ಬೆಳಗಾವಿ-
ಉದ್ಯಮಿ ಆನಂದ ಚೋಪ್ರಾ ಕೊಲೆಗೆ ಯತ್ನ ಪ್ರಕರಣ ಬೇಧಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ
ಕೊಲೆ ಯತ್ನದಲ್ಲಿ ಭಾಗಿಯಾಗಿದ್ದ 3ಜನ ಆರೋಪಿಗಳ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ
1.ಮಂಜು ಪಚಾಂಗಿ(30)
2. ಸುನೀಲ್ ತಾರಿಹಾಲಾ(33) ಕಾರ್ಮಿಕ ಗುತ್ತಿಗೆದಾರ
3. ಬಸವರಾಜ್ ಅರ್ಮಾನಿ(33) ರೈತ
ಮೂರು ಜನ ಆರೋಪಿಗಳು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ನಿವಾಸಿಗಳಾಗಿದ್ದಾರೆ
ಹಣಕಾಸಿನ ವ್ಯವಹಾರದ ಕುರಿತು ಆನಂದ ಚೋಪ್ರಾ ಕೊಲೆಗೆ ಯತ್ನ ನಡೆದಿರುವದು ಗೊತ್ತಗಿದೆ ಈ ಕುರಿತು
ಪ್ರಮುಖ ಆರೋಪಿ ಮಂಜು ಪಚಾಂಗಿ ತಪ್ಪೋಪ್ಪಿಕೊಂಡಿದ್ದಾನೆ
ಆರೋಪಗಳನ್ನು ಇಂದು ಸಂಜೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿರುವ ಪೊಲೀಸರು
307ಸೆಕ್ಷನ್ ಅಡಿಯಲ್ಲಿ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ
ಜುಲೈ 28ರಂದು ರಾತ್ರಿ ಹತ್ತುಗಂಟೆಗೆ ಸವದತ್ತಿ ಪಟ್ಟಣದಲ್ಲಿ ಧಾರವಾಡ ಸವದತ್ತಿ ರಸ್ತೆಯಲ್ಲಿ ಮಾರಕಾಸ್ತ್ತಗಳಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು
ಸದ್ಯ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಆನಂದ ಚೋಪ್ರಾ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ
ಉದ್ಯಮಿ ಆನಂದ ಚೋಪ್ರಾ ಕೊಲೆಗೆ ಯತ್ನ ಖಂಡಿಸಿ ಸವದತ್ತಿ ಪಟ್ಟಣ ಬಂದ್ ಗೆ ಅವರ ಅಭಿಮಾನಿಗಳು ಕರೆ ನೀಡಿದ್ದಾರೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣ ಬಂದ್ ಗೆ ಕರೆ ನೀಡಿದ ಆನಂದ ಚೋಪ್ರಾ ಅಭಿಮಾನ ಬಳಗ
ಅಂಗಡಿ ಮುಂಗಟ್ಟು, ಶಾಲಾ ಕಾಲೇಜುಗಳು ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದು
ಬೆಳಗ್ಗೆ ಎಂಟು ಗಂಟೆಯಿಂದ ಸಂಜೆ ಆರು ಗಂಟೆವರೆಗೂ ಸವದತ್ತಿ ಪಟದಟಣ ವಹಿವಾಟು ಬಂದ್ ಆಗಲಿದೆ