ಬೆಳಗಾವಿಯಲ್ಲಿ ಬಿಜೆಪಿ ಸಂಕಟ ವಿಸ್ತರಣೆ, ನನಗೂ ಸ್ಥಾನ ಕೊಡಿ ಎಂದು ತಗಾದೆ ತೆಗೆದ ಶಾಸಕ ಮಾಮನಿ
ಬೆಳಗಾವಿ- ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುವ ಮೊದಲೇ ಬೆಳಗಾವಿಯಲ್ಲಿ ಬಿಜೆಪಿಯ ಸಂಕಟ ವಿಸ್ತರಣೆಯಾಗಿದೆ ಸವದತ್ತಿ ಯಲ್ಲಮ್ಮನ ಕ್ಷೇತ್ರದ ಶಾಸಕ ಆನಂದ ಮಾಮನಿ ನನಗೂ ಸದಥಾನ ಕೊಡಿ ,ಎಂದು ತಗಾದೆ ತೆಗೆದಿದ್ದಾರೆ ,ಹೀಗಾಗಿ ಬೆಳಗಾವಿಯಿಂದಲೇ ಭಿನ್ನಮತ ಸ್ಪೋಟವಾಗಿದೆ.
ಡೆಪ್ಯೂಟಿ ಸ್ಪೀಕರ್ ಹುದ್ದೆಗೆ ಆನಂದ್ ಮಾಮನಿ ಬೇಡಿಕೆ ಇಟ್ಟಿದ್ದು ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಬೆಳಗಾವಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ. ತಮಗೂ ಸೂಕ್ತ ಸ್ಥಾನಮಾನ ನೀಡುವಂತೆ ಸವದತ್ತಿ ಬಿಜೆಪಿ ಶಾಸಕ ಆನಂದ ಮಾಮನಿ ಒತ್ತಾಯಿಸಿದ್ದಾರೆ. ಈ ಬಗ್ಗೆ ದೂರವಾಣಿಯಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಶಾಸಕ ಆನಂದ್ ಮಾಮನಿ,’17 ಶಾಸಕರು ರಾಜೀನಾಮೆ ನೀಡಿದ್ದರಿಂದಲೇ ಬಿಜೆಪಿ ಸರ್ಕಾರ ಬಂದಿದೆ. ಅವರಿಗೆ ಸ್ಥಾನಮಾನ ನೀಡಲಿ ನಂದೇನೂ ಅಭ್ಯಂತರ ಇಲ್ಲ. ಆದ್ರೆ ನಾವೂ ಮೂರು ಬಾರಿ ಶಾಸಕರಾಗಿದ್ದೇವೆ ನಮ್ಮನ್ನು ಪರಿಗಣಿಸಲಿ ಎಂದಿದ್ದಾರೆ
ಮಂತ್ರಿ ಕೊಡದಿದ್ದರೂ ಪರವಾಗಿಲ್ಲ, ಡೆಪ್ಯೂಟಿ ಸ್ಪೀಕರ್ ಹುದ್ದೆಯಾದರೂ ಕೊಡಲಿ. ದೆಹಲಿ ವಿಶೇಷ ಪ್ರತಿನಿಧಿ ಸ್ಥಾನ ಅಥವಾ ಡೆಪ್ಯೂಟಿ ಸ್ಪೀಕರ್ ಸ್ಥಾನ ಕೊಡಲಿ’ ಅಂತಾ ರಾಜ್ಯ ಬಿಜೆಪಿ ನಾಯಕರಿಗೆ ಶಾಸಕ ಆನಂದ ಮಾಮನಿ ಒತ್ತಾಯಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ