Breaking News

ಅಂಬರೀಶ್ ನಿರ್ಮಿಸಿದ ಮನೆಗಳು ಖಾಲಿ…..ಬಡವರು ಝೋಪಡಿಯಲ್ಲೇ ಜ್ವಾಲಿ…!!!!

ಬೆಳಗಾವಿ- ಬೆಳಗಾವಿಯ ಶ್ರೀನಗರದಲ್ಲಿ ನಿರ್ಮಿಸಿರುವ ಮನೆಗಳನ್ನು ನೋಡಿದ್ರೆ ಕನ್ವರಲಾಲ್ ಅಂಬರೀಶ್ ನೆನಪಾಗುತ್ತಾರೆ ಯಾಕಂದ್ರೆ ಅಂಬರೀಶ್ ಅವರು ವಸತಿ ಸಚಿವರಾಗಿದ್ದಾಗ ಬಹುಮಹಡಿ ಕಟ್ಟಡ ನಿರ್ಮಿಸಿ ಬಡವರಿಗೆ ಆಶ್ರಯ ನೀಡಲು ಕೋಟ್ಯಾಂತರ ರೂ ಅನುದಾನ ನೀಡಿದ್ದರು.

ಆಗಿನ ಜಿಲ್ಲಾಧಿಕಾರಿಯಾಗಿದ್ದಾಗ ಎನ್ ಜಯರಾಂ ಅವರ ಮನವಿ ಮೇರೆಗೆ ವಸತಿ ಸಚಿವರಾಗಿದ್ದ ಅಂಬರೀಶ್ ಅವರು ಶ್ರೀನಗರಕ್ಕೆ ಭೇಟಿ ನೀಡಿ ಅಲ್ಲಿ ಗುಡಿಸಿಲಲ್ಲಿ ವಾಸವಾಗಿದ್ದ ಬಡವರ ಜನಜೀವನ ನೋಡಿ ಮರಗಿದ್ದ ಅಂಬರೀಶ ಕಟ್ಟಡ ಸಮಚ್ಛಯ ನಿರ್ಮಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಿದ್ದರು.

ಅಂಬರೀಶ್ ಅವರು ಬಿಡುಗಡೆ ಮಾಡಿದ ಅನುದಾನದಲ್ಲೇ ಶ್ರೀನಗರದ ಗಾರ್ಡನ್ ಬಳಿ ಆಸ್ರಯ ಮನೆಗಳ ಬಹುಮಹಡಿ ಕಟ್ಟಡ ನಿರ್ಮಿಸಿ ವರ್ಷಗಳೇ ಗತಿಸಿವೆ ಆದರೆ ಇನ್ನುವರೆಗೆ ಝೋಪಡಿಯಲ್ಲಿ ವಾಸ ವಾಗಿರುವ ಬಡವರಿಗೆ ವಸತಿ ಭಾಗ್ಯ ಸಿಗದೇ ಇರುವದು ದೊಡ್ಡ ದುರ್ದೈವ

ಅಂಬರೀಶ್ ಈಗ ನಮ್ಮನ್ನು ಅಗಲಿದ್ದಾರೆ ಗುಡಿದಲು ಮುಕ್ತ ಬೆಳಗಾವಿಗಾಗಿ ಅಂಬರೀಶ್ ಕಂಡ ಕನಸು ನನಸಾಗಲಿಲ್ಲ ಬಡವರಿಗಾಗಿ ನಿರ್ಮಿಸಿದ ಮನೆಗಳನ್ನು ಬಡವರಿಗೆ ಹಂಚಿಕೆ ಮಾಡುವ ಮನಸ್ಸು ಸ್ಥಳೀಯ ಜನಪ್ರತಿನಿದಿಗಳಿಗೆ ಇಲ್ಲವೇ ಇಲ್ಲ ಎನ್ನುವದು ಸ್ಪಷ್ಟವಾಗಿದೆ

ಜನಪ್ರತಿನಿಧಿಗಳು ಬಡವರಿಗೆ ಮನೆ ಹಂಚಿಕೆ ಮಾಡುವ ಕುರಿತು ಇನ್ನುವರೆಗೆ ಕ್ರಮ ಕೈಗೊಳ್ಳದೇ ಇರುವದರಿಂದ ಕಡ್ಟಡಗಳು ರೆಡಿಯಾಗಿದ್ದರೂ ಬಡವರು ಗುಡಿಸಿಲಲ್ಲೇ ವಾಸವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ .

ಮನೆಗಳ ಹಂಚಿಕೆ ಕುರಿತು ಜನಪ್ರತಿನಿಧಿಗಳಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ಮಾಜಿ ಶಾಸಕರು ಸಿದ್ಧಪಡಿಸಿದ ಪಟ್ಟಿಗೆ ಹಾಲಿ ಶಾಸಕರು ಸರ್ಜರಿ ಮಾಡುತ್ತಿದ್ದಾರೆ ರಾಜಕೀಯ ಸರ್ಜರಿಯಲ್ಲಿ ಬಡವರು ಕಷ್ಟ ಅನುಭವಿಸಬೇಕಾಗಿದೆ .

ಕಟ್ಟಡ ನಿರ್ಮಿಸಲು ಅನುದಾನ ನೀಡಿದ ಅಂಬರೀಶ್ ಅವರು ನಿಧನರಾಗಿದ್ದಾರೆ ಈಗಲಾದರೂ ಅಧಿಕಾರಿಗಳು ಕೂಡಲೇ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡುತ್ತಾರೆಯೋ ಅಥವಾ ಕಾಲಹರಣ ಮಾಡುತ್ತಾರೆ ಎನ್ನುವದು ಕಾದುನೋಡಬೇಕಾಗಿದೆ .

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *