ಬೆಳಗಾವಿ- ಮುಖಕ್ಕೆ ಮುಸುಕು ಹಾಕಿ ರಾತ್ರಿ ಹೊತ್ತು ಎಲ್ಲರೂ ಮಲಗಿರುವಾಗ ಮನೆ ಮುಂದೆ ನಿಲ್ಲಿಸಿದ ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿದ್ದ ಸೈಕೋ ಡಾಕ್ಟರ್ ನನ್ನು ಪತ್ತೆ ಮಾಡುವಲ್ಲಿ ಕೊನೆಗೂ ಬೆಳಗಾವಿಯ ಪೋಲೀಸರು ಯಶಸ್ವಿಯಾಗಿದ್ದಾರೆ
ಬೆಳಗಾವಿಯ ಜಾಧವ ನಗರದಲ್ಲಿ ರಾತ್ರೋ.ರಾತ್ರಿ ಏಳು ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗುತ್ತದ್ದ ಸೈಕೋ ಭೀಮ್ಸ ಆಸ್ಪತ್ರೆಯ ಡಾಕ್ಟರ್ ಎಂಬುದು ಗೊತ್ತಾಗಿದೆ
ಗುಲ್ಬರ್ಗ ಮೂಲದ ಡಾಕ್ಟರ್ ಅಮೀತ ಗಾಯಕವಾಡ ಎಂಬಾತನನ್ನು ಬೆಳಗಾವಿ ಪೋಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಈತನೇ ಕಾರಿಗೆ ಬೆಂಕಿ ಹಚ್ಚುತ್ತಿದ್ದ ಎಂದು ಹೇಳಲಾಗಿದೆ
ಜಾಧವ ನಗರದದಲ್ಲಿ ರಾತ್ರೋ ರಾತ್ರಿ ಏಳು ಕಾರುಗಳಿಗೆ ಬೆಂಕಿ ಹಚ್ಚಿದ ಘಟನೆ ಆದ ಬಳಿಕ ಬೆಳಗಾವಿ ಪೋಲೀಸ್ ಆಯುಕ್ತ ಡಿಸಿ ರಾಜಪ್ಪ ಅವರು ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಸಿ ತನಿಖೆ ಕೈಗೊಂಡಿದ್ದರು ತಂಡ ರಚಿಸಿದ 24 ಘಂಟೆಯೊಳಗೆ ಕಾರಿಗೆ ಬೆಂಕಿ ಹಚ್ಚುವ ಸೈಕೋ ಬಲೆಗೆ ಬಿದ್ದಿದ್ದಾನೆ
ಪೋಲೀಸರು ಸೈಕೋ ಡಾಕ್ಟರ್ ಅಮೀತ ಗಾಯಕವಾಡ ಎಂಬಾತನ ವಿಚಾರಣೆ ಮುಂದುವರೆಸಿದ್ದು ಯಾವ ಕಾರಣಕ್ಕಾಗಿ ಆತ ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದ ಎನ್ನುವ ವಿಷಯ ಇನ್ನೂ ಗೊತ್ತಾಗಿಲ್ಲ
ಪ್ರಕರಣದ ಕುರಿತು ಪೋಲೀಸ ಆಯುಕ್ತರು ಕೆಲವೇ ಘಂಟೆಗಳಲ್ಲಿ ಮಾದ್ಯಮಗಳಿಗೆ ಮಾಹಿತಿ ನೀಡುವ ನೀರೀಕ್ಷೆ ಇದೆ
ಮನೆ ಮುಂದೆ ನಿಲ್ಲಿಸಿದ ಕಾರುಗಳಿಗೆ ವಿನಾಕಾರಣ ಬೆಂಕಿ ಹಚ್ಚುತ್ತಿದ್ದ ಸೈಕೋ ಪೋಲೀಸರ ಬಲೆಗೆ ಬಿದ್ಸಿರುವ ವಿಷಯ ನಗರ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ