ್ನಾನ ಮಾಡುವದು ಇಲ್ಲಿಯ ಸ್ಪೇಶ್ಯಾಲಿಟಿ
ರಪ.ರಪ ಸುರಿಯುವ ಮಳೆ ಮತ್ತು ಮೋಡಗಳ ಸೆರಗಿನಲ್ಲಿ ರಸ್ತೆಯ ಪಕ್ಕದಲ್ಲಿ ಸಿಗುವ ಬಿಸಿ.ಬಿಸಿ ಭಜಿ ಸುಡುವ ಗೊಂಜಾಳ ತೆನೆಯ ರುಚಿ ನೋಡುವ ಮಜಾನೇ ಬೇರೆ
ಅಂಬೋಲಿಯ ಮಡಿಲಲ್ಲಿ ಸುತ್ತಾಡಿ ಸುಸ್ತಾದರೆ ಗ್ರಾಮದ ಹೋಮ್ ಹೊಟೇಲ್ ಗಳಲ್ಲಿ ಬಿಸಿ ಬಿಸಿ ಬಾಂಗಡಾ ಊಟ ಆಯಾಸವನ್ನು ದೂರ ಮಾಡುವದರಲ್ಲಿ ಸಂಶಯವೇ ಇಲ್ಲ