Breaking News

ಬೆಳಗಾವಿ RTO ಕಚೇರಿಗಾಗಿ ಯಮನಾಪೂರದಲ್ಲಿ 4 ಎಕರೆ ಜಾಗೆ ಮಂಜೂರು

ಬೆಳಗಾವಿ- ಬೆಳಗಾವಿಯ ಆರ್ ಟಿ ಓ ಕಚೇರಿ ನಿರ್ಮಿಸಲು ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಯಮನಾಪೂರ ಗ್ರಾಮದಲ್ಲಿ ನಾಲ್ಕು ಎಕರೆ ಜಾಗೆಯನ್ನು ಮಂಜೂರು ಮಾಡಿಸಲಾಗಿದೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರ್ ಶಾಸಕ ಅನೀಲ ಬೆನಕೆ ತಿಳಿಸಿದ್ದಾರೆ.

ಬೆಳಗಾವಿಯ ಆರ್ ಟಿ ಓ ಕಚೇರಿ ಆವರಣದಲ್ಲಿ ಅಂಚೆ ಕಚೇರಿಯ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಯಮನಾಪೂರ ಗ್ರಾಮದಲ್ಲಿ ಜಾಗೆ ಮಂಜೂರು ಮಾಡಿಸುವ ಸಂಧರ್ಭದಲ್ಲಿ ಅನೇಕ ಸಮಸ್ಯೆಗಳು ಎದುರಾಗಿದ್ದವು,ಎಲ್ಲ ಸಮಸ್ಯೆಗಳನ್ನು ನಿವಾರಿಸಿ ಜಾಗೆ ಮಂಜೂರು ಮಾಡಲಾಗಿದೆ,ಕೂಡಲೇ ಹೊಸ ಕಚೇರಿ ನಿರ್ಮಾಣಕ್ಕೆ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಬೇಕು ಎಂದು ಶಾಸಕ ಅನೀಲ ಬೆನಕೆ RTO ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

ಕಣಬರ್ಗಿ ಗ್ರಾಮದಲ್ಲಿ ಡ್ರಾವ್ಹಿಂಗ್ ಲೈಸನ್ಸ್ ಕೊಡುವದಕ್ಕಾಗಿಯೇ ಟೆಸ್ಟ್ ಮಾಡಲು ಸುಸಜ್ಜಿತವಾದ ಟ್ರ್ಯಾಕ್ ನಿರ್ಮಿಸಲಾಗುತ್ತಿದೆ. 823 ಲಕ್ಷ ರೂ ವೆಚ್ಚದಲ್ಲಿ ಈ ವ್ಯೆವಸ್ಥೆ ಮಾಡಲಾಗುತ್ತಿದೆ.ಶೇ 80 ರಷ್ಟು ಕೆಲಸ ಮುಗಿದಿದೆ ಉಳಿದ ಕೆಲಸವನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಸೇವೆಗೆ ಸಮರ್ಪಿಸಬೇಕು ಎಂದು ಅನೀಲ ಬೆನಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು
ಆರ್ ಟಿ ಓ ಮಗದುಮ್ ಅವರು ಮಾತನಾಡಿ,ಬೆಳಗಾವಿಯ ಆರ್ ಟಿ ಓ ಕಚೇರಿಯಲ್ಲಿ ಅಂಚೆ ಕಚೇರಿ ಆರಂಭಿಸಿದ್ದೇವೆ,ಸಾರ್ವಜನಿಕರ ಲೈಸನ್ಸ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಡಿಸ್ ಪ್ಯಾಚ್ ಮಾಡಲು ಅನಕೂಲವಾಗಲಿದೆ ಎಂದು ಮಗದುಮ್ ಹೇಳಿದ್ರು
ಈ ಸಂಧರ್ಭದಲ್ಲಿ ಅಂಚೆ ಕಚೇರಿಯ ಅಧಿಕಾರಿಗಳು ಉಪಸ್ಥಿತರಿದ್ದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *