ಬೆಳಗಾವಿ- ಚುನಾವಣೆಯ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ ಬಿಜೆಪಿ ಅಧ್ಯಕ್ಷ ಅಮೀತ ಶಾ ಎಪ್ರೀಲ್ 2 ರಂದು ಬೆಳಗಾವಿಗೆ ಬರಲಿದ್ದಾರೆ
ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಇದೇ ಏಪ್ರೀಲ್ 2 ರಿಂದ ಬೆಳಗಾವಿ ಜಿಲ್ಲಾ
ಪ್ರವಾಸ ಕೈಗೊಳ್ಳಲಿರುವ
ಬಿ ಜೆ ಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯಕ್ರಮವನ್ನು
ಯಶಸ್ವಿಗೊಳಿಸಲು ಜಿಲ್ಲೆಯಲ್ಲಿ ನಾಲ್ಕು ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ.
ಈ ಸಂಬಂಧ ಮಂಗಳವಾರ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ
ಕಾರ್ಯಕ್ರಮದಲ್ಲಿ ಈ ಸಮಿತಿಗಳ ರಚನೆ ಮಾಡಲಾಯಿತು. ಗೋಕಾಕ್‍ದಲ್ಲಿ
ನಡೆಯುವ ರೋಡ್ ಶೋ ಜವಾಬ್ದಾರಿಯನ್ನು ಅಥಣಿ ಶಾಸಕ ಲಕ್ಷ್ಮಣ ಸವದಿ
ಅವರಿಗೆ ವಹಿಸಲಾಗಿದೆ. ನಿಪ್ಪಾಣಿಯಲ್ಲಿ ನಡೆಯುವ ಮಹಿಳಾ ಸಮಾವೇಶದ
ಜವಾಬ್ದಾರಿಯನ್ನು ಬೆಳಗಾವಿ
ವಿಭಾಗದ ಪ್ರಭಾರಿ ಈರಣ್ಣ ಕಡಾಡಿ ಅವರಿಗೆ ವಹಿಸಲಾಗಿದೆ.
ಅದೆರೀತಿ ಬೆಳಗಾವಿಯಲ್ಲಿ ದಿನಾಂಕ 2 ರಂದು ಸಂಜೆ ನಡೆಯುವ ಜೈನ
ಸಮುದಾಯದ ಮುಖಂಡರೊಂದಿಗಿನ ಸಭೆಯ ಉಸ್ತುವಾರಿಯನ್ನು ರಾಜ್ಯಸಭಾ
ಸದಸ್ಯ ಪ್ರಭಾಕರ ಕೋರೆ ಅವರಿಗೆ ವಹಿಸಲಾಗಿದೆ. ಇದಕ್ಕೂ ಮುನ್ನ
ನಡೆಯುವ ವಿದ್ಯಾರ್ಥಿಗಳ ಜೊತೆಗಿನ ಸಂವಾದದ ಹೊಣೆಯನ್ನು ವಿಧಾನಪರಿಷತ್
ಸದಸ್ಯ ಮಹಾಂತೇಶ ಕವಟಗಿಮಠ ಅವರಿಗೆ ವಹಿಸಲಾಗಿದೆ.
ಕಿತ್ತೂರದಲ್ಲಿ ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಹಾಗೂ ನಂದಗಡದಲ್ಲಿ
ಸಂಗೊಳ್ಳಿ ರಾಯಣ್ಣನ ಸಮಾಧಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ
ಜವಾಬ್ದಾರಿಯನ್ನು ಶಾಸಕ ವಿಶ್ವನಾಥ ಪಾಟೀಲ ಹಾಗೂ ಸಂಜಯ ಪಾಟೀಲರಿಗೆ
ವಹಿಸಲಾಗಿದೆ ಎಂದು ಈರಣ್ಣ ಕಡಾಡಿ ತಿಳಿಸಿದರು.