Breaking News

ಅಂಬೋಲಿ ಅಮಲಿನ ಹುಡುಗಾಟ…ಈಗ ಶವಕ್ಕಾಗಿ ಹುಡುಕಾಟ

ಬೆಳಗಾವಿ-

ಸ್ನೇಹಿತರೆಂದ್ರೆ ಜೀವಕ್ಕೆ ಜೀವ ಕೊಡೊರನ್ನ ನೋಡಿದ್ದೇವೆ.. ಕೇಳಿದ್ದೇವೆ. ಆದ್ರೆ ಇಲ್ಲಿ ಸ್ನೇಹಿತರಿಂದಲೇ ಸ್ನೇಹಿತರಿಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮೋಜು ಮಸ್ತಿ ಮಾಡಲು ಬಂದು  ಕುಡಿದ ಮತ್ತಿನಲ್ಲಿ ಸ್ನೇಹಿತರ ಪ್ರಚೋದನೆಯ ಮಾತುಗಳಿಗೆ ಕಿವಿಗೊಟ್ಟು ಪ್ರಪಾತಕ್ಕೆ ಹಾರಿ ಬಾರದ ಲೋಕಕ್ಕೆ ಹೋಗಿದ್ದಾರೆ. ಏನಪ್ಪ ಈ ಸ್ಟೋರಿ ಅಂತಿರಾ.. ಈ ಸುದ್ಧಿ ಓದಿ

ಹೌದು.. ಬೆಳಗಾವಿ ಸಮೀಪದ ಸುಪ್ರಸಿದ್ದ ಅಂಬೋಲಿ ಫಾಲ್ಸ್ ಬಳಿಯಿರುವ ಕವಳಾ ಸೇಠ್ ರಿವರ್ಸ್ ಫಾಲ್ಸ್ ನಲ್ಲಿ ಮೊಜು ಮಾಡಲು ಹೋದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ನೇಹಿತರೊಂದಿಗೆ ಮೋಜಿಗೆ ಬಂದಿದ ಈ ಇಬ್ಬರು ಯುವಕರಿಗೆ ಜೊತೆಯಲ್ಲಿದ್ದ ಸ್ನೇಹಿತರು ಪ್ರಚೋದನೆ ನೀಡಿದ್ದೇ ಇವರ ಸಾವಿಗೆ ಕಾರಣವೆನ್ನಲಾಗಿದ್ದು, ಕವಳಾ ಸೇಠ್ ಫಾಲ್ಸಿನ ಪ್ರಪಾತಕ್ಕೆ ಹಾರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಕುಡಿದ ಮತ್ತಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕೈಯಲ್ಲಿ ಮದ್ಯದ ಭಾಟಲಿ ಹಿಡಿದೆ ಪ್ರಪಾತಕ್ಕೆ ಹಾರಿದ್ದಾರೆ.

ಇನ್ನು ಈ ಯುವಕರು ಪ್ರಪಾತಕ್ಕೆ ಹಾರುವ ಮೊದಲು ಒಂದು ಭಾರಿ ಅಲ್ಲಿನ ಸಿಮೆಂಟ್ ಬೇಲಿ ದಾಟಿ ಮತ್ತೆ ಈಚೆಗೆ ಬಂದಿದ್ದಾರೆ. ಆಗ ಜೊತೆಯಲ್ಲಿದ್ದ ಉಳಿದವರಲ್ಲಿ ಯಾರೋ ಒಬ್ರು.. ಆಯ್ತು ನೀವು ಜಿಗದಂಗಾಯಿತು ಅಂತ ಕನ್ನಡದಲ್ಲಿ ಆ ಯುವಕರನ್ನ ಪ್ರಚೋದಿಸಿದ್ದಾರೆ. ಅದಕ್ಕೆ ಮತ್ತೆ ಸಿಮೆಂಟ್ ಬೇಳಿ ದಾಟಿದ ಯುವಕರು ಇಬ್ಬರು ಪರಸ್ಪರ ಕೈಹಿಡಿದು  ಪ್ರಪಾತದ ಆಳಕ್ಕೆ ಹಾರಿದ್ದಾರೆ. ಮೃತರನ್ನ ಇಮ್ರಾನ್ ಗರಡಿ 25 ಮತ್ತು ಪ್ರಸಾದ್ ರಾಠೋಡ್ 21 ಎಂದು ಗುರುತಿಸಲಾಗಿದ್ದು, ಈ ಇಬ್ಬರು ಯುವಕರು ಮೊನ್ನೆ ಸೋಮವಾರ ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ್ ಮೂಲದವರಾಗಿದ್ದಾರೆ. ಮೊನ್ನೆ ಸೋಮವಾರ ಈ ಘಟನೆ ನಡೆದಿದ್ದು ಇಂದು ಓರ್ವನ ಶವ ಪತ್ತೆಯಾಗಿದೆ. ಇನ್ನು ಅಲ್ಲಿಗೆ ಬರುವ ಪ್ರವಾಸ್ಸಿಗರಿಗೆ ಸೂಕ್ತ ತಿಳುವಳಿಕೆ ನೀಡಿ ಮಧ್ಯ ಸೇವನೆಗೆ ನಿರ್ಬಧ ಹೆರಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ

ಒಟ್ನಲ್ಲಿ ಮೋಜು ಮಜಾ ಮಾಡಲು ತೆರಳಿದ್ದ ಸ್ನೇಹಿತರಿಬ್ಬರು ಪ್ರಪಾತಕ್ಕೆ ಹಾರಿ ಪ್ರಾಣ ಕಳೆದುಕೊಂಡಿದ್ರೆ, ಅತ್ತ ಮೃತರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಮತ್ತೊರ್ವನ ಶವಕ್ಕಾಗಿ ತೀವ್ರ ಶೋಧ ನಡೆದಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *