ಬೆಳಗಾವಿ
ಮಹಾದಾಯಿ ನದಿ ನೀರಿವ ವಿವಾದವನ್ನು ನ್ಯಾಯಾಧೀಕರಣ ವ್ಯಾಪ್ತಿಯಾಚೆ ಪರಿಹರಿಸುವ ನಿಟ್ಟಿನಲ್ಲಿ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವಿವಾದ ಬಗೆ ಹರಿಸಿಕೊಳ್ಳುವುದಕ್ಕೆ ವೇದಿಕೆ ಸಿದ್ಧಪಡಿಸಲು ಯತ್ನಿಸುತ್ತೇನೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ವಿವಾದ ಪರಿಹಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೂಡ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಅವರದ್ದು ಕೂಡ ತಾತ್ವಿಕ ಒಪ್ಪಿಗೆ ಇದೆ. ಆದರೆ ಅಲ್ಲಿನ ಕಾಂಗ್ರೆಸ್ ಪಕ್ಷಗಳ ವಿರೋಧದ ಸಾಧ್ಯತೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರಾಸಕ್ತಿಯ ಪರಿಣಾಮ ವಿವಾದ ಪರಿಹಾರಗೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಇನ್ನೊಮ್ಮೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಪಢ್ನವಿಸ್ ಅವರೊಂದಿಗೆ ಚರ್ಚಿಸಿ ಮುಂಬೈನಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಆಯೋಜಿಸುವಂತೆ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.
ಸಿದ್ಧರಾಮಯ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದ ಅನಂತಕುಮಾರ್ ಬರ ಪರಿಹಾರ ವಿತರಣೆಗೆ ಕೇಂದ್ರ ಸರ್ಕಾರ 4500 ಕೋಟಿ ನೀಡಿದೆ. ಆದರೆ ರೈತರ ಬ್ಯಾಂಕ್ ಖಾತೆಗಳಿಲ್ಲ. ಆಧಾರ್ ಲಿಂಕ್ ಆಗಿಲ್ಲ ಎಂದು ಸಬೂಬು ಹೇಳುತ್ತ ಹಣವನ್ನು ತನ್ನ ಬಳಿ ಇಟ್ಟುಕೊಂಡಿದೆ. ಮೂರಕ್ಕೂ ಹೆಚ್ಚು ತಿಂಗಳಿನಿಂದ ಸಾವಿರಾರು ಕೋಟಿ ರೂಪಾಯಿ ರಾಜ್ಯದ ಖಜಾನೆಯಲ್ಲಿ ಬಿದ್ದಿದೆ ವಿನಃ ರೈತರ ಖಾತೆಗಳಿಗೆ ಜಮೆ ಆಗುತ್ತಿಲ್ಲ ಎಂದು ಆಪಾದಿಸಿದರು.
ರಾಜ್ಯಕ್ಕೆ ಮೊಟ್ಟಮೊದಲು ಬಾರಿಗೆ ಮಹಾರಾಷ್ಟ್ರ 5 ಟಿಎಂಸಿ ನೀರು ಬಿಡುಗಡೆ ಮಾಡಿದೆ ಇದಕ್ಕೆ ಕಾರಣ ಬಿಜೆಪಿ ಮುಖಂಡರು ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಪಡ್ನವಿಸ್ ಎಂದು ಹೇಳಿದ ಅವರು ಇಲ್ಲಿಯವರೆಗೆ ಮಹಾರಾಷ್ಟ್ರ ಒಂದು ಟಿಎಂಸಿ ಗಿಂತ ಹೆಚ್ಚು ನೀರು ಬಿಟ್ಟ ಉದಾಹರಣೆ ಇಲ್ಲ ಎಂದು ಹೇಳಿದರು.
ಯಾಳಗಿ ಇದು ಭಾರತದ ಏಕೈಕ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ
ದೇಶದಲ್ಲಿಯೇ ಅತಿ ಹೆಚ್ಚು ಹೋರಾಟಗಾರರನ್ನು ನೀಡಿದ ಬೆಳಗಾವಿ ಯಾಳಗಿ ಕುಟುಂಬದ ಸ್ವಾತಂತ್ರ್ಯ ಹೋರಾಟಗಾರರ ಸವಿನೆನಪಿಗಾಗಿ ಮಾಜಿ ಶಾಸಕ ಅಭಯ ಪಾಟೀಲ ಮಾರ್ಗದರ್ಶನದ ಪರಿವರ್ತನ ಸಮುದಾಯದಿಂದ ಅಟಲ್ ಬಿಹಾರಿ ವಾಜಪೇಯಿ ರಸ್ತೆಯಲ್ಲಿ ಯಾಳಗಿ ಕುಟುಂಬದ 16 ಸದಸ್ಯರ ಹೆಸರಿನಲ್ಲಿ ಗಿಡಗಳನ್ನು ನೆಡಲಾಗಿದ್ದು, ಕೇಂದ್ರ ಸಚಿವ ಅನಂತಕುಮಾರ್ ಅವರು ಸಸಿಗಳನ್ನು ನೆಟ್ಟು ಈ ಸಂದರ್ಭದಲ್ಲಿ ಯಾಳಗಿ ಕುಟುಂಬದ ಸ್ವಾತಂತ್ರ್ಯ ಹೋರಾಟಗಾರ ವಿಠಲ್ ಯಾಳಗಿ ಅವರನ್ನು ಸನ್ಮಾನಿಸಿದರು.