ಬೆಳಗಾವಿ -ವೀರರಾಣಿ ಕಿತ್ತೂರು ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕ್ರಾಂತಿಯ ನೆಲವಾಗಿರುವ ಬೆಳಗಾವಿಯ ರೈಲು ನಿಲ್ಧಾಣದ ಎದುರು ಛತ್ರಪತಿ ಶಿವಾಜಿ ಮಹಾರಾಜರ ಮತ್ತು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಎರಡು ಮೂರ್ತಿಗಳನ್ನು ಅನಾವರಣ ಮಾಡಬೇಕೆಂದು ಬೆಳಗಾವಿ ಮಾಜಿ ಶಾಸಕ ಅನೀಲ ಬೆನಕೆ ಅವರು ಬೆಂಗಳೂರಿನಲ್ಲಿ ರಾಜ್ಯ ರೇಲ್ವೆ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿ ಮಹಾನಗರದ ಸಂಸ್ಕೃತಿ ವಿಭಿನ್ನವಾಗಿದೆ, ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ, ಬೆಳಗಾವಿ ರೈಲು ನಿಲ್ಧಾಣದ ಕಾಂಟೋನ್ಮೆಂಟ್ ಏರಿಯಾದಲ್ಲಿ ಇದೆ. ನಿಲ್ಧಾಣದ ಸಮೀಪದಲ್ಲಿ ಮರಾಠಾ ಇನ್ ಫೆಂಟ್ರಿ ಇದೆ (MLIRC) ಇದೆ ಅದಕ್ಕಾಗಿ ಬೆಳಗಾವಿ ನಿಲ್ಧಾಣದ ಎದುರು ಛತ್ರಪತಿ ಶಿವಾಜಿ ಮಹಾರಾಜರ ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗಳನ್ನು ಅನಾವರಣ ಮಾಡಬೇಕು ಎಂದು ಅನೀಲ ಬೆನಕೆ ಅವರು ರೇಲ್ವೆ ಸಚಿವ ಸೋಮಣ್ಣ ಅವರಿಗೆ ಮನವರಿಕೆ ಮಾಡಿದ್ದಾರೆ.
ಯಾವುದೇ ಸರ್ಕಾರಿ ಕಟ್ಟಡ ಇರಲಿ, ಅಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಮಾಡಲೇಬೇಕು ಅದು ಕಡ್ಡಾಯವಾಗಿದೆ. ಡಾ. ಬಾಬಾಸೇಹೇಬ್ ಅಂಬೇಡ್ಕರ್ ಅವರ ಜೊತೆಯಲ್ಲಿ ಈಗ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ ಮಾಡುವ ಬೇಡಿಕೆಯನ್ನು ಮಾಜಿ ಶಾಸಕ ಅನೀಲ ಬೆನಕೆ ಅವರು ರೇಲ್ವೆ ಸಚಿವರ ಮುಂದೆ ಮಂಡಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗಳನ್ನು ಬೆಳಗಾವಿಯ ರೇಲ್ವೆ ನಿಲ್ಧಾಣದ ಉಗ್ರಾಣದಲ್ಲಿ ಇಡಲಾಗಿದೆ.ಇದರಿಂದ ತಪ್ಪು ಸಂದೇಶ ಹೋಗುತ್ತದೆ ಉಗ್ರಾಣದಲ್ಲಿ ಇಟ್ಟಿರುವ ಮೂರ್ತಿಗಳನ್ನು ಕೂಡಲೇ ಅನಾವರಣ ಮಾಡಬೇಕೆಂದು ಅನೀಲ ಬೆನಕೆ ರೇಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.
ದಿವಂಗತ ಸುರೇಶ್ ಅಂಗಡಿ ಅವರು ಬೆಳಗಾವಿ ರೇಲ್ವೆ ನಿಲ್ಧಾಣವನ್ನು ಅಭಿವೃದ್ಧಿಪಡಿಸಿ ಈ ನಿಲ್ಧಾಣ ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕ್ರಾಂತಿಕಾರಿ ಇತಿಹಾಸ ಬಿಂಬಿಸುವ ವಿನ್ಯಾಸ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.
ಬೆಳಗಾವಿಯ ರೇಲ್ವೆ ನಿಲ್ಧಾಣಕ್ಕೆ ಬೆಳಗಾವಿಯ ಪ್ರಸಿದ್ಧ ನಾಗನೂರುಮಠದ ಡಾ. ಶಿವಬಸವ ಮಹಾಸ್ವಾಮಿಗಳ ಹೆಸರು ನಾಮಕರಣ ಮಾಡಬೇಕು ಎನ್ನುವ ಬೇಡಿಕೆಯೂ ಇದೆ. ಈ ಬೇಡಿಕೆ ಈಡೇರಿಸುವಂತೆ ಯಾರು ರೇಲ್ವೆ ಸಚಿವರಿಗೆ ಮನವಿ ಮಾಡ್ತಾರೋ ಅನ್ನೋದನ್ನು ಕಾದು ನೋಡಬೇಕಾಗಿದೆ.