ಪೌರ ಕಾರ್ಮಿಕರ ಕುರಿತು ಶಾಸಕ ಅನೀಲ ಬೆನಕೆ ಕಳಕಳಿ
ಬೆಳಗಾವಿ- ಕರೋನಾ ವೈರಸ್ ಹರಡದಂತೆ ಬೆಳಗಾವಿ ಮಹಾನಗರ ಪಾಲಿಕೆ ಕೈಗೊಂಡಿರುವ ಮುಂಜಾಗೃತಾ ಕ್ರಮಗಳ ಕುರಿತು ಶಾಸಕ ಅನೀಲ ಬೆನಕೆ ಪ್ರಗತಿ ಪರಶೀಲನೆ ನಡೆಸಿದರು
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು ,ಬೆಳಗಾವಿ ಮಹಾನಗರದಲ್ಲಿ ನೂರಾರು ಪೌರ ಕಾರ್ಮಿಕರು ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವದು ಪಾಲಿಕೆಯ ಜವಾಬ್ದಾರಿ ,ನಗರವನ್ನು ಸ್ವಚ್ಛ ಗೊಳಿಸಿ ಜನರ ಆರೋಗ್ಯ ಕಾಪಾಡುತ್ತಿರುವ ಪೌರ ಕಾರ್ಮಿಕರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು,ಕೂಡಲೇ ಪೌರ ಕಾರ್ಮಿಕರಿಗೆ ಸುರಕ್ಷತಾ ಉಪಕರಣಗಳನ್ನು ಒದಗಿಸಬೇಕೆಂದು ಶಾಸಕ ಅನೀಲ ಬೆನಕೆ,ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ಬೆಳಗಾವಿ ನಗರದ ಕಸ ವಿಲೇವಾರಿ,ಮತ್ತು ಕಸ ಸಂಗ್ರಹಣೆ ಮಾಡುತ್ತಿರುವ ಗುತ್ತಿಗೆದಾರರ ಬಳಿ ದುಡಿಯುತ್ತಿರುವ ಕಾರ್ಮಿಕರಿಗೂ ಸುರಕ್ಷತಾ ಕವಚ ಹಾಗು ಎಲ್ಲ ರೀತಿಯ ಸೇಪ್ಟಿ ಐಟಂ ಗಳನ್ನು ಒದಗಿಸುವಂತೆ ಗುತ್ತಿಗೆದಾರರಿಗೂ ಕಟ್ಟು ನಿಟ್ಟಿನ, ಸೂಚನೆ ನೀಡಬೇಕೆಂದು ಅನೀಲ ಬೆನಕೆ ,ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದ್ರು
ಬೆಳಗಾವಿ ನಗರದಲ್ಲಿ ಕರೋನಾ ಕುರಿತು ಜನರಲ್ಲಿ ಆತಂಕ ಮೂಡುವ ರೀತಿಯಲ್ಲಿ ಅಧಿಕಾರಿಗಳು ದುಡುಕದೇ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ತಿಳುವಳಿಕೆ ಹೇಳಬೇಕು, ರಸ್ತೆ ಪಕ್ಕದ ತಿಂಡಿ ತಿನಿಸುಗಳಿಗೆ ಬ್ರೆಕ್ ಹಾಕಬೇಕು,ಹೊಟೇಲ್ ಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅನೀಲ ಬೆನಕೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತರು,ಆರೋಗ್ಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.